ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯೇ (Narendra modi) ಪ್ರಧಾನಿಯಾಗಲಿದ್ದಾರೆ ಎಂದು ಸಿಎಂ ಇಬ್ರಾಹಿಂ (cm ibrahim) ಭವಿಷ್ಯ ನುಡಿದಿದ್ದಾರೆ . ಈ ಬಾರಿಯೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗ್ತಾರೆ, ಆದರೆ ಅವರು ಅಂದುಕೊಂಡಷ್ಟು ಸಂಖ್ಯೆ ಬಿಜೆಪಿಗೆ (BJP)ದಕ್ಕುವುದಿಲ್ಲ .ಹೀಗಾಗಿ ಮಿತ್ರ ಪಕ್ಷಗಳ ಜೊತೆ ಸೇರಿ ಸರ್ಕಾರ ರಚಿಸಲಿದ್ದಾರೆ ಎಂದು ಸಿಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಇತ್ತೀಚಿಗೆ ಪ್ರಧಾನಿ ಮೋದಿ ಮಂಗಳಸೂತ್ರದ ಕುರಿತು ನೀಡಿದ ಹೇಳಿಕೆ ಜಾತಿ ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುವಂಥದ್ದು. ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ, ಮೂರನೇ ಬಾರಿ ಪ್ರಧಾನಿಯಾಗಲು ಹೊರಟಿರುವಂತಹ ನಾಯಕ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಇದೇ ಸಂದರ್ಭದಲ್ಲಿ ಪಕ್ಷ ಉಳಿಸಿಕೊಳ್ಳಲು , ಕೋಮುವಾದಿ ಬಿಜೆಪಿ ಜೊತೆಗೂಡಿ ಚುನಾವಣೆಗೆ ಹೋಗಿರುವುದು ಜೆಡಿಎಸ್ ಗೆ ತಲೆತಗ್ಗಿಸುವ ವಿಚಾರ . ಕೇವಲ ಮೂರು ಕ್ಷೇತ್ರಗಳನ್ನ ಪಡೆಯುವುದಕ್ಕೋಸ್ಕರ ದೇವೇಗೌಡರ ವ್ಯಕ್ತಿತ್ವವನ್ನು ಅಮಿತ್ ಶಾ ಮುಂದೆ ಅಡಮಾನ ಇಟ್ಟಂತಾಗಿದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ





