
ಬೆಳಗಾವಿ:ಬೆಳಗಾವಿಯ ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ ಅಂತಾರಾಷ್ಟ್ರೀಯ ಇನ್ಸುಲಿನ್ ಟೇಪ್ ಉತ್ಪಾದನಾ ಕಾರ್ಖಾಗೆ ಬೆಂಕಿ ತಗುಲಿದ ಪರಿಣಾಮ ಯಲ್ಲಪ್ಪ ಗುಂಡ್ಯಾಗೋಳ (20) ಎಂಬ ಕಾರ್ಮಿಕ ಯುವಕ ಮೃತಪಟ್ಟಿದ್ದಾರೆ.ಸುಟ್ಟು ಕರಕಲಾಗಿ ಅಳಿದುಳಿದ ಅವರ ಮೃತದೇಹದ ಅವಶೇಷಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ತುಂಬಿ ತಂದೆಯ ಕೈಗೆ ಕೊಟ್ಟಿದ್ದಾರೆ.

ದುಃಖತಪ್ತ ತಂದೆ ಅದೇ ಕೈಚೀಲ ಹಿಡಿದು ಮನೆಗೆ ತೆರಳಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಕಾರ್ಖಾಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಇಡೀ ಕಾರ್ಖಾನೆ ವ್ಯಾಪಿಸಿ ಮಾರ್ಕಾಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ ಸುಟ್ಟು ಕರಕಲಾಗಿದ್ದರೆ, ಬೆಳಗಾವಿ ನಗರದ ಮಾರುತಿ ನಾರಾಯಣ ಕಳವೇಕರ, ಹಳೆ ಬೆಳಗಾವಿಯು ಯಲ್ಲಪ್ಪ ಸಲಗುಡೆ, ಝಾಪವಾಡಿಯ ರಂಜಿತ್ ಪಾಟೀಲ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





