ಭಾರತದ ಶ್ರೀಹರಿ ನಟರಾಜ್(21) ಪುರುಷ ವಿಭಾಗದ 50 ಮೀ ಬ್ಯಾಕ್ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಫಿನಾಲೆ ಪ್ರವೇಶಿಸಿದ್ದು ಭಾರತದ ಪದಕ ಆಸೆಯನ್ನು ಜೀವಂತವಾಗಿಸಿದ್ದಾರೆ.
ಭಾನುವಾರ ನಡೆಸ ಸೆಮಿಫಿನಾಲೆ ಪಂದ್ಯಾವಳಿಯಲ್ಲಿ 25.38 ಸೆಕೆಂಡುಗಳಲ್ಲಿ ನಿಗದಿತ ಗುರಿಯನ್ನು ತಲುಪಿದ್ದಾರೆ. ಒಟ್ಟಾರೆಯಾಗಿ ಎಂಟನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದಾರೆ.
ಇದಕ್ಕೂ ಮುನ್ನ 25.52 ಸೆಕೆಂಡುಗಳನ್ನು ಈಜುವ ಮೂಲಕ 7ನೇ ಸ್ಥಾನ ಪಡೆದು ಸೆಮಿಫಿನಾಲೆ ಪ್ರವೇಶಿಸಿದ್ದರು.
ಭಾರತದ ಮತ್ತೊಬ್ಬ ಈಜು ಪಟು ಸಜನ್ ಪ್ರಕಾಶ್ 200ಮೀ ಬಟರ್ ಫ್ಲೈ ವಿಭಾಗದಲ್ಲಿ ಏಳನೇ ಸ್ಥಾನ ಪಡೆದಿದ್ದರು. 1 ನಿಮಿಷ 59 ಸಕೆಂಡುಗಳಲ್ಲಿ ಗುರಿ ತಲುಪಿದ ಸಜನ್ ಫಿನಾಲೆಗೆ ರಿಸರ್ವ್ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.