ಈ ದೇಶಕ್ಕೆ ಹಿಡಿದಿರುವ ಶನಿ ಎಂದರೆ ಅದು ಮೋದಿ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ ಅಂತಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಾಲಿಗೆ ಹರಿಬಿಟ್ಟಿದ್ದಾರೆ.ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಪರ ಪ್ರಚಾರ ಸಭೆಯಲ್ಲಿ ಮಾತಾಡಿದ ಅವರು, ದೇವೇಗೌಡ ನೆರಳಿಗೆ ಹೋಗಿ ಬದುಕಿ ಚೆನ್ನಾಗಿ ಆದವರು ಯಾರೂ ಇಲ್ಲ. ಚೆನ್ನಾಗಿ ಬದುಕಿದವರಿಗೇನು ಈ ಗತಿ ಬಂತು ಎಂದು ನನಗೆ ದುಃಖ. ಇರಲಿ ಅಂತ ರೈತನ ಮಗ ಎಂದು ಪ್ರಧಾನಿ ಮಾಡಿದ್ದೆವು. ಆತನ ಮಗ ಮುಖ್ಯಮಂತ್ರಿಯಾಗಿದ್ದ. ಇವರು ಸೇರಿದ್ದು ಬಿಜೆಪಿ ಜೊತೆಗೆ. ಒಬ್ಬ ಮಾಜಿ ಪ್ರಧಾನ ಮಂತ್ರಿ, ಒಬ್ಬ ಮಾಜಿ ಮುಖ್ಯಮಂತ್ರಿ, ಮೂರು ಸೀಟುಗಳನ್ನ ತೆಗೆದುಕೊಂಡಿದಾರೆ ಈ ಬಾರಿ. ಅದರಲ್ಲೂ ಒಂದು ಮಗನಿಗೆ ಇನ್ನೊಂದು ಮೊಮ್ಮಗನಿಗೆ. ಅಳಿಯನನ್ನ ನಿಮ್ಮ ಲೆಕ್ಕದಲ್ಲಿ ಕೊಡಿ ಎಂದು ಅಲ್ಲಿಗೆ ಕಳಿಸಿದ್ದರು. ಇವರ ಹಣೆಬರಹಕ್ಕೆ ಅವರ ಬಳಿ ಹೋಗಿ ಸಲಾಂ ಹೊಡೆಯುತ್ತಿದ್ದಾರೆ ಎಂದರು.
ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ. ಜೂನ್ 4ಕ್ಕೆ ನಾವು ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ಆ ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಇಂದಿರಾ ಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತುಬಿಟ್ಟೆ. ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು ಇಂದಿರಾ ಗಾಂಧಿ. ಎಂತಹವರ ಜಾಗಕ್ಕೆ ಎಂತಹವನು ಬಂದು ಕೂತಿದ್ದಾನೆ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೆವು. ಪ್ರಧಾನಿ ಸುಳ್ಳು ಹೇಳೊದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಬರುತ್ತೆ ಗೌತಮ್ ಗೆದ್ದೆ ಗೆಲ್ಲುತ್ತಾನೆ ಎಂದು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ