ನಿಂಬೆಹಣ್ಣಿನ ಪ್ರಾಮುಖ್ಯತೆ ಎಷ್ಟಿದೆ ಎಂಬುವುದು ಎಲ್ಲರಿಗೂ ಕೂಡ ಗೊತ್ತಿದೆ. ಅಡುಗೆ ಮಾಡುವಾಗ ಹೆಚ್ಚು ಜನ ನಿಂಬೆಹಣ್ಣನ್ನು ಉಪಯೋಗಿಸುತ್ತಾರೆ. ಇನ್ನು ನಿಂಬೆಹಣ್ಣಿನ ಜ್ಯೂಸ್ ಮಾಡಿಕೊಂಡು ಕುಡಿತಾರೆ, ಊಟ ಮಾಡುವಾಗ ನಿಂಬೆ ಹಣ್ಣನ್ನ ಬಳಸುತ್ತಾರೆ. ಮಾತ್ರವಲ್ಲದೆ ಕೈಯನ್ನು ತೊಳಿಯುವಾಗ ಕೂಡ ನಿಂಬೆಹಣ್ಣನ್ನು ಬಳಸುತ್ತಾರೆ.

ಆರೋಗ್ಯದ ವಿಚಾರ ಅಂತ ಬಂದಾಗ ನಿಂಬೆ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಸಾಕಷ್ಟು ಬೆನಿಫಿಟ್ಸ್ ಗಳಿವೆ. ಆದ್ರೆ ಕೆಲವರಿಗೆ ನಿಂಬೆಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಮಸ್ಯೆಗಳು ಕೂಡ ಎದುರಾಗುತ್ತದೆ. ಯಾವ ರೀತಿ ಸಮಸ್ಯೆ ಎಂಬುದರ ಮಾಹಿತಿ ಹೀಗಿದೆ.
ಡೈಜೇಶನ್ ಪ್ರಾಬ್ಲಮ್
ನಿಂಬೆಹಣ್ಣಿನಲ್ಲಿ ಹೆಚ್ಚು ಸಿಟ್ರಿಕ್ ಅಂಶ ಇರುತ್ತದೆ.ಇದನ್ನ ಸೇವಿಸುವುದರಿಂದ ಎದೆಯುರಿ ಹೆಚ್ಚಾಗುತ್ತದೆ ಹಾಗೂ ಕೆಲವರಿಗೆ ಜೀರ್ಣಕಾರಿ ಸಮಸ್ಯೆಯಿಂದ ಹುಣ್ಣುಗಳನ್ನು ಉಂಟುಮಾಡುತ್ತದೆ. ಕೆಲವರಿಗೆ ಹೊಟ್ಟೆ ನೋವು ಗ್ಯಾಸ್ಟ್ರಿಕ್ ಜಾಸ್ತಿ ಆಗುವಂತದ್ದು , ಈ ಕಿರಿಕಿರಿಯನ್ನ ಕಡಿಮೆ ಮಾಡಿಕೊಳ್ಳಲು ನಿಂಬೆಹಣ್ಣನ್ನು ಹೆಚ್ಚಾಗಿ ಸೇವಿಸದೆ ಇರುವುದು ಉತ್ತಮ.

ಹೊಟ್ಟೆ ನೋವು
ನಿಂಬೆ ಹೆಣ್ಣಿನ ಬೆರೆಸಿದ ನೀರನ್ನು ಕುಡಿಯುವುದರಿಂದ ಹೊಟ್ಟೆ ಉಬ್ಸೆಟ್ ಆಗುತ್ತದೆ ಅದರಲ್ಲೂ ಕೂಡ ತುಂಬಾನೇ ಸೆನ್ಸಿಟಿವ್ ಮತ್ತು ಡೈಜೆಶನ್ ಪ್ರಾಬ್ಲಮ್ ಇದ್ದವರಿಗೆ. ಮಾತ್ರವಲ್ಲದೆ ವಾಕರಿಕೆ, ಅತಿಸಾರ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಕೂಡ ಎದುರಾಗುತ್ತದೆ.

ಮೈಗ್ರೇನ್
ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಅಂಶ ಅದ್ರಲ್ಲೂ ಕೂಡ ಟೈರಮೈನ್ ಹೆಚ್ಚುರುತ್ತದೆ ಇದು ತಲೆನೋವು ಅದನ್ನು ಕೂಡ ಮೈಗ್ರೇನ್ ಅನ್ನ ಹೆಚ್ಚು ಮಾಡುತ್ತದೆ.
ಹಲ್ಲುಗಳಿಗೆ ತೊಂದರೆ
ನಿಂಬೆಹಣ್ಣಿನಲ್ಲಿರುವ ಅಸಿಡಿಕ್ ಅಂಶ ಹಲ್ಲಿನ ಮೇಲಿರುವ ಕವಚವನ್ನು ಸವೆಸಬಹುದು ಹಾಗೂ ಇದರಿಂದಾಗಿ ಕ್ಯಾವಿಟಿಸ್ ಕೂಡ ಹೆಚ್ಚಾಗುತ್ತದೆ. ನಿಂಬೆ ಹುಳಿಯನ್ನ ಅತಿಯಾಗಿ ಸೇವಿಸುವುದರಿಂದ ಹಲ್ಲಿನಲ್ಲಿ ಒಂದು ರೀತಿಯ ನೋವು ಕಾಣಿಸಿಕೊಳ್ಳಬಹುದು ಮತ್ತು ಬೇರೆ ಪದಾರ್ಥಗಳನ್ನ ತಿನ್ನುವಾಗ ಕಿರಿಕಿರಿಯಾಗುತ್ತದೆ.
