ಕೊಪ್ಪಳ : ಪ್ರಧಾನಿ ಮೋದಿ ಈಗ ಜನರನ್ನು ಕಂಡರೆ ಸಾಕು. ಕೈ ಬೀಸುತ್ತಾರೆ. ಆದರೆ ಮೋದಿಯವರ ಚಾರ್ಮ್ ಈಗ ಕಡಿಮೆಯಾಗಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬೊಮ್ಮಾಯಿ ಮುಖ ಬೇಕಿಲ್ಲ. ಅದಿಕ್ಕೆ ಮೋದಿ ಮುಖ ತೋರಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವ ವಿಚಾರವಾಗಿಯೂ ಮಾತನಾಡಿದ ಅವರು, ಪಿಎಫ್ಐ ಅಥವಾ ಬಜರಂಗದಳ ನಿಷೇಧ ಮಾಡೋದ್ರಿಂದ ಲಾಭವೇನಿದೆ..? ಬಜರಂಗದಳದಲ್ಲಿರುವ ಹಿಂದುಳಿದ ವರ್ಗಗಳ ಮಕ್ಕಳಿಗೆ ಭಾವನಾತ್ಮಕ ವಿಚಾರವನ್ನು ಮೆದುಳಿಗೆ ತುರುಕಿ ಅವರಿಂದ ವಿವಿಧ ಚಟುವಟಿಕೆಗಗೆ ತೊಡಗಿಸುವ ಕಾರ್ಯವಾಗ್ತಿದೆ ಎಂದಿದ್ದಾರೆ.
ರೈತರ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ರಸಗೊಬ್ಬರ ದರ ಏರಿಕೆ ಮಾಡಿ ರೈತರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಇದಾದ ಬಳಿಕ ಕಿಸಾನ್ ಸಮ್ಮಾನ್ ಯೋಜನೆ ನೀಡಿದ್ರೆ ಅದರಿಂದ ಲಾಭವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.







