ಪ್ರಧಾನಿ ನರೇಂದ್ರ ಮೋದಿ ಅವರು ಇಂದು (17-09-2021) ತಮ್ಮ 71 ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಜನ್ಮದಿನವನ್ನು ಕಾಂಗ್ರೆಸ್ “ರಾಷ್ಟ್ರೀಯ ನಿರುದ್ಯೋಗ ದಿನ” ವೆಂದು ಆಚರಿಸುತ್ತಿದೆ.

ಕಾಂಗ್ರೆಸ್ ಅಭಿಯಾನಕ್ಕೆ ಇದುವರೆಗೆ ಭರಪೂರ ಬೆಂಬಲ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಶುಭಾಶಯ ಮಾಡರುವ ಟ್ವೀಟ್‌ಗಳಿಗಿಂತಲೂ ʼರಾಷ್ಟ್ರೀಯ ನಿರುದ್ಯೋಗ ದಿನʼ ಬಗ್ಗೆ ಮಾಡಿರುವ ಟ್ವೀಟ್‌ಗಳ ಸಂಖ್ಯೆ ಹೆಚ್ಚಿದೆ.
ಭಾರತದ ಇವತ್ತಿನ ಅತೀಹೆಚ್ಚು ಟ್ರೆಂಡಿನಲ್ಲಿರುವ ಹ್ಯಾಷ್ಟ್ಯಾಗ್‌ಳಲ್ಲಿ ಒಂದಾಗಿ #NationalUmemploymentDay ಸ್ಥಾನ ಪಡೆದಿದೆ. ಅದೂ ಅಲ್ಲದೆ, ನರೇಂದ್ರ ಮೋದಿ ಅವರೆ ಉದ್ಯೋಗ ನೀಡಿ ಎಂದು ಕೂಡಾ ಟ್ವೀಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಸೃಷ್ಟಿ ಎಲ್ಲಿ ಆಗುತ್ತಿದೆ ಎಂದೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ..
ಕಳೆದ ವರ್ಷ ಕೂಡಾ ಕಾಂಗ್ರೆಸ್ ಇದೇ ರೀತಿಯ ಜಾಲತಾಣ ಅಭಿಯಾನವನ್ನು ಮಾಡಿತ್ತು. ಆ ವೇಳೆಯೂ ಟ್ವಿಟರಿನಲ್ಲಿ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿತ್ತು. #राष्ट्रीय_बेरोजगार_दिवस
ಮೋದಿ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಣೆ