2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು 10 ತಿಂಗಳುಗಳು ಬಾಕಿ ಇರುವ ಸಮಯದಲ್ಲಿ ಕಾಂಗ್ರೆಸ್ನಲ್ಲಿ ಈಗಾಗಲೇ ಸಿಎಂ ಗಾದಿಗೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಈ ಮಧ್ಯೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಡಿಸಿಎಂ ಡಾ || ಜಿ.ಪರಮೇಶ್ವರ್ ಭೇಟಿ ಕುತೂಹಲ ಮೂಡಿಸಿದೆ.
ಭಾನುವಾರ ಬೆಳ್ಳಗ್ಗೆ ಖರ್ಗೆ ನಿವಾಸಕ್ಕೆ ಆಗಮಿಸಿದ ಪರಮೇಶ್ವರ್ ಸುಮಾರು ಅರ್ಧ ಗಂಟರಗೂ ಹೆಚ್ಚು ಕಾಲ ಉಇಭಯ ನಾಯಕರು ಚರ್ಚೆ ನಡೆಸಿದ್ದಾರೆ. ಖರ್ಗೆ ಅವರಿಗೆ ಜನುಮದಿನದ ಶುಭಾಶಯ ಕೋರುವ ಸಲುವಾಗಿ ಇಬ್ಬರು ನಾಯಕರು ಬಾಗಿಲು ಹಾಕಿಕೊಂಡು ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ನಮ್ಮ ಹೈಕಮಾಂಡ್ ಮೈಸೂರು, ಬೆಂಗಳೂರು ಅಥವಾ ಕಲಬುರ್ಗಿಯಲ್ಲಿ ಇಲ್ಲ ಅದು ದೆಹಲಿಯಲ್ಲಿ ಇದೆ ನಾನು ಮುಖ್ಯಮಂತ್ರಿಯಾಗುವುದನ್ನು ನೀವು ಹೈಕಮಾಂಡ್ ಬಳಿ ಕೇಳಿಕೊಂಡು ಬಂದು ಹೇಳಬೇಕಷ್ಟೇ ಎಂದಿದ್ದಾರೆ.
ಬಿಜೆಪಿ ನಿನ್ನೆ ಮೊನ್ನೆ ಹುಟ್ಟಿರುವ ಪಕ್ಷ ನಮ್ಮ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ ಯಾವ ಸಮಯದಲ್ಲಿ ಏನು ನಿರ್ಣಯ ಕೈಗೊಳ್ಳಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ನಮ್ಮ ಪಕ್ಷದ ಬಗ್ಗೆ ಬಿಜೆಪಿಗೆ ಯಾಕೆ ಚಿಂತೆ. ಇವರನ್ನು ನೋಡಿ ನಾವು ಶಿಸ್ತು ಕಲಿಯಾಬೇಕಾ ಆರೇಳು ರಾಜ್ಯಗಳಲ್ಲಿ ಜನಾದೇಶ ನಮ್ಮ ಪರವಾಗಿದ್ದರು ಸಹ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದವರು ಇಂಥವರಿಂದ ನಾವು ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದು ಕಿಡಿಕಾರಿದ್ದಾರೆ.
ಬಳಿಕ ಮಾತನಾಡಿದ ಪರಮೇಶ್ವರ್ ನಾನು ಖರ್ಗೆಯವರಿಗೆ ಜನುಮ ದಿನದ ಶುಭಾಶಯ ಕೋರಲು ಬಂದಿದೆ ಅದರ ಹೊರತಾಗಿ ಬೇರೆ ಯಾವುದೇ ವಿಚಾರವನ್ನ ಚರ್ಚಿಸಿಲ್ಲ. ಪಕ್ಷವನ್ನು ಮೊದಲು ಅಧಿಕಾರಕ್ಕೆ ತರೋಣ ಆ ನಂತರ ಕೇಂದ್ರದಿಂದ ವೀಕ್ಷಕರು ಬಂದು ಶಾಸಕರ ಅಭಿಪ್ರಾಯವನ್ನ ಸಂಗ್ರಹಿಸಿ ನಂತರ ಮುಖ್ಯಮಂತ್ರಿ ಯಾರೆಂಬುದನ್ನು ಘೋಷಣೆ ಮಾಡುತ್ತಾರೆ ಇದು ನಮ್ಮ ಪಕ್ಷದ ವಾಡಿಕೆ ಎಂದಿದ್ದಾರೆ.