ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ವಾಹನ ಸವರಾರಿಗೆ ಒಂದಿಲ್ಲೊಂದು ಸಂಕಷ್ಟ ತಪ್ಪಿದ್ದಲ್ಲ. ರಸ್ತೆ ಗುಂಡಿ (Pot holes).. ಟ್ರಾಫಿಕ್ ಕಿರಿಕಿರಿ (Traffic issues) ಮಧ್ಯೆ ರೋಡ್ ರೇಜ್ ಪ್ರಕರಣಗಳು ಬೆಂಗಳೂರಿಗರನ್ನು ಹೈರಾಣು ಮಾಡುತ್ತಿದೆ. ಇದೀಗ ಸುಲಿಗೆಕೋರರ ಮತ್ತೊಂದು ಖತರ್ನಾಕ್ ಪ್ಲಾನ್ ಬಯಲಾಗಿದೆ.
ಸಾಮಾನ್ಯವಾಗಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ, ಸರಿಯಾದ ಸಮಯ ನೋಡಿ ಧಿಡೀರ್ ಅಂತ ಕಾರುಗಳಿಗೆ ಅಡ್ಡ ನುಗ್ಗಿ, ಆಮೇಲೆ ಆಕ್ಸಿಡೆಂಟ್ (Accident) ಕಥೆ ಕಟ್ತಾರೆ ಖದೀಮರು. ಕಾರನ್ನು ಅಡ್ಡಗಟ್ಟಿ ಸುಲಿಗೆ ಮಾಡೋ ಪ್ಲಾನ್ ಇವರದ್ದು. ಈ ಇಡೀ ಕೃತ್ಯ ಕಾರಿನ ಡ್ಯಾಶ್ ಕ್ಯಾಂ (Dash camera) ಒಂದರಲ್ಲಿ ಸೆರೆಯಾಗಿದೆ.

ಹೀಗೆ ಟಾರ್ಗೆಟ್ ಮಾಡಿ ಕಾರುಗಳಿಗೆ ಅಡ್ಡ ಬಂದು ಖದೀಮರು ಸುಲಿಗೆ ಮಾಡ್ತಾರೆ.ರಸ್ತೆ ದಾಟುವ ನೆಪದಲ್ಲಿ ಏಕಾಏಕಿ ನುಗ್ಗುವ ಆಸಾಮಿಗಳು,ಈ ವೇಳೆ ವೇಗವಾಗಿ ಬರುವ ಕಾರುಗಳ ಬಳಿ ಬಿದ್ದು ಆಕ್ಸಿಡೆಂಟ್ ಕಥೆ ಕಟ್ಟುತ್ತಾರೆ. ಆ ನಂತರ ಕಾರು ಚಾಲಕರಿಗೆ ಬೆದರಿಸಿ ಹಣ ವಸೂಲಿ ಮಾಡ್ತಾರೆ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇದೇ ರೀತಿಯ ಕೃತ್ಯ ಬೆಳಕಿಗೆ ಬಂದಿದೆ.ದಂಪತಿಗಳು ಹೋಗುತ್ತಿದ್ದ ಕಾರಿಗೆ ಏಕಾಏಕಿ ನುಗ್ಗಿದ ವ್ಯಕ್ತಿ ಕಾರು ಗುದ್ದಿದಂತೆ ಕೆಳಗೆ ಬೀಳ್ತಾನೆ.ಈ ವೇಳೆ ಬೈಕ್ ನಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರು ತಡೆಯಲು ಪ್ರಯತ್ನ ಮಾಡುತ್ತಾರೆ. ಕಾರು ತಡೆದು ಸುಲಿಗೆ ಮಾಡಲು ಯತ್ನ ನಡೆಸಿದ್ದಾರೆ.

ಅದ್ರೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಆಗಿದೆ ಎಂದಾಕ್ಷಣ ಬೈಕ್ ಸವಾರರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಕಾರಿನ ಮಾಲೀಕ ಎಕ್ಸ್ ನಲ್ಲಿ ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.