ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಮಾಪ್ತ ಸಚಿವ ಪಾರ್ಥ ಚಟರ್ಜಿ ಬಂಧನದ ಕುರಿತು ಟಿಎಂಸಿ ಅಧಿನಾಯಕಿಗೆ ಬಿಜೆಪಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು ಭ್ರಷ್ಟಾಚಾರದ ಪರಮಾವಧಿ ಎಂದು ಕಿಡಿಕಾರಿದೆ.
2016-21ರವರೆಗೂ ಚಟರ್ಜಿ ಶಿಕ್ಷಣ ಸಚಿವರಾಗಿದ್ದ ವೇಳೆ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಶನಿವಾರ ಬಂಧಿಸಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳವಿಯಾ ಪೊಲೀಸ್ ಅಧಿಕಾರಿಯೊಬ್ಬರನ್ನು ರಕ್ಷಿಸುವ ಸಲುವಾಗಿ ರಸ್ತೆಗಿಳಿದಿದ್ದ ಮಮತಾ ಬ್ಯಾನರ್ಜಿ ತಮ್ಮ ಆಪ್ತನ ಬಂಧನದ ನಂತರ ಮೌನ ಯಾಕೆ ವಹಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
Nothing else explains Mamata Banerjee’s silence on Partha Chaterjee, her close confidant, now in jail, except an admission of the crime, when she had hit the road to defend a police officer! Mamata may be trying to distance herself from Partha, but their association is well know.
— Amit Malviya (@amitmalviya) July 24, 2022
ನಂತರ ಟ್ವೀಟ್ ಮಾಡಿರುವ ಸಚಿವ ರಾಜೀವ್ ಚಂದ್ರಶೇಖರ್ ಒಂದು ಯೋಜಿತ ಪಿತೂರಿ ಮೂಲಕ ಮಮತಾ ಬ್ಯಾನರ್ಜಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಗುರಿಯಾಗಿಸಿದ್ದರು. ಆದರೆ, ವಿಪರ್ಯಾಸವೆಂದರೆ ಕೆಲವು ದಿನಗಳ ಹಿಂದೆ ಅವರ ಸಚಿವರನ್ನು ಹಾಡಿ ಹೊಗಳಿದ ಮಮತಾ ಇದೇ ಕಾರಣಕ್ಕಾಗಿ ಇರಬಹುದ ಎಂದು ಟೀಕಿಸಿದ್ದಾರೆ.