ಶಾಪೂರ್ಜಿ ಪಲ್ಲೊಂಜಿ ಗ್ರೂಪ್ನ ಮುಖ್ಯಸ್ಥ ಪಲ್ಲೊಂಜಿ ಮಿಸ್ತ್ರಿ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಕಂಪನಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಟಾಟಾ ಗ್ರೂಪ್ನಲ್ಲಿ 18.4 ಪರ್ಸೆಂಟ್ ಅತಿ ದೊಡ್ಡ ವೈಯಕ್ತಿಕ ಷೇರು ಹೊಂದಿರುವ ಮಿಸ್ತ್ರಿ 93 ಅವರು ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿಯಲ್ಲಿ ಅವರು ತಮ್ಮ ದಕ್ಷಿಣ ಮುಂಬೈ ನಿವಾಸದಲ್ಲಿ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಟ್ವಿಟರ್ನಲ್ಲಿ ಮಿಸ್ತ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.