ಕರೋನಾ ಸಂಕಷ್ಟದ ನಡುವೆಯೇ ಈಗ ಜನಸಾಮಾನ್ಯರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿತಟ್ಟಿದೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಬುಧವಾರದ ವೇಳೆಗೆ ಬೆಲೆ ಗರಿಷ್ಟ ಮಟ್ಟಕ್ಕೆ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 25 ಪೈಸೆ ಏರಿಕೆಯಾದರೆ, ಡೀಸೆಲ್ ಬೆಲೆಯಲ್ಲಿಯೂ 25 ಪೈಸೆ ಹೆಚ್ಚಾಗಿದೆ. ಈ ತಿಂಗಳಲ್ಲಿ ಏಳು ಬಾರಿ ಇಂಧನ ಬೆಲೆಯಲ್ಲಿ ಹೆಚ್ಚಳವಾಗಿದೆ.
ಕಳೆದವಾರ ಸತತ 4 ದಿನಗಳವರೆಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ವಾರಾಂತ್ಯದಲ್ಲಿ ಬೆಲೆ ಸ್ಥಿರವಾಗಿತ್ತು. ಇದೀಗ ಸೋಮವಾರದಿಂದ ಮತ್ತೆ ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ನ ಬೆಲೆ ಏರಿಕೆಯಾಗಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.
ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100.8 ರೂ ದಾಟಿದರೆ, ಡೀಸೆಲ್ ಬೆಲೆ 90.95 ರೂ ಆಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗ 92.05 ರೂ, ಡೀಸೆಲ್ ಬೆಲೆ 82.61 ರೂ ಆಗಿದೆ. ಕೋವಿಡ್ 2ನೇ ಅಲೆ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ತೈಲ ಬೆಲೆ ಏರಿಕೆಯಿಂದ, ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತೆ. ಇದರ ಪರಿಣಾಮ ಸಾಮಾನ್ಯ ಜನರ ಮೇಲೆ ಬೀಳಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಈಗಿನ ಪೆಟ್ರೋಲ್, ಡೀಸೆಲ್ ದರ
ಮುಂಬೈ – ₹98.36 per litre –₹ 89.75 per litre
ಚೆನ್ನೈ – ₹93.84 per litre ₹87.49 per litre
ಕೋಲ್ಕತ್ತಾ – ₹92.16 per litre ₹85.45 per litre
ಪುಣೆ – ₹98.00 per litre ₹88.03 per litre
ಬೆಂಗಳೂರು – ₹95.11 per litre ₹87.57 per litre
ಹೈದರಬಾದ್ – ₹95.67 per litre ₹90.06 per litre
ಭೂಪಾಲ್ – ₹100.08 per litre ₹90.05 per litre