• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗುಜರಾತ್‌ನಲ್ಲಿ ಇಂಧನಕ್ಕೆ ಪರದಾಟ : “ನೋ ಸ್ಟಾಕ್‌” ಬೋರ್ಡ್ ಕಂಡು ಕಂಗಾಲಾದ ವಾಹನ ಸವಾರರು..

ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್, ದೇವಭೂಮಿ ದ್ವಾರಕಾದ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನ ಸವಾರರಿಂದ ಉದ್ದನೆಯ ಸರತಿ ಸಾಲು..

ಪ್ರತಿಧ್ವನಿ by ಪ್ರತಿಧ್ವನಿ
March 24, 2026
in Top Story, ಇದೀಗ, ದೇಶ, ರಾಜಕೀಯ
0
ಗುಜರಾತ್‌ನಲ್ಲಿ ಇಂಧನಕ್ಕೆ ಪರದಾಟ : “ನೋ ಸ್ಟಾಕ್‌” ಬೋರ್ಡ್ ಕಂಡು ಕಂಗಾಲಾದ ವಾಹನ ಸವಾರರು..
Share on WhatsAppShare on FacebookShare on Telegram

ಅಹಮದಾಬಾದ್ : ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ದೇಶದಲ್ಲಿ ಇಂಧನ ಕೊರತೆಯ ಸುದ್ದಿಗಳಿಂದ ಜನರು ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಯುದ್ಧದ ಕಾರಣಕ್ಕೆ ಪೆಟ್ರೋಲ್‌, ಡಿಸೇಲ್‌ಗಳು ಸಿಗುವುದು ಕಷ್ಟವಾಗುತ್ತದೆ. ಬಂಕ್‌ಗಳಲ್ಲಿ ಅವುಗಳು ಸ್ಟಾಕ್‌ ಇಲ್ಲ ಎಂಬ ವದಂತಿಯಿಂದ ರಾತೋರಾತ್ರಿ ಜನರು ಶಾಕ್‌ಗೆ ಒಳಗಾಗಿದ್ದಾರೆ.

ADVERTISEMENT
KAS Officer Sangamesh Upase : ಈಗಿನ ಎಜುಕೇಶನ್ ಸಿಸ್ಟಮ್  ಹೇಗಾಗಿದೆ ಗೊತ್ತ..? #pratidhvani #sangameshupase

 ಹೀಗಾಗಿ ಗುಜರಾತ್‌ನ ಹಲವಾರು ನಗರಗಳಲ್ಲಿ ಇಂಧನ ಕೊರತೆಯ ಭೀತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿಗೆ ಜನರು ಮುಂದಾಗಿದ್ದಾರೆ. ಇಂಧನ “ಸ್ಟಾಕ್ ಇಲ್ಲ” ಎಂಬ ಬೋರ್ಡ್‌ಗಳನ್ನು ಅನೇಕ ಬಂಕ್‌ಗಳ ಮುಂದೆ ಅಳವಡಿಸಲಾಗಿತ್ತು.

ಈ ಕಾರಣಕ್ಕಾಗಿಯೇ ಪ್ರಮುಖವಾಗಿ ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್ ಮತ್ತು ದೇವಭೂಮಿ ದ್ವಾರಕಾದ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು. ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ಜಾಗತಿಕ ಪೂರೈಕೆಯ ವ್ಯತ್ಯಯದಿಂದ ಕೆಲವು ಬಂಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು, ಆದರೂ ಸಹ ಜನರು ಬಂಕ್‌ಗಳ ಮುಂದೆ ಸಾಲಿನಲ್ಲಿ ನಿಂತು ಇಂಧನ ಖರೀದಿಗೆ ಮುಗಿಬೀಳುತ್ತಿದ್ದಾರೆ. 

ಇದನ್ನೂ ಓದಿ : ಹಿಂದೂ ಧರ್ಮದ ಬಗ್ಗೆ ಅನಂತಕುಮಾರ ಹೆಗಡೆ ಹೇಳಿಕೆ: ಜಾತ್ಯತೀತತೆ ಕುರಿತಾಗಿ ಕಿಡಿ

ಅಹಮದಾಬಾದ್‌ನಲ್ಲಿ ಸುಮಾರು 10 ಪೆಟ್ರೋಲ್ ಪಂಪ್‌ಗಳು ಪೂರೈಕೆ ವಿಳಂಬವನ್ನು ಎದುರಿಸಿದರೆ, ವಡೋದರಾದಲ್ಲಿ, ಖಾಸಗಿ ಪಂಪ್‌ಗಳತ್ತ ಲಭ್ಯತೆ ಕಡಿಮೆಯಾಗುವುದರಿಂದ ವಾಹನ ಸವಾರರು ಸರ್ಕಾರಿ ಬಂಕ್‌ಗಳತ್ತ ಮುಖಮಾಡಿದ್ದಾರೆ. ಇದರಿಂದಾಗಿ ಬಂಕ್‌ಗಳ ಮುಂದೆ ಕಿಲೋ ಮೀಟರ್‌ಗಟ್ಟಲೇ ಜನಸಂದಣಿ ನಿರ್ಮಾಣವಾಗಿತ್ತು.

ಸೂರತ್‌ನಲ್ಲಿ ಪೂರೈಕೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ವಿತರಣೆಗಳು ದಿನಕ್ಕೆ ಮೂರು ಟ್ಯಾಂಕರ್‌ಗಳಿಂದ ಒಂದು ಅಥವಾ ಎರಡಕ್ಕೆ ಇಳಿದಿವೆ. ಕೈಗಾರಿಕಾ ಬಳಕೆದಾರರಿಂದ ಹೆಚ್ಚಿನ ಖರೀದಿಯು ಚಿಲ್ಲರೆ ಲಭ್ಯತೆಗೆ ಹೊಡೆತ ನೀಡಿದೆ. ರಾಜ್‌ಕೋಟ್‌ನಲ್ಲಿಯೂ ಇದೇ ರೀತಿಯ ದೃಶ್ಯಗಳು ಸಾಮಾನ್ಯವಾಗಿವೆ, ಆದರೂ ನಮ್ಮಲ್ಲಿ ಇಂಧನ ಸ್ಟಾಕ್ ಇದೆ, ಸಮಸ್ಯೆಯಿಲ್ಲ ಎಂದು ಡೀಲರ್‌ಗಳು ಹೇಳಿದ್ದಾರೆ.

ಇನ್ನೂ ದೇವಭೂಮಿ ದ್ವಾರಕಾದಲ್ಲಿ, ವಾರಾಂತ್ಯದಲ್ಲಿ ಭಾರೀ ಪ್ರವಾಸಿಗರ ಆಗಮನದ ಹಿನ್ನೆಲೆಯಲ್ಲಿ ಪ್ರಮುಖ ಬಂಕ್‌ಗಳಲ್ಲಿ ಇಂಧನ ಅಭಾವ ತೀವ್ರ ಕಂಡು ಬಂದಿದೆ.

ಇಂಧನ ಖಾಲಿಯಾಗಿಲ್ಲ, ಸಾಗಣೆ ವಿಳಂಬದಿಂದ ಸಮಸ್ಯೆ..

ಇನ್ನೂ ಈ ಬಿಕ್ಕಟ್ಟು ಕೇವಲ ಸಾಗಣೆಯ ವಿಳಂಬದಿಂದ ಆಗಿದೆ, ಆದರೆ ಇಂಧನ ಖಾಲಿಯಾಗಿಲ್ಲ. ಬ್ಯಾಂಕ್ ರಜಾದಿನಗಳಿಂದಾಗಿ ಹಣ ಪಾವತಿ ವಿಳಂಬವೇ ಈ ಅಡಚಣೆಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂಧನ ಸರಬರಾಜುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಅಡಚಣೆಯಾಗದಂತೆ ಎಂದು ಕೇಂದ್ರವು ಭರವಸೆ ನೀಡಿದೆ. ಅಲ್ಲದೆ ಈ ಪರಿಸ್ಥಿತಿ ತಾತ್ಕಾಲಿಕವಾಗಿದ್ದು ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಯಾವುದೇ ರೀತಿಯ ಇಂಧನ ಕೊರತೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಸಹ ಜನರಲ್ಲಿನ ಆತಂಕ ದೂರವಾಗಿಲ್ಲ.

Tags: AhmedabadBike HoldersBjp GujaratdieselDwaraka NagarGovernment of GujaratGovernment of Indiagujrarat Newsiran israel warMiddle East TentionsNarendra ModiNo Stock BoardPeople PanicPetrol BunkPratidhvaniRumoursSuratVadodara
Previous Post

 ಯುದ್ಧದ ಪರಿಣಾಮ: ಬಿಹಾರದಲ್ಲಿ 400ಕ್ಕೂ ಹೆಚ್ಚು ಮದುವೆಗಳಿಗೆ ‘ವರ’ನಿಲ್ಲದೆ ಸಮಸ್ಯೆ

Next Post

ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ : ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್‌..!

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
Next Post
ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ : ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್‌..!

ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ : ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್‌..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada