ಕೆಲವರಿಗೆ ಹೆಚ್ಚು ಸೊಂಟ ನೋವು, ಬೆನ್ನ ನೋವು, ಹೊಟ್ಟೆ ನೋವು, ತಲೆನೋವು ಹೀಗೆ ಒಂದಲ್ಲ ಒಂದರಂತೆ ನೋವುಗಳು ಕಾಡ್ತಾ ಇರುತ್ತೆ. ಆ ನೋವನ್ನು ತಡೆಯಲಾರದೆ, ಚಿಕಿತ್ಸೆಯನ್ನು ಕೂಡ ಪಡೆಯದೆ ಈಸಿಯಾಗಿ ಸಿಗುವಂತ ಪೈನ್ ಕಿಲ್ಲರ್ ಮಾತ್ರೆಗಳನ್ನು ತಗೊಳ್ತಾರೆ.
ಪೇನ್ ಕಿಲ್ಲರ್ ತೆಗೆದುಕೊಂಡಾಗ ತಕ್ಷಣಕ್ಕೆ ನೋವು ಕಡಿಮೆಯಾಗುತ್ತದೆ. ಒಂದೆರಡು ಬಾರಿ ಪೈನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳಬಹುದು, ಆದರೆ ಪ್ರತಿ ಬಾರಿ ನೋವು ಕಾಣಿಸಿಕೊಂಡಾಗ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ಇನ್ನೊಂದು ರೀತಿಯ ಹಾನಿ ಉಂಟಾಗುತ್ತದೆ ಈ ಪೇನ್ ಕಿಲ್ಲರ್ ಮಾತ್ರೆ ಅಭ್ಯಾಸವನ್ನ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಅದರ ಬದಲಿಗೆ ನೋವು ಹೆಚ್ಚಾದಾಗ ಚಿಕಿತ್ಸೆ ಪಡೆಯುವಂಥದ್ದು ಉತ್ತಮ.
ಹಾಗಿದ್ರೆ ಅತಿಯಾಗಿ ಪೈನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಯಾವ ರೀತಿಯ ಸೈಡ್ ಎಫೆಕ್ಟ್ಸ್ ಆಗುತ್ತೆ ಅನ್ನೋದ್ರ ಮಾಹಿತಿ ಇಲ್ಲಿದೆ ನೋಡಿ.
ಹೊಟ್ಟೆಗೆ ಸಂಬಂಧಿತ ಸಮಸ್ಯೆ:
ಯಾವುದು ಕೂಡ ಅತಿ ಆಗ್ಬಾರ್ದು, ಪೇನ್ ಕಿಲ್ಲರ್ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ವಾಕರಿಕೆ , ವಾಂತಿ, ಅತಿಸಾರ ,ಹೊಟ್ಟೆ ನೋವಿನಂತಹ ಹೊಟ್ಟೆ ಹುಣ್ಣಿಂತಹ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ.
ತಲೆಸುತ್ತು
ತಕ್ಷಣಕ್ಕೆ ನೋವನ್ನ ಕಡಿಮೆ ಮಾಡುವ ಈ ಮಾತ್ರೆ ನಿಧಾನವಾಗಿ ಮನುಷ್ಯನ ದೇಹದಲ್ಲಿ ಬೇರೆ ಬೇರೆ ರೀತಿಯ ಎಫೆಕ್ಟ್ಸ್ ನ ನೀಡ್ತಾ ಹೋಗುತ್ತೆ ಅದರಲ್ಲಿ ಮುಖ್ಯವಾಗಿ ತಲೆ ಸುತ್ತು ಹೆಚ್ಚಾಗುತ್ತೆ ಏನೋ ಒಂಥರಾ ಕಸುವಿಸಿ ಶುರುವಾಗುತ್ತದೆ. ಇನ್ನು ಕೆಲವರಿಗೆ ಈ ಮಾತ್ರೆಗಳು ನಿದ್ದೆಯನ್ನ ಬರಸುತ್ತದೆ. ಎಲ್ಲಿ ಕೂತರು ನಿಂತರು ತೂಕಡಿಸುವಂತಾಗುತ್ತದೆ.
ಕಾನ್ಸ್ಟಿಪೇಶನ್
ದೇಹ ಡಿಹೈಡ್ರೇಟ್ ಆದಾಗ ಅಥವಾ ಜೀರ್ಣಕ್ರಿಯೆ ಸರಿಯಾಗದಿದ್ದಾಗ ಮಲಬದ್ಧತೆ ಸಮಸ್ಯೆ ಎದುರಾಗುವುದು ಸಾಮಾನ್ಯ. ಅದ್ರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಆಗ್ಬಿಟ್ಟಿದೆ. ಇದರ ಜೊತೆಗೆ ಪೈನ್ ಕಿಲ್ಲರ್ ತೆಗೆದುಕೊಳ್ಳುವುದರಿಂದ ಮಲಬದ್ಧತೆ ಸಮಸ್ಯೆ ಜಾಸ್ತಿ ಆಗುತ್ತಾ ಹೋಗುತ್ತದೆ.
ಯಕೃತ್ತು ಅಥವಾ ಮೂತ್ರಪಿಂಡದ ಹಾನಿ:
ಹೆಚ್ಚಿನ ಪ್ರಮಾಣದಲ್ಲಿ ಪೈನ್ ಕಿಲ್ಲರ್ ಮಾತ್ರೆಗಳನ್ನ ತೆಗೆದುಕೊಳ್ಳುವಂತದ್ದು ಅಥವಾ ದೀರ್ಘಕಾಲದವರೆಗೂ ಅಭ್ಯಾಸ ಇದ್ರೆ ಈ ಹೈಡೋಸ್ ಮಾತ್ರೆ ಗಳಿಂದಾಗಿ ಕಿಡ್ನಿಯನ್ನ ಹಾಗೂ ಯಕೃತ್ತು ಡ್ಯಾಮೇಜ್ ಆಗುವುದು ಕಂಡಿತ.
ಹೃದಯದ ತೊಂದರೆಗಳು:
ಪೈನ್ ಕಿಲ್ಲರ್ ಮಾತ್ರೆಗಳನ್ನ ತೆಗೆದುಕೊಂಡಾಗ ನೋವು ಕಡಿಮೆಯಾಗಿ ಸಮಾಧಾನವಾಗುತ್ತದೆ ಆದ್ರೆ ಮನುಷ್ಯನಿಗೆ ಗೊತ್ತಿಲ್ಲದೆ ಇತರೆ ಕಾಯಿಲೆಗಳಿಗೆ ಈಡು ಮಾಡಿಕೊಡುತ್ತದೆ..ಹೃದಯಾಘಾತ, ಪಾರ್ಶ್ವವಾಯು ಅಥವಾ ಹೃದಯದ ಆರ್ಹೆತ್ಮಿಯಾಗಳ ಹಾಗೆ ಹೃದಯದ ಅಪಾಯ ಹೆಚ್ಚಾಗುತ್ತದೆ.
ಒಟ್ಟಾರೆಯಾಗಿ ಹೇಳಬೇಕು ಅಂದ್ರೆ ಪೇನ್ ಕಿಲ್ಲರ್ ಮಾತ್ರೆಗಳ ಅಭ್ಯಾಸವನ್ನ ಬಿಡುವುದು ಉತ್ತಮ ಇಲ್ಲವಾದಲ್ಲಿ ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳು ಕೂಡ ಒಂದೊಂದಾಗಿ ಎದುರಿಸಬೇಕಾಗುತ್ತದೆ. ದೇಹದಲ್ಲಿ ಯಾವುದಾದರೂ ನೋವು ಕಾಣಿಸಿಕೊಂಡಾಗ ಡಾಕ್ಟರ್ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಹಾಗೂ ಯಾವುದೇ ಕಾರಣಕ್ಕೂ ಹೈಡೋಸ್ ಮಾತ್ರೆಗಳನ್ನು ವೈದರ ಸಲಹೆ ಇಲ್ಲದೆ ತೆಗೆದುಕೊಳ್ಳಬೇಡಿ.