ಕರೋನವೈರಸ್ ಸಾಂಕ್ರಾಮಿಕವು ‘ಡಿಜಿಟಲ್ ವ್ಯವಸ್ಥೆ’ಯನ್ನು ದೈನಂದಿನ ಜೀವನದ ಕೇಂದ್ರ ಭಾಗವನ್ನಾಗಿ ಮಾಡಿರುವುದಲ್ಲದೆ, ಅನೇಕ ಜನರು “ಆನ್‌ಲೈನ್ ವ್ಯಸನಿಯಾಗಿದ್ದಾರೆ” ಎಂದು ಒಂದು ಅಧ್ಯಯನ ವರದಿ ಮಾಡಿದೆ.
ಸೈಬರ್ ಭದ್ರತಾ ಸಂಸ್ಥೆ ‘ನಾರ್ಟನ್ ಲೈಫ್ ಲಾಕ್’ ಮನೆಯಲ್ಲಿ ಗ್ರಾಹಕರ ಆನ್ ಲೈನ್ ವರ್ತನೆ ಹೇಗಿರುತ್ತದೆ ಎಂಬುವುದರ ಬಗ್ಗೆ ಹೊಸ ಜಾಗತಿಕ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ. ಸಮೀಕ್ಷೆಗೊಳಪಟ್ಟ ಮೂವರು ಭಾರತೀಯರು (ಶೇ. 66) ಸಾಂಕ್ರಾಮಿಕ ರೋಗದಿಂದಾಗಿ ತಾವು ಆನ್‌ಲೈನ್ ವ್ಯಸನಿಯಾಗಿದ್ದೇವೆ ಎಂದು ಹೇಳಿದ್ದಾರೆ.
‘ದಿ ಹ್ಯಾರಿಸ್ ಪೋಲ್’ ಆನ್‌ಲೈನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ 1,000 ಭಾರತೀಯರನ್ನು ಸಮೀಕ್ಷೆ ಮಾಡಿದ್ದು, ಪ್ರತಿ10 ರಲ್ಲಿ 8(82 ಪ್ರತಿಶತ) ವಯಸ್ಕ ಭಾರತೀಯರು ಶೈಕ್ಷಣಿಕ ಅಥವಾ ಕೆಲಸದ ಉದ್ದೇಶಗಳನ್ನು ಹೊರತುಪಡಿಸಿ ಪರದೆಯ ಮೇಲೆ ಕಳೆಯುವ ಸಮಯ ಸಾಂಕ್ರಾಮಿಕದ ಸಮಯದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕೆಲಸದ ಅಥವಾ ಶೈಕ್ಷಣಿಕ ಸಮಯ ಹೊರತುಪಡಿಸಿ ಭಾರತದಲ್ಲಿ ವಯಸ್ಕರು ದಿನಕ್ಕೆ 4.4 ಗಂಟೆಗಳನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಾರೆ. ಸಮೀಕ್ಷೆಗೊಳಪಟ್ಟ ಭಾರತೀಯರ ಪ್ರಕಾರ ಅತಿ ಹೆಚ್ಚು ಮಂದಿ (84 ಪ್ರತಿಶತ) ಸ್ಮಾರ್ಟ್ ಫೋನ್‌ನಲ್ಲಿ ಸಮಯ ಕಳೆಯುತ್ತಾರೆ.
ಬಹುಪಾಲು ಭಾರತೀಯರು (74 ಪ್ರತಿಶತ) ಅವರು ಪರದೆಯ ಮುಂದೆ ಕಳೆಯುವ ಸಮಯವು ಅವರ ದೈಹಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಒಪ್ಪಿಕೊಂಡರೆ ಅರ್ಧಕ್ಕಿಂತ ಹೆಚ್ಚು (55 ಪ್ರತಿಶತ) ಇದು ಅವರ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. 76% ರಷ್ಟು ಮಂದಿ ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಪರದೆಯ ಸಮಯವನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
” ಆಫ್‌ಲೈನ್‌ನಲ್ಲಿ ಮಾಡಬಹುದಾದ ಚಟುವಟಿಕೆಗಳಿಗಾಗಿ ಆನ್‌ಲೈನ್ ಅನ್ನು ಅವಲಂಬಿಸುವುದನ್ನು ಸಾಂಕ್ರಾಮಿಕ ರೋಗವು ಹೆಚ್ಚಿಸಿದೆ ಎಂಬುದು ನಿಜವಾದರೂ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಸಮಯದ ನಡುವೆ ಆರೋಗ್ಯಕರ ಸಮತೋಲನವನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಮುಖ್ಯವಾಗಿ, ಅವರ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಿರುವಂತೆ ನೋಡಿಕೊಳ್ಳಬೇಕು” ಎಂದು ‘ನಾರ್ಟನ್ ಲೈಫ್‌ಲಾಕ್’ನ ಭಾರತ ಮತ್ತು ಸಾರ್ಕ್ ದೇಶಗಳ ಸೇಲ್ಸ್ ಮತ್ತು ಫೀಲ್ಡ್ ಮಾರ್ಕೆಟಿಂಗ್ ಮುಖ್ಯಸ್ಥರಾಗಿರುವ ರಿಟರ್ಸ್ ಚೋಪ್ರಾ ಹೇಳಿದ್ದಾರೆ. ಅಲ್ಲದೆ ಇದೇ ಅವಧಿಯಲ್ಲಿ ಸೈಬರ್ ಬೆದರಿಕೆಗಳ ಸಂಖ್ಯೆಯಲ್ಲಿ ಮತ್ತು ವಿಧಗಳಲ್ಲಿ ಹೆಚ್ಚಳ ಕಂಡಿದೆ ಎಂದೂ ಅವರು ಹೇಳಿದ್ದಾರೆ.
“ಬಳಕೆದಾರರು ತಮ್ಮ ಸಂಪರ್ಕ ಸಾಧನಗಳನ್ನು ಹೇಗೆ ಮತ್ತು ಎಲ್ಲಿ ಬಳಸುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು” ಎಂದು ಚೋಪ್ರಾ ಹೇಳಿದ್ದಾರೆ.
ವೈಯಕ್ತಿಕ ಅಥವಾ ಗೌಪ್ಯ ಮಾಹಿತಿಯ ಸೋರಿಕೆಯು ಅತ್ಯಂತ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಪೋಷಕರು ಈ ಸಂಗತಿಯನ್ನು ಅರಿತುಕೊಳ್ಳುವುದು ಮತ್ತು ಸೈಬರ್ ಸುರಕ್ಷತೆಯ ಅಗತ್ಯತೆಯ ಬಗ್ಗೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಮುಖ್ಯ ಎಂದು ಅವರು ಹೇಳಿದ್ದಾರೆ.
‘ದಿ ಹ್ಯಾರಿಸ್ ಪೋಲ್’ ಮತ್ತು ‘ನಾರ್ಟನ್ ಸೈಬರ್ ಸೇಫ್ಟಿ’ ಜಂಟಿಯಾಗಿ ಅಧ್ಯಯನ ಕೈಗೊಂಡಿದ್ದು 1,004 ಭಾರತೀಯರೂ ಸೇರಿದಂತೆ 8,000 ದೇಶಗಳಲ್ಲಿ 8,000 ಕ್ಕೂ ಹೆಚ್ಚು ವಯಸ್ಕರನ್ನು ಸಮೀಕ್ಷೆ ಮಾಡಿದೆ.