ಟಿ.ನರಸೀಪುರ : ಭರ್ಜರಿ ಬಾಡೂಟದ ನೂಕು-ನುಗ್ಗಲಲ್ಲಿ ಕಾಲ್ತುಳಿತಕ್ಕೆ ವೃದ್ದೆ ಕಾಲು ಮೂಳೆ ಮುರಿತ. ಸಮಾಜಕಲ್ಯಾಣ ಸಚಿವ ಹೆಚ್ಸಿಎಂ ಕೃತಜ್ಞತಾ ಸಮಾರಂಭದ ಬಾಡೂಟದ ವೇಳೆ ಘಟನೆ. ಟಿ.ನರಸೀಪುರ ತಾಲ್ಲೂಕಿನ ಹೆಳವರ ಹುಂಡಿ ಸಮೀಪ ಆಯೋಜಿಸಿದ್ದ ಬಾಡೂಟ. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಡೂಟ ಆಯೋಜನೆ .
ಬಾಡೂಟಕ್ಕೆ ಕಾರ್ಯಕರ್ತರ ನೂಕು ನುಗ್ಗಲು.



ನೂಕು ನುಗ್ಗಲಲ್ಲಿ ಕೆಳಕ್ಕುರುಳಿದ 66ವರ್ಷದ ಚಿಕ್ಕಮುತ್ತಮ್ಮ . ಕಾಲ್ತುಳಿತಕ್ಕೆ ಚಿಕ್ಕಮುತ್ತಮ್ಮ ಬಲಗಾಲ ಮೂಳೆ ಮುರಿತ.
ಅಲ್ಲಿಯೇ ಇದ್ದ ಯುವಕರಿಂದ ಚಿಕ್ಕ ಮುತ್ತಮ್ಮ ರಕ್ಷಣೆ ಹಾಗೂ ಅಂಬುಲೆನ್ಸ್ ಗೆ ಕರೆ. ಟ್ರಾಫಿಕ್ ಜಾಮ್ ನಿಂದಾಗಿ ಸಮಯಕ್ಕೆ ಬಾರದ ಅಂಬುಲೆನ್ಸ್.
ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮಿಕ ಚಿಕಿತ್ಸೆ. ಹೆಚ್ಚಿನ ಚಿಕಿತ್ಸೆಗಾಗಿ ಕೆ ಆರ್ ಆಸ್ಪತ್ರೆಗೆ ರವಾನೆ.