ಕೊರೊನಾ ರೂಪಾಂತರಿ ಒಮೈಕ್ರಾನ್ ಕಾರಣಕ್ಕೆ ಸರ್ಕಾರ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಹೈರಿಸ್ಕ್ ದೇಶಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್ ಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ತಮ್ಮೂರಿಗೆ ತೆರಳಿದವರಿಗೆ ಏಳು ದಿನದ ಬಳಿಕ ಸೋಂಕು ದೃಢವಾಗ್ತಿರುವ ಪ್ರಕರಣ ಪತ್ತೆಯಾಗ್ತಿದೆ. ಇದು ಮತ್ತೆ ಸೋಂಕು ಹೆಚ್ಚಾಗುವ ಭೀತಿ ಎದುರಾಗಿದೆ.
ರಾಜ್ಯಕ್ಕೆ ಹೈರಿಸ್ಕ್ ದೇಶದಿಂದ ಬಂದ ಪ್ರಯಾಣಿಕರೇ ಸ್ಪ್ರೆಡರ್ಸ್ !
ಮೊದಲ ಹಾಗೂ ಎರಡನೇ ಅಲೆಯಲ್ಲಿ ಜನರ ಜೀವನ ಹೇಳಲಾರದಂತದ್ದು. ಇದೀಗ ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಗೆ ನೀಡಿದ್ದಾರೆ. ಇತ್ತ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯ ಪತ್ರ ರವಾನಿಸಿದೆ. ಇಷ್ಟಾದರೂ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಹೈರಿಸ್ಕ್ ದೇಶಗಳಿಂದ ಬಂದವರಿಗೆ ಏರ್ಪೋರ್ಟ್ ನಲ್ಲಿ ನೆಗೆಟಿವ್ ಬಂದಂತಹವರನ್ನ ಹೋಂ ಕ್ಬಾರಂಟೈನ್ ಗೆ ಅವಕಾಶ ನೀಡಲಾಗ್ತಿದೆ. ಆದರೆ ಊರುಗಳಿಗೆ ತೆರಳಿದವರಿಗೆ ಏಳು ದಿನ ಬಳಿಕ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿ ಇರುವವರ ಪತ್ತೆ ದೊಡ್ಡ ಸವಾಲು ಆಗುತ್ತಿದೆ. ಹೀಗಾಗಿ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಹೈರಿಸ್ಕ್ ದೇಶಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಸಲಹೆ !
ಹೈರಿಸ್ಕ್ ದೇಶಗಳಿಂದ ರಾಜ್ಯಕ್ಕೆ 6 ಸಾವಿರಕ್ಕೂ ಅಧಿಕ ಪ್ರಯಾಣಿಕರು ಆಗಮಿಸಿದ್ದಾರೆ. ಇದರಲ್ಲಿ 7 ಮಂದಿಗೆ ಸೋಂಕು ದೃಢಪಟ್ಟಿದ್ದು, ಮಿಕ್ಕವರೆಲ್ಲ ರಾಜ್ಯದ ವಿವಿಧೆಡೆ ಹಂಚಿ ಹೋಗಿದ್ದಾರೆ. ಆದರೀಗ ಹೈರಿಸ್ಕ್ ದೇಶಗಳಿಂದ ಬಂದ ಒಬ್ಬ ವ್ಯಕ್ತಿ ಹೋಂ ಕ್ವಾರಂಟೈನ್ ನಲ್ಲಿರುವಾಗ ಸೋಂಕು ದೃಢವಾಗಿದೆ. ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ಬಂದರೆ ಹೋಂ ಕ್ವಾರಂಟೈನ್ ಕಳುಸಲಾಗುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಡಿ.1ರಿಂದ 12 ವರೆಗೂ 18 ಸಾವಿಕ್ಕೂ ಹೆಚ್ಚು ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ ಅಮೆರಿಕ, ಯೂರೋಪ್ ಹಾಗೂ ಆಫ್ರಿಕಾ ಭಾಗದ 17ಕ್ಕೂ ಅಧಿಕ ಹೈರಿಸ್ಕ್ ದೇಶಗಳಿಂದ 6,245 ಪ್ರಯಾಣಿಕರು ಬಂದಿದ್ದಾರೆ. ಹೀಗಾಗಿ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಾಗಬಹುದು. ಅದಕ್ಕೆ ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ಬಂದರೂ ಅಲ್ಲಿ ಹೋಂ ಕ್ವಾರಂಟೈನ್ ಮಾಡಿ ಎಂದು ತಜ್ಞರು ಹೇಳುತ್ತಿದ್ದಾರೆ.
ಈ ಬಗ್ಗೆ ಬಿಬಿಎಂಪಿ ಕಮಿಷಿನರ್ ಗೌರವ್ ಗುಪ್ತ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶಿ ಪ್ರಯಾಣಿಕರನ್ನು ಏಪೋರ್ಟನಲ್ಲಿಯೇ ಹೋಂ ಕ್ವಾರಂಟೈನ್ ಬಗ್ಗೆ ತಜ್ಞರ ಕಮಿಟಿ ನಿರ್ಧಾರ ಮಾಡಬೇಕು. ಆದ್ರೆ ಬಿಬಿಎಂಪಿ ವಿದೇಶಿ ಪ್ರಯಾಣಿಕರ ಮೇಲೆ ಸೂಕ್ತ ಎಚ್ಚರಿಕೆ ವಹಿಸಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮತ್ತೆ ಮೂರನೇ ಅಲೆ ಹಬ್ಬದಂತೆ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಮತ್ತೊಂದು ಮಹಾ ಗಂಡಾಂತರ ಎದುರಿಸಬೇಕಾಗುತ್ತೆ. ಇತ್ತ ಸಾರ್ವಜನಿಕರು ಸಹ ಮಾಸ್ಕ್, ಸಾಮಾಜಿಕ ಅಂತರದ ಜೊತೆಗೆ ಎಚ್ಚರಿಕೆಯಿಂದ ಇರಬೇಕಾಗಿದೆ.