ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal nagaraj) ಬೆಳಗಾವಿಯಲ್ಲಿ ಮರಾಠಿ ಪುಂಡರ (Marathi goons) ಅಟ್ಟಹಾಸ ವಿರೋಧಿಸಿ ಮಾರ್ಚ್ 22 ರಂದು ಕರ್ನಾಟಕ ಬಂದ್ (Karnataka bundh) ಘೋಷಣೆ ಮಾಡಿದ್ದು, ಒಂದೆಡೆ ಬಂದ್ ದಿನ ಸಮೀಪವಾಗುತ್ತಿದ್ದರೂ ಗೊಂದಲ ಮಾತ್ರ ಇನ್ನು ಬಗೆಹರಿದಿಲ್ಲ.

ಹೌದು, ಮಾರ್ಚ್ 22 ರಂದು ಕರ್ನಾಟಕ ಬಂದ್ ಆಗಲಿದ್ಯೋ ಇಲ್ವೋ ಎಂಬ ಬಗ್ಗೆ ಈ ಕ್ಷಣಕ್ಕೂ ಗೊಂದಲ ಮುಂದುವರೆದಿದೆ. ಒಂದೆಡೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬಂದ್ ಮಾಡೇ ಮಾಡ್ತೀವಿ ಅಂತಿದ್ರೆ, ಮತ್ತೊಂದೆಡೆ ಸಂಘಟನೆಗಳು ಬಂದ್ ಉದ್ದೇಶದ ಬಗ್ಗೆ ಸ್ಪಷ್ಟತೆ ಕೊರತೆಯಿದೆ ಎಂದು ಹಿಂದೇಟು ಹಾಕುತ್ತಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಘಟನೆಗೆ ಬೆಳಗಾವಿಯಲ್ಲಿ ಬಂದ್ ಮಾಡೋದು ಸೂಕ್ತ. ಆದ್ರೆ ಬೆಂಗಳೂರು, ಅಖಂಡ ಕರ್ನಾಟಕ ಬಂದ್ ಮಾಡಿದ್ರೆ ಪ್ರಯೋಜನ ಏನು ಅಂತಾ ಕೆಲವು ಸಂಘಟನೆಗಳು ಪ್ರಶ್ನಿಸುತ್ತಿವೆ.ಹೀಗಾಗಿ ಹಲವು ಸಂಘಟನೆಗಳಿಂದಲೂ ಬಂದ್ ಬೇಡ ಅನ್ನೋ ಕೂಗು ಕೇಳಿ ಬರ್ತಿದೆ.