ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವಂತದ್ದು ಸಹಜ. ಅದು ಕೂಡ ಹೊಟ್ಟೆ ಕೆಳಭಾಗದಲ್ಲಿ ಅಥವಾ ಕಿಬ್ಬೊಟ್ಟೆಯಲ್ಲಿ ನೋವು ಇರುತ್ತದೆ ..ಈ ನೋವು ಪ್ರತಿಯೊಬ್ಬರಿಗೂ ಇರುತ್ತೆ . ಆದರೆ ಕೆಲವರಿಗೆ ಆ ನೋವಿನ ತೀವ್ರತೆ ಹೆಚ್ಚಿರುತ್ತೆ ಒಂದಿಷ್ಟು ಹೆಣ್ಣು ಮಕ್ಕಳಿಗೆ ಮೊದಲೆರಡು ದಿನಗಳಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ ಆದರೆ ಕೆಲವರಿಗೆ ಐದು ದಿನಗಳ ಕಾಲ ನೋವಿರುವಂಥದ್ದು ಕೂಡ ಇದೆ..
ಆದ್ರೆ ಹೆಣ್ಣು ಮಕ್ಕಳು ನೋವನ್ನ ತಡೆದುಕೊಳ್ಳಲಾಗದೆ ಮಾತ್ರೆಗಳನ್ನು ಸೇವನೆ ಮಾಡ್ತಾರೆ. ಆದರೆ ಮಾತ್ರೆಗಳನ್ನ ತೊಗೊಳೋದ್ರಿಂದ ಮುಂದಿನ ದಿನಗಳಲ್ಲಿ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ಹಾಗೂ ಹಾರ್ಮೋನ್ ಇಂಬಾಲೆನ್ಸ್ ಆಗುವಂತಹ ಚಾನ್ಸಸ್ ಕೂಡ ಇರುತ್ತದೆ..ನೈಸರ್ಗಿಕವಾಗಿ ಹಾಗೂ ಮನೆಯಲ್ಲಿಯೇ ಮುಟ್ಟಿನ ನೋವಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದರ ಡೀಟೇಲ್ಸ್ ಇಲ್ಲಿದೆ..
ಎಳನೀರು
ಮುಟ್ಟಿನ ಸಮಯದಲ್ಲಿ ಎಳನೀರನ್ನು ಕುಡಿಯುವುದು ಉತ್ತಮ . ಎಳನೀರಿನಲ್ಲಿ ಪೋಷಕಾಂಶಗಳು , ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶ ಜಾಸ್ತಿ ಇರೋದ್ರಿಂದ ನೋವಿನ ನಿವಾರಣೆಗೆ ಸಹಾಯವಾಗುತ್ತದೆ.. ಪಿರಿಯಡ್ಸ್ ಡಿಲೆ ಹಾಗೂ ಮೆನ್ಸ್ಟ್ರಲ್ ಬ್ಲಡ್ ಕ್ಲಾಟ್ ನಿವಾರಣೆಗೂ ಕೂಡ ಎಳನೀರು ಸಹಕಾರಿ.. ಹಾಗಾಗಿ ಪಿರೇಡ್ಸ್ ಸಂದರ್ಭದಲ್ಲಿ ದಿನಕ್ಕೊಂದು ಎಳನೀರನ್ನು ಕುಡಿಯುವಂಥದ್ದು ಉತ್ತಮ.
ಮೆಂತ್ಯ
ಮೆಂತ್ಯೆಯಲ್ಲಿ ಉರಿಯುತದ ಗುಣಲಕ್ಷಣಗಳು ಹೆಚ್ಚಿದ್ದು ಇದು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ಮುಟ್ಟಿನ ಸಂಬಂಧಿತ ಬೇರೆ ಸಮಸ್ಯೆಗಳನ್ನ ನಿವಾರಣೆ ಮಾಡಲು ಸಹಾಯಕಾರಿ ..ಮೆಂತೆಯಲ್ಲಿ ಆಲ್ಕಲಾಯ್ಡ್ ಗಳ ಅಂಶ ಇರೋದ್ರಿಂದ ಇದು ನೋವನ್ನ ನಿವಾರಿಸುತ್ತದೆ ಎಂದು ಸಾಕಷ್ಟು ಸಂಶೋಧನೆಗಳು ಕೂಡ ತಿಳಿಸಿಕೊತ್ತಿವೆ ಹಾಗೆ ಈ ಸಮಯದಲ್ಲಿ ಆಗುವಂತಹ ಆಯಾಸ , ವಾಕರಿಕೆ ಎಲ್ಲವನ್ನೂ ಕಡಿಮೆ ಮಾಡುತ್ತದೆ. ಮೆಂತ್ಯ ಅನ್ನ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುವುದು ಉಪಕಾರಿ.
ಮುಟ್ಟಿದರೆ ಮುನಿ
ಇದನ್ನ ಟಚ್ ಮಿ ನಾಟ್ ಗಿಡ ಅಂತಾನೂ ಹೇಳ್ತಾರೆ ಇದು ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುತ್ತೆ. ಈ ಗಿಡದ ಎಲೆಗಳನ್ನ ಹಾಗೂ ಬೇರನ್ನ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಹೊಟ್ಟೆ ನೋವು ಬೇಗನೆ ಕಡಿಮೆ ಆಗುತ್ತೆ ..
ಇದೆಲ್ಲದರ ಜೊತೆಗೆ ಬೆಚ್ಚಗಿನ ನೀರನ್ನು ಹೆಚ್ಚಾಗಿ ಕುಡಿಬೇಕು . ಇದರಿಂದ ಹೊಟ್ಟೆ ನೋವು ಕಡಿಮೆಯತ್ತೆ ಹಾಗೂ ಬ್ಲಡ್ ಫ್ಲೋ ಕೂಡ ಪ್ರಾಪರ್ ಆಗಿರುತ್ತೆ..