• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

14ಕ್ಕೆ ಏರಿದ ಓಮಿಕ್ರಾನ್‌ ಸಂಖ್ಯೆ : ಹೊಸ ವರ್ಷಾಚರಣೆಗೆ ಷರತ್ತು ಸಾಧ್ಯತೆ!

ಕರ್ಣ by ಕರ್ಣ
December 19, 2021
in ಕರ್ನಾಟಕ
0
ಓಮಿಕ್ರಾನ್ ಡೆಲ್ಟಾಕ್ಕಿಂತ 70 ಪಟ್ಟು ವೇಗವಾಗಿ ಸೋಂಕು ಹರಡುತ್ತದೆ, ಆದರೆ ತೀವ್ರತೆ ಕಡಿಮೆ: ಅಧ್ಯಯನ
Share on WhatsAppShare on FacebookShare on Telegram

ಓಮಿಕ್ರಾನ್‌ ಈ ಬಾರಿಯ ಹೊಸ ವರ್ಷಾಚರಣೆಗೂ ಕೊಳ್ಳಿ ಇಡಲಿದೆ. ಈಗಾಗಲೇ ಯಾವುದೇ ಕಾರಣಕ್ಕೂ ಹೊಸ ವರ್ಷಾಚರಣೆಗೆ ಅನುಮತಿ ಕೊಡಬಾರದು ಎಂದು ತಜ್ಞರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಎರಡಿದ್ದ ಓಮೈಕ್ರಾನ್‌ ಸೋಂಕು ಈಗ 14ಕ್ಕೆ ಬಂದು ನಿಂತಿದೆ. ಇನ್ನೂ ಹಲವರ ಜಿನೋಮಿಕ್‌ ಸೀಕ್ವೆನ್ಸಿಂಗ್‌ ವರದಿ ಬರುವುದಿದ್ದು ರಾಜ್ಯ ಆರೋಗ್ಯ ಇಲಾಖೆ ವರದಿ ಎದುರು ನೋಡುತ್ತಿದ್ದೆ. ಇದರ ಮಧ್ಯೆ ಅವಕಾಶ ಕೊಡಲೇ ಬಾರದು ಎಂದಿರುವ ರಾಜ್ಯ ತಾಂತ್ರಿಕ ಸಲಹಾ ಸಮಿತಿ ತಜ್ಞರು ಆದಾಯ ನೆಲೆಗಟ್ಟಿನಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ಕೊಡುವುದೇ ಆದಲ್ಲಿ ಕೆಲವೊಂದು ಷರತ್ತು ವಿಧಿಸಿ ಎಂದು ಹೇಳಿದೆ.

ADVERTISEMENT

ಈ ಬಾರಿಯೂ ಇಲ್ಲ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬಹುತೇಕ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಅವಕಾಶ ಕೊಡಲೇ ಬಾರದು ಒಂದು ವೇಳೆ ಅನುಮತಿ ಕೊಡುವುದೇ ಆದರೆ ಪೂರ್ಣಪ್ರಮಾಣದ ಆಚರಣೆಗೆ ಅವಕಾಶ ಕೊಡ ಬೇಡಿ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.  ಚಳಿಗಾಲ ಅಧಿವೇಶನ ಮುಗಿದ ಬೆನ್ನಲ್ಲೇ ಸರ್ಕಾರ ಈ ಬಗ್ಗೆ ತೀರ್ಮಾನ  ಅಗಲಿದೆ. ಹೆಚ್ಚು ಕಮ್ಮಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕಂಡೀಷನ್ಸ್ ಅಪ್ಲೈ ಆಗುವಂತ ಸಾಧ್ಯತೆ ಇದೆ.

ಬಿಬಿಎಂಪಿ ಸೇರಿದಂತೆ ತಾಂತ್ರಿಕ ಸಲಹಾ ಸಮಿತಿಯಿಂದಲೂ ನಿರ್ಬಂಧಕ್ಕೆ ಸಲಹೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಬಗ್ಗೆ ಸಭೆ ಮೇಲೆ ಸಭೆ ನಡೆಸಿ ಪಬ್ ಬಾರ್ ಸಂಘಗಳ  ಜೊತೆಗೂ ಪಾಲಿಕೆ ಮೀಟಿಂಗ್ ಮಾಡಿದೆ. ಸಭೆಯಲ್ಲಿ ಈಗಷ್ಟೇ ವ್ಯಾಪಾರ ಚೇತರಿಕೆಯಲ್ಲಿದೆ, ಅನುಮತಿ ಕೊಡಿ ಎಂದು ಸಂಘಗಳು ಮನವಿ ಮಾಡಿಕೊಂಡಿದೆ.

ಸರ್ಕಾರಕ್ಕೆ TAC ಕೊಟ್ಟಿರು ಸಲಹೆಗಳೇನೇನು.!?

–              ಹೊಸ ವರ್ಷದಂದು ಪಬ್ ಬಾರ್ ಓಪನ್ ಅವಧಿ ಕಡಿತಗೊಳಿಸಲು ಸಲಹೆ

–              ರಾತ್ರಿ 9 ಗಂಟೆ ವರೆಗೆ ಮಾತ್ರ ಅವಕಾಶ ಕೊಟ್ಟರೆ ಸಾಕು

–              50-50 ಮಾದರಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕು

–              ಒಂದೇ ಕಡೆ ಗುಂಪು ಸೇರಿಸಿ ಆಚರಣೆಗೆ ಅವಕಾಶ ನೀಡಬಾರದು

–              ಬೆಂಗಳೂರು ಮಾತ್ರವಲ್ಲ, ಬೆಂಗಳೂರು ಅಕ್ಕ ಪಕ್ಕದ ಜಿಲ್ಲೆಗಳಿಗೂ ಇದೇ ಮಾದರಿಯ ನಿಯಮ ಜಾರಿ ಮಾಡಬೇಕು

–              500ರ ಬದಲು 200 ಮಂದಿಗೆ ಮಾತ್ರ ತೆರೆದ ಜಾಗದಲ್ಲಿ ಅವಕಾಶ ಕಲ್ಪಿಸಬೇಕು

–              ಓಪನ್ ನ್ಯೂ ಇಯರ್ ಪಾರ್ಟಿಗೆ ಬಿಬಿಎಂಪಿ ಅವಕಾಶ ಕೊಡಬಾರದು

–              ಹೊಸ ವರ್ಷ ಆಚರಣೆಗೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಗದಂತೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು

–              ರಾಜ್ಯದ ಟೂರಿಸ್ಟ್ ಸ್ಪಾಟ್ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಕ್ರಮಕ್ಕೆ ಸೂಚಿಸಬೇಕು

–              ಕೊಡಗು, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನಿಗಾ ಹೆಚ್ಚಿಸಬೇಕು

–              ಸಾಧ್ಯವಾದರೆ ಮದ್ಯ ಮಾರಾಟಕ್ಕೆ ಸಮಯ ನಿಗದಿ ಮಾಡಬೇಕು

ಆದರೆ ಅಂತಿಮ ನಿರ್ಧಾರವನ್ನು ಸರ್ಕಾವೇ ತೆಗೆದುಕೊಳ್ಳಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೂ ತೆರೆ ಬೀಳಲಿದೆ. ಇದಾದ ಬಳಿಕ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಜೊತೆ ಸಭೆ ನಡೆಸಿ ಸಿಎಂ ಬಸವರಾಜ ಬೊಮ್ಮಾಯಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ತಿಳಿಸಿದ್ದಾರೆ. ಕಳೆದರಡು ವರ್ಷವೂ ಕೊರೋನಾ ಕಾರಣದಿಂದ ಹೊಸ ವರ್ಷ ಆಚರಣೆಗೆ ತಡೆಯೊಡ್ಡಲಾಗಿತ್ತು. ಆದರೆ ಡಿಸೆಂಬರ್‌ಗೂ ಮೊದಲು ಈ ಬಾರಿಯಾದರೂ ಕೊರೋನಾ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಆಚರಣೆಗೆ ಅವಕಾಶ ಸಿಗುತ್ತೆ ಎಂದುಕೊಳ್ಳಲಾಗಿತ್ತು. ಆದರೆ ಕೊರೋನಾ ಹೊಸ ಅವತಾರದಲ್ಲಿ ಓಮೈಕ್ರಾನ್‌ ರೂಪದಲ್ಲಿ ಎಂಟ್ರಿ ಕೊಟ್ಟು ಮತ್ತೊಮ್ಮೆ ನ್ಯೂ ಇಯರ್‌ ಸೆಲೆಬ್ರೇಷನ್‌ ಗೆ ಅಡ್ಡಗಾಲಾಕಿದೆ. ಸದ್ಯ ಇಡೀ ರಾಜ್ಯದಲ್ಲಿ ಒಟ್ಟು 14 ಪ್ರಕರಣಗಳಿವೆ. ಇದರ ನಡುವೆ ಸರ್ಕಾರ ಯಾವ ನಿರ್ಧಾರ ತಾಳಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

Tags: BJPCongress PartyCovid 19ಓಮಿಕ್ರಾನ್‌ಕರೋನಾಕೋವಿಡ್-19ಬಿಜೆಪಿಹೊಸ ವರ್ಷಾಚರಣೆ
Previous Post

ನಾನು ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ, ದೇಶಭಕ್ತ RSSನ ಸಂಘಟನೆಯ ಸ್ವಯಂ ಸೇವಕ : DK Shivakumarಗೆ CT Ravi ಟಾಂಗ್

Next Post

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ : ಬೆಳಗ್ಗೆ 5 ಗಂಟೆಯಿಂದಲೇ ರೈಲು ಸಂಚಾರ ಆರಂಭ

Related Posts

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?
ಕರ್ನಾಟಕ

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

by ಪ್ರತಿಧ್ವನಿ
August 13, 2026
0

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಏಕಾಂಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಕಳೆದ ಹಲವು ದಿನಗಳಿಂದ ಬೆಟ್ಟದಲ್ಲಿ ನಿರಂತರ ಶೋಧ...

Read moreDetails
ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

August 13, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
Next Post
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ : ಬೆಳಗ್ಗೆ 5 ಗಂಟೆಯಿಂದಲೇ ರೈಲು ಸಂಚಾರ ಆರಂಭ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ : ಬೆಳಗ್ಗೆ 5 ಗಂಟೆಯಿಂದಲೇ ರೈಲು ಸಂಚಾರ ಆರಂಭ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada