ಬಾಲಿವುಡ್ ಸ್ಟಾರ್ ನಟ ಅಮಿರ್ ಖಾನ್ ಅಭಿನಯದ ಬಹು ನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಅಭಿಯಾನ ಶುರುವಾಗಿದ್ದು ಟ್ರೆಂಡ್ ಸೃಷ್ಟಿಯಾಗಿದೆ.
ಕೆಲವು ವರ್ಷಗಳ ಹಿಂದೆ ಭಾರತದ ಬಗ್ಗೆ ಸಮಿರ್ ಖಾನ್ ನೀಡಿದ ವಿಚಾದಾತ್ಮಕ ಹೇಳಿಕೆಯೆ #boycott Laal Singh Chaddha ಎಂಬ ಅಭಿಯಾನವನ್ನ ಶುರು ಮಾಡಲಾಗಿದೆ.
ಈ ಮಹತ್ವದ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಅಮಿರ್ ಖಾನ್ ಈ ಬೆಳವಣಿಎಗಯೂ ತನ್ನಗೆ ಅತೀವ ನೋವನ್ನುಂಟು ಮಾಡಿದೆ ಎಂದಿದ್ದಾರೆ. ಜನರು ನನ್ನನು ದೇಶವನ್ನ ಇಷ್ಟಪಡದವನು ಎಂದುಕೊಂಡಿದ್ದಾರೆ. ಆರೆ, ಇದು ಸುಳ್ಳು ಹಾಗೂ ದುರದೃಷ್ಟಕರ ದಯವಿಟ್ಟು ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಹಾಲಿವುಡ್ನ ಪ್ರಸಿದ್ದ ಚಿತ್ರ ʻಫಾರೆಸ್ಟ್ ಗ್ರಂಪ್ʼ ಚಿತ್ರದ ಹಿಂದಿ ಅವತರಣಿಕೆಯಾಗಿರುವ ಲಾಲ್ ಸಿಂಗ್ ಚಡ್ಡಾ ಈ ವರ್ಷ ತೆರೆಗೆ ಬರಲಿದೆ.
ಈಚೆಗೆ ಚಿತ್ರತಂಡ ಆಯೋಜಿಸಿದ ಸುದ್ದಿಗೋಷ್ಠಿಯಲ್ಲು ಸಹ ಚಿತ್ರ ಬಹಿಷ್ಕರಿಸುವ ಬಗ್ಗೆ ಪ್ರಶ್ನೆ ಎದುರಾದಾಹ ದಯವಿಟ್ಟು ನಮ್ಮ ಚಿತ್ರವನ್ನ ಬಹಿಷ್ಕರಿಸಬೇಡಿ ಎಂದು ಚಿತ್ರತಂಡ ವಿನಂತಿಸಿಕೊಂಡಿತ್ತು.
ಸರಿ ಸುಮಾರು ಏಳು ವರ್ಷಗಳ ಹಿಂದೆ ಅಂದರೆ 2015ರಲ್ಲಿ ಅಮಿರ್ ಖಾನ್ ಭಾರತದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ನಮ್ಮ ದೇಶವು ತುಂಬಾ ಸಹಿಷ್ಣುತೆ ಉಳ್ಳ ದೇಶವಾಗಿದ್ದು ಕೆಟ್ಟದ್ದನ್ನು ಹರಡುವ ಜನರಿದ್ದಾರೆ. ತಮ್ಮ ಪತ್ನಿ ಹಾಗೂ ಮಕ್ಕಳ ಸಮೇತ ದೇಶವನ್ನ ತೊರೆಯಲು ಯೋಜಿಸಿರುವುದಾಗಿ ಹೇಳಿ ವಿವಾದದ ಕಿಡಿ ಹೊತ್ತಿಸಿದ್ದರು.