ಪಪ್ಪಾಯ ಹಣ್ಣನ್ನ ಪ್ರತಿಯೊಬ್ಬರು ಕೂಡ ತುಂಬಾನೇ ಇಷ್ಟಪಟ್ಟು ತಿನ್ನುತ್ತಾರೆ. ಎಲ್ಲಾ ಸೀಸನ್ ನಲ್ಲಿಯು ಕೂಡ ಈ ಹಣ್ಣು ನಮಗೆ ದೊರೆಯುತ್ತದೆ.ಇನ್ನು ಪಪಾಯದಲ್ಲಿ ವಿಟಮಿನ್ ಸಿ ಹಾಗು ವಿಟಮಿನ್ ಎ ಆಂಟಿಆಕ್ಸಿಡೆಂಟ್ ಗಳು ಮತ್ತು ಪಪ್ಪಾಯಿ ನಂತಹ ಕಿಣ್ವಗಳಂತ ಪೋಷಕಾಂಶಗಳಿರುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು.
ಪಪಾಯ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು, ಅದೇ ರೀತಿ ಪಪ್ಪಾಯಿ ಮರದ ಎಲೆಗಳು ಕೂಡ ತುಂಬಾನೇ ಒಳ್ಳೆಯದು. ಇದರಲ್ಲಿರುವಂತಹ ಅಂಶಗಳು ದೇಹಕ್ಕೆ ಸೇರಿದ್ರೆ ಆರೋಗ್ಯ ಲಾಭಗಳು ಹೆಚ್ಚು ಸಿಕ್ಕಂತಾಗುತ್ತದೆ.
ಜೀರ್ಣಕ್ರಿಗೆ ಉತ್ತಮ
ಪಪಾಯ ಎಲೆಗಳ ಟೀಯನ್ನ ಮಾಡಿಕೊಂಡು ಸೇವಿಸುವುದರಿಂದ, ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಮುಖ್ಯವಾಗಿ ಜೀರ್ಣಕ್ರಿಯೆ ಸಮಸ್ಯೆಯನ್ನು ದೂರ ಮಾಡುತ್ತದೆ. ಅತಿಸಾರ, ಹೊಟ್ಟೆ ಉಬ್ಬರ,ಮಲಬದ್ಧತೆ ತೊಂದರೆಗಳಿಂದ ಮುಕ್ತಿ ಸಿಗುತ್ತದೆ..
ಉರಿಯೂತ ನಿವಾರಕ
ದೇಹದಲ್ಲಿ ನೋವುಗಳು ಕಾಣಿಸಿಕೊಂಡಾಗ, ಕೆಲವರಿಗೊಂದು ಕೀಲು ನೋವು, ಹೊಟ್ಟೆ ನೋವು, ಸೊಂಟ ನೋವು ಈ ರೀತಿಯ ಸಮಸ್ಯೆಗಳು ಆಗಾಗ ಕಾಡುತ್ತಾನೆ ಇರುತ್ತದೇ. ಇಂಥವರು ಪಪಾಯ ಎಳೆ ಟೀ ಅಥವಾ ಜ್ಯೂಸ್ ಕುಡಿಯುವುದರಿಂದ ನೋವುಗಳಿಂದ ನಿವಾರಣೆ ಪಡೆಯಬಹುದು, ಉರಿಯೂತ ನಿವಾರಕ ಅಂತನೂ ಹೇಳಬಹುದು.
ಕ್ಯಾನ್ಸರ್ ವಿರೋಧಿ
ಪಪಾಯದಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಹೆಚ್ಚಿವೆ ಯಾವುದೇ ರೀತಿಯ ಕ್ಯಾನ್ಸರ್ ಅನ್ನ ತಡೆಗಟ್ಟುತ್ತದೆ ಮುಖ್ಯವಾಗಿ ದೇಹದಲ್ಲಿರುವಂತಹ ಡೆಡ್ ಸೆಲ್ಸ್ ಅನ್ನ ನಿವಾರಣೆ ಮಾಡುತ್ತದೆ. ಹಾಗೂ ಕ್ಯಾನ್ಸರ್ ಇಂದ ದೂರವಿಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ
ಪಾಪಾಯಿ ಎಲೆಯಲ್ಲಿ ಇರುವಂತಹ ವಿಟಮಿನ್ ಅಂಶಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಜೊತೆಗೆ ದೇಹದಲ್ಲಿ ಇರುವಂತಹ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಿ ಯಾವ ಸೋಂಕುಗಳು ಕೂಡ ಅನಾರೋಗ್ಯಕ್ಕೆ ನಮ್ಮನ್ನು ಈಡು ಮಾಡದೆ ಇರುವ ರೀತಿ ಕಾಪಾಡುತ್ತದೆ ಹಾಗೂ ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ.