ನೆರೆಯ ದೇಶ ಪಾಕಿಸ್ತಾನ(Pakistan)ದಾದ್ಯಂತ ವಿಪರೀತ ಮಳೆಯಾಗಿದ್ದು, ಕಳೆದ 48 ಗಂಟೆಯಲ್ಲಿ ಮಳೆಯ ಆರ್ಭಟಕ್ಕೆ 37 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ .ಇನ್ನು ಭಾರಿ ಮಳೆ(Heavy Rain)ಯ ಪರಿಣಾಮ ನೂರಾರು ಮನೆಗಳು ಕುಸಿದು ಬಿದ್ದಿವೆ. ಹಲೆವೆಡೆ ಭೂಕುಸೀತ ಸಂಭವಿಸಿದ್ದು ರಸ್ತೆಗಳು(Roads) ಹಾಳಾಗಿ ಸಂಚಾರ ಸ್ಥಗಿತಗೊಂಡಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕೂಡ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ.
![](https://pratidhvani.com/wp-content/uploads/2024/03/11.png)
ಈ ಕಡೆ ಅಫ್ಗಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಗುರುವಾರ ರಾತ್ರಿಯಿಂದ ಮಳೆಯಿಂದಾಗಿ 27 ಜನ ಸಾವನ್ನಪ್ಪಿದ್ದು, ಈ ಪೈಕಿ ಮಕ್ಕಳ ಸಂಖ್ಯೆಯೇ ಹೆಚ್ಚು ಎಂದು ಹೇಳಲಾಗಿದೆ. ಇತ್ತ ಬಲೂಚಿಸ್ತಾನದ ನೈರುತ್ಯ ಭಾಗದಲ್ಲೂ ಪ್ರವಾಹ ಉಂಟಾಗಿದೆ. ಅಪಾರ ಸಂಖ್ಯೆಯ ಜನರು ಇಲ್ಲಿ ನಿರಾಶ್ರಿತರಾಗಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಐವರು ಮೃತಪಟ್ಟಿದ್ದಾರೆ.
![](https://pratidhvani.com/wp-content/uploads/2024/03/22.png)
ಇನ್ನು ಭಾರತದ ಜಮ್ಮು & ಕಾಶ್ಮೀರದಲ್ಲೂ ಭಾರಿ ಮಳೆಯಾಗುತ್ತಿದೆ. ಅಷ್ಟೇ ಅಲ್ಲ ಉತ್ತರ ಭಾರತದ ಅನೇಕ ಕಡೆಯೂ ಮಳೆ ಜೋರಾಗಿದೆ. ಆದರೆ ಪಾಕಿಸ್ತಾನದ ಪರಿಸ್ಥಿತಿ ಇಲ್ಲಿಗಿಂತ ಗಂಭೀರವಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಜೀವ ಉಳಿಸಿಕೊಳ್ಳಲು ಪಾಕಿಸ್ತಾನದ ಪ್ರಜೆಗಳು ತಮ್ಮ ತಮ್ಮ ಗ್ರಾಮಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಸ್ಥಳೀಯ ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದು ಜನರ ಆತಂಕ ಮಾತ್ರ ಇನ್ನೂ ದೂರಾಗಿಲ್ಲ.
#Pakistan #HeavyRain #Karachi #India