ಗೋವಾ ಏಕರೂಪ ನಾಗರಿಕ ಸಂಹಿತೆ
ಪೋರ್ಚುಗೀಸ್ ಆಳ್ವಿಕೆಯಲ್ಲಿ ಗೋವಾ ಏಕರೂಪ ನಾಗರಿಕ ಸಂಹಿತೆ ಎಂಬ ಉಪನಾಮವನ್ನು ಬಳಸಲಾಗಿಲ್ಲ, ಬದಲಿಗೆ ಪೋರ್ಚುಗೀಸ್ ಸಿವಿಲ್ ಕೋಡ್, ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಕೋಡ್, ಪೋರ್ಚುಗೀಸ್ ಸಿವಿಲ್ ರಿಜಿಸ್ಟ್ರೇಷನ್ ಕೋಡ್, ಪೋರ್ಚುಗೀಸ್ ಕಮರ್ಷಿಯಲ್ ಕೋಡ್, ಪೋರ್ಚುಗೀಸ್ ಕ್ರಿಮಿನಲ್ ಕೋಡ್ ಮತ್ತು ಕೋಡಿಗೊ ಸಿವಿಲ್ ಪೋರ್ಚುಗೀಸ್ ಮುಂತಾದ ಪರಸ್ಪರ ಬದಲಾಯಿಸಬಹುದಾದ ಸಂಹಿತೆಗಳನ್ನು ಅಳವಡಿಸಲಾಗಿದೆ.
1867ರ ಸಂಹಿತೆಯನ್ನು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದ್ದರೂ, 1940ರ ಕಾಂಕಾರ್ಡಾಟ್ (ಪೋರ್ಚುಗಲ್ ಮತ್ತು ಹೋಲಿ ಸೀ ನಡುವಿನ ಒಪ್ಪಂದ) ನೊಂದಿಗೆ ತಿದ್ದುಪಡಿಗೊಳಗಾದ 1936ರ ಆವೃತ್ತಿಯು ಗೋವಾದ ಕುಟುಂಬ ಕಾನೂನುಗಳ ಅಡಿಪಾಯವಾಗಿದೆ. 2016ರಲ್ಲಿ ಗೋವಾ ಉತ್ತರಾಧಿಕಾರ, ವಿಶೇಷ ನೋಟರಿಗಳು ಮತ್ತು ದಾಸ್ತಾನು ಪ್ರಕ್ರಿಯೆ ಕಾಯ್ದೆ 2012 ಜಾರಿಗೆ ತರಲಾಯಿತು. ಇದನ್ನು 1867೭ರ ಸಂಹಿತೆಯಿಂದ ಬೇರ್ಪಡಿಸಲಾದ ಕಾರಣ ಹಾಗೂ ಕಾನೂನಾತ್ಮಕವಾಗಿ ಸ್ವೀಕಾರಾರ್ಹವಲ್ಲದ ಕಾರಣ ಟೀಕಿಸಲಾಗುತ್ತದೆ.

ಗೋವಾದ ಕುಟುಂಬ ಕಾನೂನುಗಳಲ್ಲಿ ಸಾಮಾನ್ಯ ಹಿಂದೂಗಳ ಬಳಕೆ ಮತ್ತು ಪದ್ಧತಿಗಳ ಸಂಹಿತೆಯನ್ನು ಸೇರಿಸಲಾಗಿದೆ. ಪ್ರಾಥಮಿಕವಾಗಿ ಹಿಂದೂಗಳಿಗೆ ಅನ್ವಯವಾಗಿದ್ದರೂ, ಗೋವಾದ ಇತರ ಕ್ಯಾಥೊಲಿಕ್ ಅಲ್ಲದ ನಿವಾಸಿಗಳಿಗೆ ಸೀಮಿತ ಬಹುಪತ್ನಿತ್ವ ನಿಬಂಧನೆಗಳನ್ನು ಅನ್ವಯಿಸುವ ಅವಕಾಶಗಳಿವೆ. ‘ಏಕರೂಪ ನಾಗರಿಕ ಸಂಹಿತೆಯೊಳಗೆ ದ್ವಿಪತ್ನಿತ್ವ ಮತ್ತು ಬಹುಪತ್ನಿತ್ವದ ಆಚರಣೆಗಳಿಗೆ ಕಾನೂನು ನಿಬಂಧನೆಗಳಿವೆ ಎಂಬುದು ಆಘಾತಕಾರಿಯಾಗಿದೆ. ಮೊದಲ ಹೆಂಡತಿಗೆ 25 ವರ್ಷ ತುಂಬುವ ಹೊತ್ತಿಗೆ ಯಾವುದೇ ಮಗು ಜನಿಸದಿದ್ದರೆ, ಮೊದಲ ಹೆಂಡತಿಗೆ 30 ವರ್ಷ ತುಂಬಿದಾಗ ಯಾವುದೇ ಗಂಡು ಮಗು ಜನಿಸದಿದ್ದರೆ ಮತ್ತು ಗರ್ಭಧಾರಣೆಯ ನಡುವೆ ಹತ್ತು ವರ್ಷಗಳ ಅಂತರವಿದ್ದರೆ ಹಿಂದೂ ಪುರುಷನಿಗೆ ವಿಚ್ಛೇದನ ನೀಡದೆ ಎರಡನೇ ಬಾರಿಗೆ ಮದುವೆಯಾಗಲು ಅವಕಾಶವಿದೆ. ಇದಲ್ಲದೆ, ಸಾಮಾನ್ಯ ಹಿಂದೂಗಳ ಸಂಹಿತೆಯಡಿಯಲ್ಲಿ, ಪುರುಷ ಸಂತತಿ ಇಲ್ಲದಿದ್ದಾಗ ಯಾವುದೇ ಜಾತಿಯ ಹಿಂದೂಗಳಿಗೆ ಏಕರೂಪವಾಗಿ ದತ್ತು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಕಾನೂನುಬದ್ಧ ಪುರುಷ ಸಂತಾನ ಹೊಂದದೆ ಇರುವ ಅನ್ಯಧರ್ಮೀಯ ಹಿಂದೂಗಳು ಪುರುಷರನ್ನು ಮಾತ್ರ ದತ್ತು ತೆಗೆದುಕೊಳ್ಳಲು ಅನುಮತಿಸುವ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯು ಈಗ ಗೋವಾದ ಮುಂಬೈ ಹೈಕೋರ್ಟ್ ಬಾಕಿ ಉಳಿದಿದೆ.
ವಿವಾಹ-ವೈವಾಹಿಕ ಆಸ್ತಿ ಹಕ್ಕುಗಳ ವರ್ಗೀಕರಣ
ಪೋರ್ಚುಗೀಸ್ ಯೂನಿಫಾರ್ಮ್ ಕೋಡ್ ಮದುವೆಯನ್ನು ಎರಡು ವಿಧಗಳಾಗಿ ವರ್ಗೀಕರಿಸುತ್ತದೆ: ಕ್ಯಾನೊನಿಕಲ್ ಪದ್ಧತಿಯು ಈ ಪ್ರಕಾರವನ್ನು ಆಯ್ಕೆ ಮಾಡಲು ಬಯಸುವ ಕ್ಯಾಥೊಲಿಕರಿಗೆ ಅನ್ವಯಿಸುತ್ತದೆ. ಕ್ಯಾನೊನಿಕಲ್ ಪ್ರಕಾರವನ್ನು ಆಯ್ಕೆ ಮಾಡಲು ಬಯಸದ ಕ್ಯಾಥೊಲಿಕರಿಗೆ ಮತ್ತು ಕ್ಯಾಥೊಲಿಕೇತರರಿಗೆ ಕ್ಯಾನೊನಿಕಲ್ ಅಲ್ಲದ ಪದ್ಧತಿ ಅನ್ವಯಿಸುತ್ತದೆ. ಕ್ಯಾಥೋಲಿಕ್ ಚರ್ಚ್ನ ಪಿತೃಪ್ರಭುತ್ವ ನ್ಯಾಯಮಂಡಳಿಯ ಮುಂದೆ ಕ್ಯಾನೊನಿಕಲ್ ಮದುವೆಗಳನ್ನು ರದ್ದುಗೊಳಿಸಬಹುದು. 1996ರವರೆಗೆ ಕ್ಯಾಥೊಲಿಕರ ನಡುವಿನ ವಿವಾಹವನ್ನು ಕೊನೆಗೊಳಿಸಲು ಇದು ಏಕೈಕ ಮಾರ್ಗವಾಗಿತ್ತು. ತದನಂತರದಲ್ಲಿ ಮತ್ತೊಬ್ಬ ಮಹಿಳೆಯನ್ನು ಕಾನೂನುಬದ್ಧವಾಗಿ ಮದುವೆಯಾಗುವ ಸಲುವಾಗಿ ವಿವಾಹವನ್ನು ವಿಸರ್ಜಿಸಲು ಇಚ್ಚಿಸಿದರೆ ಚರ್ಚ್‌ನಿಂದ ಸಮ್ಮತಿ ಪಡೆದ ನಂತರವೂ ನ್ಯಾಯಾಲಯದಿಂದ ರದ್ದುಗೊಳಿಸಬೇಕು ಎಂದು ಕ್ಯಾಥೊಲಿಕ್ ಚರ್ಚ್ ಅಭಿಪ್ರಾಯಪಟ್ಟಿತು.
ಉಚ್ಚ ನ್ಯಾಯಾಲಯದ ದೃಢೀಕರಣದ ಮೇರೆಗೆ ತಾವು ಹೊರಡಿಸಿದ ವಿವಾಹವನ್ನು ರದ್ದುಗೊಳಿಸುವ ಆದೇಶವು ಸಂಗಾತಿಗಳು ಒಗ್ಗೂಡುವಿಕೆಯ ನಿರ್ಧಾರಕ್ಕೆ ಬಂದಾಗ ಮಾತ್ರ ನಾಗರಿಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಆಸ್ತಿಗಳ ಪ್ರತ್ಯೇಕತೆಯ ಬಗ್ಗೆ ನ್ಯಾಯಾಲಯಗಳು ನಿರ್ಧರಿಸಬೇಕು ಎಂದು ಧರ್ಮಪ್ರಚಾರಕ ಅಧಿಕಾರಿಗಳು ಹೇಳುತ್ತಾರೆ. ಆದಾಗ್ಯೂ, ಆಸ್ತಿಗಳ ಪ್ರತ್ಯೇಕತೆಯ ಕಾನೂನಿನ ದೃಷ್ಟಿಯಿಂದ ಅಥವಾ ದಾಸ್ತಾನು ಪ್ರಕ್ರಿಯೆಗಳ ದೃಷ್ಟಿಯಿಂದ ಆಸ್ತಿಗಳ ಪ್ರತ್ಯೇಕತೆಯ ಬಗ್ಗೆ ನ್ಯಾಯಾಲಯಗಳು ಚರ್ಚಿಸಿದಾಗ, ಪಿತೃಪ್ರಧಾನ ನ್ಯಾಯಮಂಡಳಿಯ ಹೈಕೋರ್ಟ್ ಅನುಮೋದಿಸಿದ ಆದೇಶವನ್ನು ಪರಿಗಣಿಸಲಾಗುತ್ತದೆ. 1867 ರ ಸಂಹಿತೆಯಲ್ಲಿ ಆಸ್ತಿಗಳ ಉತ್ತರಾಧಿಕಾರ ಮತ್ತು ಪ್ರತ್ಯೇಕತೆಗೆ ಸಂಬಂಧಿಸಿದ ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ ಎಂದು ಹೇಳಲಾಗುತ್ತದೆ.

ಹೆಣ್ಣುಮಕ್ಕಳು ಮತ್ತು ಪುತ್ರರು ಔಪಚಾರಿಕವಾಗಿ ಪೋಷಕರ ಆಸ್ತಿಗಳಿಗೆ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ. ಉಯಿಲಿನ ಅನುಪಸ್ಥಿತಿಯಲ್ಲಿ ಮದುವೆಯ ನಂತರ ಆಸ್ತಿಯನ್ನು ಹಿಡಿದಿಡುವ ಪೂರ್ವನಿಯೋಜಿತ ಪದ್ಧತಿಯು ಆಸ್ತಿಗಳ ಸಾಮರಸ್ಯದ ನಿಯಮವಾಗಿರುತ್ತದೆ. ಅಂದರೆ ಮದುವೆಯ ನಂತರ ಇದಕ್ಕೆ ವಿರುದ್ಧವಾಗಿ ಒಂದು ಆಯ್ಕೆಯನ್ನು ಮಾಡದ ಹೊರತು ಭೂಮಿ ಸೇರಿದಂತೆ ಎಲ್ಲಾ ಸ್ವತ್ತುಗಳನ್ನು ಆನುವಂಶಿಕವಾಗಿ (ಮದುವೆಗೆ ಮೊದಲು ಅಥವಾ ನಂತರ ಸ್ವಾಧೀನಪಡಿಸಿಕೊಂಡಿದ್ದರೂ ಸಹ) ದಂಪತಿಗಳು ಸಮಾನವಾಗಿ ಹೊಂದಿರುತ್ತಾರೆ. ಪೋಷಕರು ತಮ್ಮ ಆಸ್ತಿಯ ಅರ್ಧದಷ್ಟು ಭಾಗವನ್ನು ಮಾತ್ರ ವಿಲ್ ಮೂಲಕ ಪರಭಾರೆ ಮಾಡಲು ಸಾಧ್ಯವಾಗುತ್ತದೆ, ಅಂದರೆ ಪೋಷಕರು ತಮ್ಮ ಸಂಪೂರ್ಣ ಆಸ್ತಿಯನ್ನು ವಿಲ್ ಮೂಲಕ ಮಗನಿಗೆ ವರ್ಗಾಯಿಸಲು ಸಾಧ್ಯವಿಲ್ಲ.
ಆದಾಗ್ಯೂ ವಿವಾಹವನ್ನು ರದ್ದುಗೊಳಿಸಿದ ವ್ಯಕ್ತಿಗಳ ಹಕ್ಕುಗಳು ವಿಚ್ಛೇದನ ಅಥವಾ ಸಾವಿನಿಂದ ವಿವಾಹವನ್ನು ವಿಸರ್ಜಿಸಿದ ಅಥವಾ ವ್ಯಕ್ತಿಗಳು ಮತ್ತು ಆಸ್ತಿಗಳನ್ನು ಬೇರ್ಪಡಿಸುವ ಆದೇಶದಿಂದ ಬೇರ್ಪಡಿಸಲಾದ ವ್ಯಕ್ತಿಗಳ ಹಕ್ಕುಗಳಿಗಿಂತ ಭಿನ್ನವಾಗಿವೆ. ವಿಚ್ಛೇದನದ ಸಂದರ್ಭದಲ್ಲಿ ಆಸ್ತಿಗಳನ್ನು ಸಮಾನ ಪಾಲುಗಳಾಗಿ ವಿಂಗಡಿಸಲಾಗುತ್ತದೆ. ಪ್ರತ್ಯೇಕತೆಯ ಸಂದರ್ಭದಲ್ಲಿ ವ್ಯಕ್ತಿಗಳು ಮತ್ತು ಆಸ್ತಿಗಳ ಪ್ರತ್ಯೇಕತೆಯನ್ನು ಬಯಸಿದರೆ ಮಾತ್ರ ಸ್ವತ್ತುಗಳನ್ನು ಸಮಾನವಾಗಿ ವಿಂಗಡಿಸಲಾಗುತ್ತದೆ. ಆದರೆ ಈ ವಿಚಾರದಲ್ಲೂ ಯಾವುದೇ ಸ್ಪಷ್ಟತೆ ಕಂಡುಬರುವುದಿಲ್ಲ. ಉದಾಹರಣೆಗೆ ರದ್ದತಿ ಎಂದರೆ ವಿವಾಹ ಎಂದಿಗೂ ಸಂಭವಿಸಿರಲಿಲ್ಲ ಎಂದರ್ಥ. ಅಂದರೆ ವೈವಾಹಿಕ ಆಸ್ತಿ ಹಕ್ಕುಗಳ ಪರಿಕಲ್ಪನೆ ಇಲ್ಲ ಎಂದೇ ಭಾವಿಸಬೇಕಾಗುತ್ತದೆ. ತಪ್ಪು ಮಾಡದ ವ್ಯಕ್ತಿಯು ರದ್ದಾದ ಮದುವೆಯಿಂದ ಪ್ರಯೋಜನಗಳನ್ನು ಪಡೆಯಲು ಕಾನೂನು ಅವಕಾಶ ನೀಡುತ್ತದೆ.
ಗೋವಾದ ಕುಟುಂಬ ಕಾನೂನುಗಳ ಅಡಿಯಲ್ಲಿ ಮದುವೆಯೇ ನಡೆಯದಿರುವುದನ್ನು ವಿವಾಹ ರದ್ದತಿಯ ಆಧಾರವಾಗಿ ಪರಿಗಣಿಸಲಾಗದಿದ್ದರೂ ಪಿತೃಪ್ರಧಾನ ನ್ಯಾಯಮಂಡಳಿಯು ನಾಗರಿಕ ಕಾನೂನನ್ನು ತಪ್ಪಿಸುವ ಮೂಲಕ ವಿವಾಹವನ್ನು ರದ್ದುಗೊಳಿಸಲು ಅನುಮತಿ ನೀಡುತ್ತದೆ. ಈ ತಪ್ಪುಗಳನ್ನು ಆಧರಿಸಿಯೇ ನ್ಯಾಯಮಂಡಳಿಯಲ್ಲಿ ಆಸ್ತಿಗಳ ಹಂಚಿಕೆಯನ್ನು ಎತ್ತಿಹಿಡಿಯಲ್ಪಡುತ್ತದೆ. ತಾರ್ಕಿಕವಾಗಿ ನೋಡಿದಾಗ ಆಸ್ತಿಯ ಮೇಲಿನ ನಿಯಂತ್ರಣವು ಗಂಡನಿಗೆ ಅಥವಾ ಹೆಂಡತಿಗೆ ಸೇರಿದ್ದಾಗಿರದೆ ವೈವಾಹಿಕ ಸಂಬಂಧಕ್ಕೆ ಸೇರಿರುತ್ತದೆ. 1867ರ ಸಂಹಿತೆಯ ಅನ್ವಯ ಲಿಂಗ-ಸಮಾನ ಆನುವಂಶಿಕತೆ ಮತ್ತು ವೈವಾಹಿಕ ಆಸ್ತಿಯ ಮಾಲೀಕತ್ವದ ಹೊರತಾಗಿಯೂ ನಿರ್ವಹಣೆ ಮತ್ತು ಆಡಳಿತದ ಹಕ್ಕುಗಳನ್ನು ಪುರುಷ ಸಂಗಾತಿಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕಿವುಡರು ಮತ್ತು ಮೂಕರಾಗಿರುವಂತಹ ಅಂಗವೈಕಲ್ಯ ಹಾಗೂ ಪುರುಷ ಸಂಗಾತಿಯು ಅಂತರರಾಷ್ಟ್ರೀಯ ತಾಣಗಳಿಗೆ ವಲಸೆ ಹೋಗುವುದು ಮುಂತಾದ ಕಾರಣಗಳು ಅಡ್ಡಿಯಾಗಬಹುದು.
ಸಂಹಿತೆಯ ಪ್ರಕಾರ, ಪತಿಯು ಆಸ್ತಿಯನ್ನು ಪರಭಾರೆ ಮಾಡಬಹುದು ಮತ್ತು ಹೆಂಡತಿಯ ನಂತರದ ಒಪ್ಪಿಗೆಯನ್ನು ಪಡೆಯಬಹುದು, ಆದರೆ ಹೆಂಡತಿ ತನ್ನ ಗಂಡನ ಅಧಿಕಾರವನ್ನು ಹೊಂದಿದ್ದರೆ ಮಾತ್ರ ಆಸ್ತಿಯನ್ನು ಪರಭಾರೆ ಮಾಡಬಹುದು. ವರದಕ್ಷಿಣೆಯ ಬದಲಾಗಿ ಪೋಷಕರ ಆಸ್ತಿಯ ಮೇಲಿನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವಂತೆ ತಮ್ಮ ಸಹೋದರಿಯರನ್ನು ಒತ್ತಾಯಿಸಲು ಸಹೋದರರು ಮಗುವಿನ ಪಿತ್ರಾರ್ಜಿತ ಹಕ್ಕುಗಳನ್ನು ತ್ಯಜಿಸುವ ನಿಬಂಧನೆಯನ್ನು ಹೆಚ್ಚಾಗಿ ಬಳಸುತ್ತಾರೆ. ಗೋವಾದ ಬಹುಪಾಲು ಮಹಿಳೆಯರು ಔಪಚಾರಿಕವಾಗಿ ತಮ್ಮ ಪಾಲನ್ನು ಬಿಟ್ಟುಕೊಡಲು ಒಪ್ಪುತ್ತಾರೆ.
ಪೋರ್ಚುಗೀಸ್ ಏಕರೂಪ ಸಂಹಿತೆಯಡಿ ಖಾತರಿಪಡಿಸಿದ ಮಹಿಳೆಯರ ಭೂಮಿ ಮತ್ತು ಆಸ್ತಿ ಹಕ್ಕುಗಳನ್ನು ಗಣನೆಗೆ ತೆಗೆದುಕೊಳ್ಳದ ಅನೇಕ ಕಾನೂನುಗಳಿವೆ. ೧೯೬೯ ರ ಗೋವಾ ಭೂ ಕಂದಾಯ ಸಂಹಿತೆಯನ್ನು ಕುಟುಂಬ ಕಾನೂನುಗಳಿಂದ ಸಂಪೂರ್ಣವಾಗಿ ಬೇರ್ಪಡಿಸಲಾಗಿದೆ. 1970ರ ದಶಕದ ಉತ್ತರಾರ್ಧದಲ್ಲಿ ಮತ್ತು 1980ರ ದಶಕದ ಆರಂಭದಲ್ಲಿ ನಡೆಸಲಾದ ಹಕ್ಕುಗಳ ಸಮೀಕ್ಷೆ ಮತ್ತು ದಾಖಲೆಗಳು ಮತ್ತು ‘ಭೂ ರೂಪಾಂತರ ವ್ಯವಸ್ಥೆ’ಯಲ್ಲಿ ಮಾಲೀಕರ ಹೆಸರುಗಳನ್ನು ಕೈಬಿಡಲಾಗಿದೆ ಅಥವಾ ತಪ್ಪಾಗಿ ನೋಂದಾಯಿಸಲಾಗಿದೆ.
ಕ್ಯಾಥೊಲಿಕ್ ಮಹಿಳೆಯರು ಮದುವೆಯ ನಂತರ ಸ್ವಯಂಚಾಲಿತವಾಗಿ ಹೆಸರುಗಳನ್ನು ಬದಲಾಯಿಸುವುದಿಲ್ಲ. ಹಾಗಾಗಿಯೇ ಅವರ ಸಂಗಾತಿಗಳು ಅಥವಾ ಮಗನಿಲ್ಲದ ಪೋಷಕರು ಸಾವನ್ನಪ್ಪಿದರೆ ಅವರನ್ನು ಭೂ ದಾಖಲೆಗಳಲ್ಲಿ ನೋಂದಾಯಿಸಲಾಗುತ್ತದೆ. ಸಮೀಕ್ಷೆ ಮತ್ತು ಭೂ ರೂಪಾಂತರ ವ್ಯವಸ್ಥೆಯು ಅವರನ್ನು ಅವರ ಮೊದಲ ಹೆಸರು ಮತ್ತು ಅವರ ಪತಿಯ ಉಪನಾಮದ ಅಡಿಯಲ್ಲಿ ನೋಂದಾಯಿಸಲು ಅವಕಾಶ ನೀಡಿದ್ದರಿಂದ ಹಲವು ಕಾನೂನು ತೊಡಕುಗಳನ್ನು ಸೃಷ್ಟಿಸಿತು. ಭೂಮಾಲೀಕರ ಆಸ್ತಿಯಲ್ಲಿ ನಿರ್ಮಿಸಲಾದ ಮುಂಡ್ಕರ್‌ಗಳ ವಸತಿ ಮನೆಗಳನ್ನು ಸಮೀಕ್ಷೆಯು ಹೊರಗಿಟ್ಟಿದ್ದು ಇದರಿಂದಾಗಿ ಆಸ್ತಿಯಲ್ಲಿ ಸಮಾನತೆಯ ಸಮಸ್ಯೆಯನ್ನು ಜಟಿಲವಾಗಿಸುತ್ತದೆ. ವಿಶೇಷವಾಗಿ ಅಂಚಿನಲ್ಲಿರುವ ವರ್ಗಗಳ ಮಹಿಳೆಯರಿಗೆ ಸಮಸ್ಯೆ ಉಂಟುಮಾಡುತ್ತದೆ.
ಗೋವಾ ಮುಂಡ್ಕರ್ (ಹೊರಹಾಕುವಿಕೆಯಿಂದ ರಕ್ಷಣೆ ಕಾಯ್ದೆ) 1975 ರ ಪ್ರಕಾರ, ಮುಂಡ್ಕರ್ ಕುಟುಂಬದ ಆನುವಂಶಿಕ ಸದಸ್ಯರನ್ನು ಗುರುತಿಸುವಾಗ ಅವರ ಸಂಗಾತಿ, ಮಗ, ಅವಿವಾಹಿತ ಮಗಳನ್ನು ಒಳಗೊಳ್ಳುವುದಲ್ಲದೆ ತಂದೆ, ತಾಯಿ, ಮೊಮ್ಮಗ, ವಿಧವೆ ಮಗಳು, ವಿಧವೆ ಮೊಮ್ಮಗಳು, ಜೀವನಾಂಶಕ್ಕಾಗಿ ಮುಂಡ್ಕರ್ ಮೇಲೆ ಮಾತ್ರ ಅವಲಂಬಿತರಾಗಿದ್ದವರನ್ನು ಪರಿಗಣಿಸುತ್ತದೆ. ಮದುವೆಯ ನಂತರ ಪಿತೃಪ್ರಧಾನತೆಯ ಯಾಂತ್ರಿಕ ಅನ್ವಯಿಸುವಿಕೆಯ ಪರಿಣಾಮ ಈ ನಿಬಂಧನೆಯು ಕುಟುಂಬ ಕಾನೂನುಗಳ ಅಡಿಯಲ್ಲಿ ವಾರಸುದಾರರಾಗಿ ಅರ್ಹತೆ ಪಡೆದ ಸದಸ್ಯರನ್ನು ಹೊರಗಿಡುತ್ತದೆ. ಕುಟುಂಬ ಕಾನೂನುಗಳ ಜೊತೆಗೆ ಅಸ್ತಿತ್ವದಲ್ಲಿರುವ ಶತಮಾನಗಳಷ್ಟು ಹಳೆಯದಾದ ಕಮ್ಯುನಿಡೇಸ್ ಸಂಹಿತೆಯು ಕುಟುಂಬದ ಪಿತೃಪ್ರಧಾನ ವ್ಯಾಖ್ಯಾನವನ್ನು ಹೊರತುಪಡಿಸಿ ಮಹಿಳೆಯರಿಗೆ ಹಕ್ಕುಗಳನ್ನು ನೀಡುವುದಿಲ್ಲ ಅಂದರೆ ಅವರು ಗಂಡು ಮಕ್ಕಳಿಲ್ಲದೆ ವಿಧವೆಯಾಗಿದ್ದರೆ ಅಥವಾ ಮಗನಿಲ್ಲದ ಪೋಷಕರ ಅವಿವಾಹಿತ ಹೆಣ್ಣುಮಕ್ಕಳಾಗಿದ್ದರೆ ಹಕ್ಕುಗಳಿಂದ ವಂಚಿತರಾಗುತ್ತಾರೆ.
ಮುಂದುವರೆಯುತ್ತದೆ,,,,,