ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೊಮ್ಮೆ ತೈಲದ ಬೆಲೆ ಹೆಚ್ಚಾಗಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 97.50 ರೂ. ಅದೇ ಸಮಯದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 88.23 ರೂಪಾಯಿ ಆಗಿದೆ.
ಇಂದು ಪೆಟ್ರೋಲ್ ಬೆಲೆ 27 ಪೈಸೆ ಮತ್ತು ಡೀಸೆಲ್ ಲೀಟರ್ಗೆ 26 ಪೈಸೆ ಹೆಚ್ಚಾಗಿದೆ.
ಅನೇಕ ನಗರಗಳಲ್ಲಿ 100 ರೂಪಾಯಿ ದಾಟಿದ ಪೆಟ್ರೋಲ್ ಬೆಲೆ
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ನಗರಗಳು ಮತ್ತು ಪಟ್ಟಣಗಳಲ್ಲಿ, ಪೆಟ್ರೋಲ್ ದರ ಈಗಾಗಲೇ ಲೀಟರ್‌ಗೆ 100 ರೂಪಾಯಿ ತಲುಪಿದೆ.
ಇಂದು ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 103.63 ರೂ ಮತ್ತು ಡೀಸೆಲ್ ಬೆಲೆ ಲೀಟರ್ಗೆ 95.72 ರೂ. ಅದೇ ಸಮಯದಲ್ಲಿ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 98.65 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ 92.83 ರುಪಾಯಿ ಆಗುದೆ.
ಮೇ 1 ಮತ್ತು ಜೂನ್ 22 ರ ನಡುವೆ ಪೆಟ್ರೋಲ್ ಬೆಲೆ 28 ಬಾರಿ ಹೆಚ್ಚಳ.!
ಮೇ 1 ರಿಂದ ಇಲ್ಲಿಯವರೆಗೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 28 ಬಾರಿ ಹೆಚ್ಚಿಸಲಾಗಿದೆ. 28 ಬಾರಿ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 7.18 ರೂ. ಅಂತೆಯೇ, ಡೀಸೆಲ್ ಪ್ರತಿ ಲೀಟರ್ಗೆ 7.45 ರೂ. ಹೆಚ್ಚಳವಾಗಿದೆ.






