
ಪಿರಿಯಾಪಟ್ಟಣ : ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಬಲೀಕರಣವಾಗಬೇಕಾಗಿದೆ ಎಂದು ಮೈಸೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ವಿ.ಆರ್. ಶೈಲಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಡಿ.ದೇವರಾಜ್ ಅರಸು ಸಮುದಾಯ ಭವನದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಯುಗಾದಿ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಮಹಿಳೆ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಿ ಮಾತನಾಡಿದರು.

ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಬಲೀಕರಣವಾಗಬೇಕು. ಇಂದಿಗೂ ಕೂಡ ಮಹಿಳೆಯರ ಮೇಲಿನ ತಾರತಮ್ಯ ಮತ್ತು ದೌರ್ಜನ್ಯಗಳು ನಡೆಯುತಲಿದೆ ಇದು ಬೇಸರದ ಸಂಗತಿಯಾಗಿದೆ. ಪ್ರತಿಯೊಬ್ಬ ಪೋಷಕರು ಕೂಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿಸಬೇಕು. ಕುಟುಂಬದಲ್ಲಿ ಮೊದಲು ಮಹಿಳಾ ಗೌರವವನ್ನು ಕಲಿಸಬೇಕು.
ನಂಜೇಗೌಡ ರವರು ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯವಾಗಿದೆ.ಸ್ವಸ್ತ ಸಮಾಜಕ್ಕಿ ಶ್ರಮಿಸುತ್ತಿರುವ ಪೌರಾಕಾರ್ಮಿಕ ಮಹಿಳೆಯರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಗೌರವಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕತ್ತಾರನ್ನ ಕನ್ನಡಿಗ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಸುಮಾ ಮಹೇಶ್ ಮಾತನಾಡಿ ಇಂದು ಮಹಿಳೆಯರು ಪುರುಷರಿಗೆ ಸಮವಾಗಿ ಸಾಧಕರ ಸಾಲಿನಲ್ಲಿ ನಿಂತ್ತಿದ್ದಾರೆ.ಆತ್ಮಸ್ಥೈರ್ಯದ ಮೂಲಕ ಸಾಧನೆಯ ಹಾದಿ ತಲುಪಬೇಕು. ಶ್ರಮಿಕ ವರ್ಗದ ನಿಸ್ವಾರ್ಥ ಸೇವೆಯನ್ನು ಗುರುತಿಸುವ ಕೆಲಸವನ್ನು ಒಕ್ಕಲಿಗ ಯುವ ಬ್ರಿಗೇಡ್ ಮಾಡಿರುವುದು ಸಂತೋಷದ ವಿಷಯವಾಗಿದೆ ಎಂದರು.
ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕರಾದ ನಂಜೇಗೌಡ ನಂಜುಂಡ ಮಾತನಾಡಿ ಸಂಸ್ಥೆಯು ಜನರಿಗೆ ಅಕ್ಷರ,ಅವಕಾಶ ಮತ್ತು ಉದ್ಯೋಗ ಕಲ್ಪಿಸುವ ಧ್ಯೇಯವನ್ನು ಹೊಂದಿದೆ.ಬ್ರಿಗೇಡ್ ವತಿಯಿಂದ ಉದ್ಯೋಗ ಮೇಳ ಮಾಡಿ 4,500 ಜನರಿಗೆ ಉದ್ಯೋಗ ಕೊಡಿಸಿದ್ದೇವೆ,ಉನ್ನತ್ತ ವಿದ್ಯಾಭ್ಯಾಸ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವುದರ ಮೂಲಕ ಉನ್ನತ್ತ ಹುದ್ದೆಯ ಅಧಿಕಾರಿಗಳನ್ನಾಗಿಸುವ ಗುರಿ ಇದೆ ಹಾಗೂ ಈಗಾಗಲೇ 15 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ನಿರ್ವಹಣೆ ಮಾಡುತ್ತಿದ್ದೇವೆ.ಆದ್ದರಿಂದ್ದ ಸಂಸ್ಥೆಯ ವತಿಯಿಂದ ಮತ್ತಷ್ಟು ಸಾಮಾಜಿಕ ಕಾರ್ಯಕ್ರಮ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಆರ್.ಬಿ. ಶೋಭಾ,ಪಿಡಿಒ ಡಾ.ಶೋಭಾರಾಣಿ ಮಾತನಾಡಿದರು ಮತ್ತು ಪೌರ ಕಾರ್ಮಿಕ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.