ಹೆಚ್ಚು ಜನಕ್ಕೆ ಇತ್ತೀಚಿನ ದಿನಗಳಲ್ಲಿ ಕಾಡ್ತ ಇರುವಂತ ಒಂದು ಕಾಯಿಲೆ ಅಥವಾ ಜ್ವರ ಅಂದ್ರೆ ಡೆಂಗ್ಯೂ..ಡೆಂಗ್ಯೂ ಬರುವುದಕ್ಕೆ ಪ್ರಮುಖ ಕಾರಣ ಸೊಳ್ಳೆ..ವೆದರ್ ಚೇಂಜ್ ಆದ ಹಾಗೆ ಸೊಳ್ಳೆಗಳು ಜಾಸ್ತಿ ಆಗುತ್ತವೆ..ಮಳೆಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು..ಸೊಳ್ಳೆಗಳು ಕಚ್ಚಿದ್ರೆ ಮಲೇರಿಯ ಕೂಡ ಬರುತ್ತದೆ..ಸೊಳ್ಳೆಗಳನ್ನು ಅವಾಯ್ಡ್ ಮಾಡಲು ಕಾಯ್ಲ್ ನ ಬಳಸ್ತಿವಿ,ಬ್ಯಾಟ್ ಯೂಸ್ ಮಾಡ್ತೀವಿ,ಕಾಯ್ಲ್ ಬಳಸುವುದರಿಂದ ನಮ್ಮ ಆರೋಗ್ಯಕ್ಕು ಹಾನಿ..ಅದರ ಸ್ಮೆಲ್ ಕೂಡ ಎಷ್ಟು ಜನಕ್ಕೆ ಆಗುವುದಿಲ್ಲ..ಇದರ ಬದಲು ಮನೆಯಲ್ಲಿ ಕೆಲವು ಗಿಡಗಳನ್ನು ಬಳಸುವುದರಿಂದ ಸೊಳ್ಳೆಗಳು ಕಡಿಮೆಯಾಗುತ್ತದೆ..
ಚಂಡು ಹೂವು
ಚಂಡು ಹೂವು ಸುಲಭವಾಗಿ ಬೆಳೆಯುವ ವಾರ್ಷಿಕ ಹೂವು.ಇದರ ಪರಿಮಳಕ್ಕೆ ಸೊಳ್ಳೆಗಳು ದೂರವಾಗುತ್ತದೆ.. ಅವುಗಳನ್ನು ಪಾಟ್ ಅಲ್ಲಿ ಸುಲಭವಾಗಿ ಬೆಳೆಸಬಹುದು.. ನಿಮ್ಮ ಒಳಾಂಗಣದಲ್ಲಿ ಅಥವಾ ನಿಮ್ಮ ಮನೆಯ ಎಂಟ್ರೆನ್ಸ್ ಬಳಿ ಇರಿಸಿ. ಇದರಿಂದ ಸೊಳ್ಳೆಗಳು ಕಡಿಮೆಯಾಗುತ್ತದೆ..
ಲ್ಯಾವೆಂಡರ್
ಈ ಲ್ಯಾವೆಂಡರ್ ಎಲೆಗಳ ಪರಿಮಳ ಅದ್ಭುತ..ಇದರಿಂದ ಸಾಕಷ್ಟು ಬತ್ತಿಗಳು ಹಾಗೂ ತೈಲವನ್ನು ತಯಾರಿಸುತ್ತಾರೆ..ಈ ಗಿಡವನ್ನು ಬೆಳೆಸುವುದರಿಂದ ಇದರ ಘಮಕ್ಕೆ ಸೊಳ್ಳೆಗಳು ದೂರ ಹೋಗುತ್ತವೆ..ಸೊಳ್ಳೆಗಳು ಹೆಚ್ಚಾದಾಗ ಇದರ ಬತ್ತಿಯನ್ನು ಕೂಡ ಬಳಸಬಹುದು..
ರೋಸ್ಮೇರಿ
ಈ ಗಿಡವು ಕೂಡ ಸೊಳ್ಳೆಗಳನ್ನು ಶಮನ ಮಾಡುವುದಕ್ಕೆ ತುಂಬಾನೆ ಸಹಾಯಕಾರಿ..ಈ ಗಿಡದ ಎಲೆಗಳನ್ನು ಒಣಗಿಸಿ ಸುಟ್ಟರೆ..ಅದರಿಂದ ಹರಡುವ ಪರಿಮಳಕ್ಕೆ ಸೊಳ್ಳೆಗಳು ಕಡಿಮೆಯಾಗುತ್ತದೆ..ಹಾಗೂ ಇತರೆ ಹುಳಹಪ್ಪಟೆಗಳು ಕಡಿಮೆಯಾಗುತ್ತದೆ..
ಸಿಟ್ರೊನೆಲ್ಲಾ ಗ್ರಾಸ್
ಈ ಗಿಡದ ಸುವಾಸನೆ ಅದ್ಭುತವಾಗಿರುತ್ತದೆ.ಆದ್ರೆ ಇದು ಸೊಳ್ಳೆಗಳಿಗೆ ಆಗುವುದಿಲ್ಲ..ಈ ಗಿಡವನ್ನು ಮಾಸ್ಕಿಟೋ ಪ್ಲಾಂಟ್|ಗ್ರಾಸ್ ಅಂತಾನೂ ಕರಿತಾರೆ..ಮನೆಯಲ್ಲಿ ಈ ಗಿಡವನ್ನ ಬೆಳೆಸುವುದು ತುಂಬಾ ಸುಲಭ..
ಒಟ್ಟಿನಲ್ಲಿ ಈ ಗಿಡಲನ್ನು ಬೆಳೆಸುವುದರಿಂದ ಮಕ್ಕಳಿಗಾಗಲಿ ,ಪ್ರಾಣಿಗಳಿಗಾಗಲಿ ಯಾವ್ದೆ ರೀತಿ ಹಾನಿ ಇರುವುದಿಲ್ಲ..ಸೊಳ್ಳೆಗಳನ್ನು ದೂರ ಮಾಡುವುದಕ್ಕೆ ತುಂಬಾನ ಸಹಾಯಕಾರಿ..