Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹೋರಾಟದ ಧ್ವನಿ, ಗಾಂಧಿವಾದಿ, ಸಮಾಜವಾದಿ ಪ ಮಲ್ಲೇಶ್‌ ರಿಗೆ ಒಂದು ಶೃದ್ಧಾಂಜಲಿ

ನಾ ದಿವಾಕರ

ನಾ ದಿವಾಕರ

January 20, 2023
Share on FacebookShare on Twitter

“ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸದಾ ಸ್ಪಂದಿಸುತ್ತಿದ್ದ, ಸಾಮಾಜಿಕ ಪರಿಸರದಲ್ಲಿ ಸಾಮಾನ್ಯ ಜನತೆ ಎದುರಿಸುವ ಬದುಕು-ಜೀವನ-ಜೀವನೋಪಾಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸದಾ ತುಡಿಯುತ್ತಿದ್ದ, ದುಡಿಯುವ ವರ್ಗಗಳು, ಶೋಷಿತ ಸಮುದಾಯಗಳು, ಮಹಿಳಾ ಸಮೂಹ ಮತ್ತು ಅವಕಾಶವಂಚಿತರ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ತಲ್ಲಣಗಳಿಗೆ ಸದಾ ಮಿಡಿಯುತ್ತಿದ್ದ, ವ್ಯವಸ್ಥೆಯ ಲೋಪದೋಷಗಳ ವಿರುದ್ಧ, ಆಳುವ ವರ್ಗಗಳ ದಬ್ಬಾಳಿಕೆಯ ವಿರುದ್ಧ, ಆಡಳಿತಾರೂಢ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಸದಾ ಸಿಡಿದೇಳುತ್ತಿದ್ದ ” ಒಂದು ದಿಟ್ಟ ಜನಪರ ಧ್ವನಿ ಮೈಸೂರಿನಲ್ಲಿ  19 ಜನವರಿಯ ಮಧ್ಯಾಹ್ನ ಮೂರ ವೇಳೆಗೆ ಶಾಶ್ವತ ಮೌನಕ್ಕೆ ಜಾರಿಬಿಟ್ಟಿತು.

ಹೆಚ್ಚು ಓದಿದ ಸ್ಟೋರಿಗಳು

ಗಾಂಧಿ ಏಕೆ ಇಂದಿಗೂ ಪ್ರಸ್ತುತವಾಗುತ್ತಾರೆ ? ವರ್ತಮಾನದ ಭಾರತಕ್ಕೆ ಗಾಂಧಿ ಪ್ರಸ್ತುತ ಎನಿಸಲು ಇರುವ ಹತ್ತು ಮುಖ್ಯ ಕಾರಣಗಳು

ಬಾಪು ಇಲ್ಲದ ಸ್ವತಂತ್ರ ಭಾರತದ 75 ವಸಂತಗಳು

ಭಾರತ್‌ ಜೋಡೋ-ಜೋಡಿಸದೆ ಹೋದ ಸುಡು ವಾಸ್ತವಗಳು

89ರ ವಯೋಮಾನದ ಚಿರಯುವಕ ಎನ್ನಬಹುದಾದ, ಹೋರಾಟದ ಒಂದು ಧ್ವನಿ, ಗಾಂಧಿವಾದಿ, ಸಮಾಜವಾದಿ ಮತ್ತು ಕನ್ನಡಪರ ಹೋರಾಟಗಾರರಾಗಿ ನ್ಯಾಯ ನಿಷ್ಠುರತೆಯಿಂದ, ಪ್ರಾಮಾಣಿಕ ಬದುಕಿಗಾಗಿ, ಸಮಾನತೆಯ ಆಶಯಗಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಮೈಸೂರಿನ ಎಲ್ಲ ರೀತಿಯ ಜನಾಂದೋಲನಗಳಿಗೆ ಮುಂಚೂಣಿ ದನಿಯಾಗಿ ಜನಸಾಮಾನ್ಯರ ನಡುವೆ ಇರುತ್ತಿದ್ದ ಹಿರಿಯ ಹೋರಾಟಗಾರ ಪ ಮಲ್ಲೇಶ್‌ ಈಗ ನಮ್ಮ ನಡುವೆ ಇಲ್ಲ. ಅವರ ಕನ್ನಡ ಪರ ನಿಲುವಿನ ಫಲವಾಗಿಯೇ ಇಂದು ಪಿಯುಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಏಕೈಕ ಸಂಸ್ಥೆ, ನೃಪತುಂಗ ಕನ್ನಡ ಶೈಕ್ಷಣಿಕ ವಿದ್ಯಾ ವಿಕಾಸ ಸಂಸ್ಥೆ, ಮೈಸೂರಿನಲ್ಲಿ ರಾರಾಜಿಸುತ್ತಿರುವುದು ಅವರ ತಾತ್ವಿಕ ನಿಲುಮೆಗೆ ಸಾಕ್ಷಿ. ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ನೈತಿಕತೆಯನ್ನು ಸದಾ ಎತ್ತಿಹಿಡಿಯುತ್ತಿದ್ದ ಮಲ್ಲೇಶ್‌ ಅವರ ಹೋರಾಟದ ಬದುಕನ್ನು ದಾಖಲಿಸಿದರೆ ಒಂದು ಬೃಹತ್‌ ಗ್ರಂಥವೇ ಆಗಬಹುದು. ಯಾವುದೇ ರೀತಿಯ ಅನ್ಯಾಯದ ವಿರುದ್ಧ, ಅನ್ಯಾಯ ಎಸಗಿದವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ, ಸಿಡಿದೇಳುತ್ತಿದ್ದ ಹಠಮಾರಿ ಸ್ವಭಾವದ ಹಿರಿಯ ಸಮಾಜವಾದಿ ಪ. ಮಲ್ಲೇಶ್‌ ಮೈಸೂರಿನ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಪ್ರಗತಿಪರ-ಎಡಪಂಥೀಯ ಹೋರಾಟಗಾರರಿಗೆ, ಮಹಿಳಾ ಹೋರಾಟಗಾರರಿಗೆ ಮತ್ತು ದುಡಿಯುವ ವರ್ಗಗಳಿಗೆ ಒಂದು ಹೋರಾಟದ ಪ್ರತಿಧ್ವನಿಯಾಗಿಯೇ ತಮ್ಮ ಪಯಣವನ್ನು ಮುಗಿಸಿದ್ದಾರೆ.

ಒಂದು ಜೀವದ ಅಗಲಿಕೆ ಆ ಕುಟುಂಬದೊಳಗೆ ನಿರ್ವಾತವನ್ನು ಸೃಷ್ಟಿಸುವುದು ಸಹಜ. ಕೆಲ ವರುಷಗಳು ಸಂದ ನಂತರ ವಿಸ್ಮೃತಿಗೆ ಜಾರುವುದೂ ಮಾನವ ಸಹಜ. ಆದರೆ ನಮ್ಮ ನಡುವಿನ ದಿಟ್ಟ ಜನಪರ ದನಿಯಾಗಿದ್ದ ಶ್ರೀಯುತ ಪ ಮಲ್ಲೇಶ್‌ ಅವರ ಅಗಲಿಕೆಯಿಂದ ಮೈಸೂರಿನಲ್ಲಿ ಸೃಷ್ಟಿಯಾಗಿರುವ ನಿರ್ವಾತ ಬಹುಶಃ ಶಾಶ್ವತವಾಗಿ ಉಳಿಯುವಂತಹುದು. ತುಂಬಲಾರದ ನಷ್ಟ ಎನ್ನುವ ಕ್ಲೀಷೆಯನ್ನು ದಾಟಿ ನೋಡಿದಾಗ, ಪ ಮಲ್ಲೇಶ್‌ ಅವರ ಅಗಲಿಕೆ,  ಮೈಸೂರಿನ ಜನ ಚಳುವಳಿಗಳ ಪಾಲಿಗೆ ಮತ್ತು ಅವರ ಆದರ್ಶಪ್ರಾಯದಿಂದ ಬಹಳಷ್ಟು ಕಲಿಯಬಹುದಾಗಿದ್ದ ಮುಂದಿನ ತಲೆಮಾರಿನ ಪಾಲಿಗೆ, ಬಹುದೊಡ್ಡ ಪೆಟ್ಟು. ರಾಜಿಯಾಗದ ಮನೋಭಾವದೊಂದಿಗೇ ಬದುಕಿ ಬಾಳಿ, ಹೋರಾಟಗಳಲ್ಲೇ ಜೀವ ಸವೆಸಿದ ಹಿರಿಯ ನಾಯಕ ಕೊನೆಗೂ ಜವರಾಯನೊಂದಿಗೆ ರಾಜಿಯಾಗಲೇಬೇಕಾದ್ದು ಪ್ರಕೃತಿ ಸಹಜ.

ಪ ಮಲ್ಲೇಶ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಅವರ ಆದರ್ಶ ಮತ್ತು ಹೋರಾಟದ ಸ್ಫೂರ್ತಿಯನ್ನು ನಮ್ಮೊಳಗೆ ಹಿಡಿದಿಟ್ಟುಕೊಳ್ಳುವುದೇ ಆಗಿರಲು ಸಾಧ್ಯ.

ನಾ ದಿವಾಕರ

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕರ್ನಾಟಕ

ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
January 25, 2023
| JAGGESH | ಟಗರು ಸಿದ್ದರಾಮಯ್ಯ ಗೆ ನವರಸ ನಾಯಕ ಜಗ್ಗೇಶ್ ಟಕ್ಕರ್..| SIDDARAMAIAH | BJP | CONGRESS |
ರಾಜಕೀಯ

| JAGGESH | ಟಗರು ಸಿದ್ದರಾಮಯ್ಯ ಗೆ ನವರಸ ನಾಯಕ ಜಗ್ಗೇಶ್ ಟಕ್ಕರ್..| SIDDARAMAIAH | BJP | CONGRESS |

by ಪ್ರತಿಧ್ವನಿ
January 24, 2023
Santosh Hegde: ಶ್ರೀಮಂತನಾಗಿದ್ದರೆ ಸಾಕು ಅವನಿಗೆ ಸಮಾಜ ಸಲಾಂ ಹೊಡೆಯುತ್ತದೆ | Pratidhvani
ರಾಜಕೀಯ

Santosh Hegde: ಶ್ರೀಮಂತನಾಗಿದ್ದರೆ ಸಾಕು ಅವನಿಗೆ ಸಮಾಜ ಸಲಾಂ ಹೊಡೆಯುತ್ತದೆ | Pratidhvani

by ಪ್ರತಿಧ್ವನಿ
January 24, 2023
BK Hariprasad : ಬಿಜೆಪಿ ಸರ್ಕಾರ ಬಡವರನ್ನು ವಿಕಾಸ ಮಾಡ್ಲಿಲ್ಲ, ವಿನಾಶ ಮಾಡಿದೆ |Congress Praja Dhwani Yatra
ರಾಜಕೀಯ

BK Hariprasad : ಬಿಜೆಪಿ ಸರ್ಕಾರ ಬಡವರನ್ನು ವಿಕಾಸ ಮಾಡ್ಲಿಲ್ಲ, ವಿನಾಶ ಮಾಡಿದೆ |Congress Praja Dhwani Yatra

by ಪ್ರತಿಧ್ವನಿ
January 24, 2023
| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ
ಸಿನಿಮಾ

| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ

by ಪ್ರತಿಧ್ವನಿ
January 27, 2023
Next Post
| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

| SIDDARAMAIAH | ಬಿಜೆಪಿ ಬಂಡವಾಳ ನಿಂತಿರುವುದು ಮೋದಿ ಮೇಲೆ |ಮೋದಿ ಹಾಗೂ ಬೊಮ್ಮಾಯಿಗೆ ಸವಾಲ್ | MODI | CM BOMMAI

ನನ್ನ ಕನ್ನಡ ಪರ ಹೋರಾಟಗಾರರನ್ನು ನಾನು ಸತ್ತರು ಬಿಡುವುದಿಲ್ಲ : Roopesh Rajanna |

ನನ್ನ ಕನ್ನಡ ಪರ ಹೋರಾಟಗಾರರನ್ನು ನಾನು ಸತ್ತರು ಬಿಡುವುದಿಲ್ಲ : Roopesh Rajanna |

D. K. Shivakumar|ಬೊಮ್ಮಾಯಿ ಧಮ್ ತಾಕತ್ ಇನ್ನೂ ಎರಡು ತಿಂಗಳು ಅಷ್ಟೇ

D. K. Shivakumar|ಬೊಮ್ಮಾಯಿ ಧಮ್ ತಾಕತ್ ಇನ್ನೂ ಎರಡು ತಿಂಗಳು ಅಷ್ಟೇ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist