ರಾಜ್ಯ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಹಬ್ಬಕ್ಕಾಗಿ ನೀಡುತ್ತಿದ್ದ ಮುಂಗಡ ಮೊತ್ತವನ್ನು 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವುದಾಗಿ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ‘ರಾಜ್ಯ ಸಿವಿಲ್ ಸೇವಾ ವೃಂದದಲ್ಲಿ ಖಾಯಂ ಆಗಿ ಸೇರ್ಪಡೆಯಾಗಿರುವ ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿದಂತೆ ಒಬ್ಬ ಖಾಯಂ ಸರ್ಕಾರಿ ನೌಕರನಿಗೆ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಗೆ ಮಾತ್ರ ಪ್ರಸ್ತುತ ಮಂಜೂರು ಮಾಡಲಾಗುತ್ತಿರುವ ಬಡ್ಡಿ ರಹಿತ ಹಬ್ಬದ ಮುಂಗಡವನ್ನ ತಕ್ಷಣದಿಂದ ಜಾರಿಗೆ ಬರುವಂತೆ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿ ಆದೇಶಿಸಿದೆ’ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಬ್ಬದ ಮುಂಗಡ ಮೊತ್ತವನ್ನ ಹೆಚ್ಚಿಸುವಂತೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ 10 ತಿಂಗಳ ಅವಧಿಯಲ್ಲಿ ಮರು ಪಾವತಿಸಬಹುದಾದ ಬಡ್ಡಿ ರಹಿತ ಹಬ್ಬದ ಮುಂಗಡವನ್ನ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿದೆ.
ಸರ್ಕಾರ ಆದೇಶ ಪ್ರತಿ ಈ ಕೆಳಕಂಡಂತಿದೆ









