ತಮ್ಮ ಸ್ಕಿನ್ ತುಂಬಾನೇ ಕ್ಲಿಯರ್ ಆಗಿರಬೇಕು ಎಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತೆ. ಅದಕ್ಕಂತನೆ ಸಾಕಷ್ಟು ರೀತಿಯ ಫೇಸ್ ಪ್ಯಾಕ್ ಗಳು, ಸ್ಕ್ರಬ್ , ಫೇಸ್ ಮಾಸ್ಕ್ ಎಲ್ಲವನ್ನು ಕೂಡ ಬಳಸುತ್ತಾರೆ. ಇದೆಲ್ಲವೂ ಸರಿ ಇದರ ಜೊತೆಗೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಮುಖಕ್ಕೆ ಆಲಿವ್ ಆಯಿಲ್ ಹಚ್ಚಿ ಮಲಗುವುದರಿಂದ ಒಂದಲ್ಲ ಎರಡಲ್ಲ ಹೆಚ್ಚು ಲಾಭವಿದೆ..ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಾಯಿಶ್ಚರೈಸ ಮಾಡುತ್ತದೆ
ಒಂದು ಟೇಬಲ್ ಸ್ಪೂನ್ ಅಷ್ಟು ಆಲಿವ್ ಆಯಿಲ್ ಅನ್ನ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇಡೀ ರಾತ್ರಿ ಹಾಗೆ ಬಿಡಿ. ಆಲಿವ್ ಆಯಿಲ್ ತ್ವಚೆಗೆ ಹಚ್ಚುವುದರಿಂದ ನ್ಯಾಚುರಲ್ ಆಗಿ ಮಾಯಿಶ್ಚರೈಸ್ ಮಾಡುತ್ತದೆ ಮಾತ್ರವಲ್ಲದೆ ಸ್ಕಿನ್ ಹೈಡ್ರೇಟ್ ಆಗಿ ಕೂಡ ಇರುತ್ತದೆ. ಮುಖ್ಯವಾಗಿ ತ್ವಚೆಯನ್ನ ಸಾಫ್ಟ್ ಹಾಗೂ ಸ್ಮೂತ್ ಮಾಡುತ್ತದೆ. ಆಲಿವ್ ಆಯಿಲ್ ಒಂದಿದ್ದರೆ ಸಾಕು ಇತರೆ ಮಾಯಿಶ್ಚರೈಸರ್ ಗಳಿಗೆ ಗುಡ್ ಬೈ ಹೇಳಬಹುದು.
ಒಣ ಚರ್ಮಕ್ಕೆ ಗುಡ್ ಬೈ
ಹೆಚ್ಚು ಜನಕ್ಕೆ ಡ್ರೈ ಸ್ಕಿನ್ ಸಮಸ್ಯೆ ಇರುತ್ತೆ ಅದರಲ್ಲೂ ಚಳಿಗಾಲ ಬಂತು ಅಂದ್ರೆ ಈ ತ್ವಚೆ ಡ್ರೈ ಆಗೋದು ಜಾಸ್ತಿ ಆಗುತ್ತದೆ.. ಹಾಗಾಗಿ ರಾತ್ರಿ ಮಲಗುವ ಮುನ್ನ ಅಥವಾ ಇಡೀ ದಿನ ತ್ವಚೆಗೆ ಆಲಿವ್ ಆಯಿಲ್ ಬಳಸಿ. ಹೀಗೆ ಮಾಡುವುದರಿಂದ ಡ್ರೈ ಸ್ಕಿನ್ ಶಮನಗೊಳ್ಳುತ್ತದೆ ಹಾಗೂ ತ್ವಚೆಯಲ್ಲಿ ಕಿರಿಕಿರಿ ಕಡಿಮೆಯಾಗುತ್ತದೆ. ಕಾರಣ ಆಲಿವ್ ಆಯಿಲ್ ಅಲ್ಲಿ ಫ್ಯಾಟಿ ಆಸಿಡ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಿದೆ.
ಚರ್ಮ ಸುಕ್ಕುಗಟ್ಟುವುದು
ಕೆಲವರ ವಯಸ್ಸು ಚಿಕ್ಕದಾಗಿದ್ರು ಕೂಡ ಮುಖದಲ್ಲಿ ಫೈನ್ ಲೈನ್ಸ್ ಮತ್ತು ಚರ್ಮ ಸುಕ್ಕುಗಟ್ಟುವ ಸಮಸ್ಯೆ ಹೆಚ್ಚಿರುತ್ತದೆ. ಇಂತವರು ಆಲಿವ್ ಆಯಿಲ್ ತಪ್ಪದೇ ಪ್ರತಿದಿನ ಬಳಸುವುದರಿಂದ. ಈ ಪ್ರಾಬ್ಲಮ್ ಇಂದ ಹೊರ ಬರಬಹುದು.
ಇಷ್ಟು ಮಾತ್ರವಲ್ಲದೆ ಆಲಿವ್ ಎಣ್ಣೆಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ನಿಮ್ಮ ಚರ್ಮವನ್ನು ಸೂರ್ಯನ ಹಾನಿ ಮತ್ತು ಯುವಿ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.