Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

OBCಯ ನಿರ್ಲಕ್ಷ್ಯ, ಉಗ್ರ ಹಿಂದುತ್ವ, ಸಾಮಾಜಿಕ ನ್ಯಾಯ ನಿರಾಕರಣೆ: ಉ.ಪ್ರದಲ್ಲಿ ಬಿಜೆಪಿಯ ಪಕ್ಷಾಂತರದ ಹಿಂದಿನ ಕಾರಣಗಳೇನು?

ಫಾತಿಮಾ

ಫಾತಿಮಾ

January 15, 2022
Share on FacebookShare on Twitter

ಕಳೆದ ಕೆಲವು ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಪ್ರಬಲವಾದ ಯಾದವರ ವಿರುದ್ಧ ಪ್ರಚಾರವನ್ನು ಹೆಚ್ಚಿಸುವ ಮೂಲಕ ಒಟ್ಟು ಮತದಾರರಲ್ಲಿ ಶೇಕಡಾ ಮೂವತ್ತಕ್ಕಿಂತ ಹೆಚ್ಚಿರುವ ಹಿಂದುಳಿದ ವರ್ಗಗಳ ಮತವನ್ನು ತನ್ನ ಪರವಾಗಿ ಕ್ರೋಢೀಕರಿತ್ತು. ರಾಜ್ಯ ರಾಜಕೀಯದಲ್ಲಿ ಕುರ್ಮಿ, ಲೋಧ್, ರಜಪೂತ್, ಪಾಲ್ಸ್, ಸೈನಿ, ಕಶ್ಯಪ್, ಮೌರ್ಯ ಮತ್ತು ಇತರ ಹಲವು ಸಮುದಾಯಗಳನ್ನು ಒಳಗೊಂಡಿರುವ ಅತ್ಯಂತ ಹಿಂದುಳಿದ ವರ್ಗಗಳು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದು ಪ್ರಧಾನಿ ನೇತೃತ್ವದ ಬಿಜೆಪಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆದುಕೊಳ್ಳಲಿವೆ ಎಂದು ಆ ಸಮುದಾಯಗಳು ಭಾವಿಸಿಕೊಂಡಿದ್ದವು. ಇದೀಗ ಮತ್ತೊಮ್ಮೆ ಯುಪಿ ಚುನಾವಣೆಯ ಹೊಸ್ತಿಲಲ್ಲಿ ನಿಂತಿದ್ದು ಯಾದವೇತರ ಇತರೆ ಹಿಂದುಳಿದ ವರ್ಗದ ಬೆಂಬಲವನ್ನು ಸಮಾಜವಾದಿ ಪಕ್ಷ ಪಡೆಯಲು ಯಶಸ್ವಿಯಾಗಲಿದೆಯೇ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಹುಟ್ಟಿದೆ.

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಬಿಜೆಪಿ ನಾಯಕರ ಇತ್ತೀಚಿನ ವಲಸೆಯು ಇಂತಹ ಪ್ರಶ್ನೆ ಹುಟ್ಟಲು ಬಹುಮುಖ್ಯ ಕಾರಣವಾಗಿದೆ. ಯಾಕೆಂದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಎಲ್ಲಾ ಹಾಲಿ ಬಿಜೆಪಿ ಶಾಸಕರು ಹಿಂದುಳಿದ ಸಮುದಾಯಗಳಿಗೆ ಸೇರಿದವರು. ರಾಜ್ಯದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಅವರ ನಾಲ್ಕು ಸಹೋದ್ಯೋಗಿಗಳ ರಾಜೀನಾಮೆಗಳು ಗರಿಷ್ಠ ಗಮನ ಸೆಳೆದಿದ್ದರೂ, ಹೆಚ್ಚಿನ ಹಿಂದುಳಿದ ವರ್ಗಗಳ ನಾಯಕರಲ್ಲಿ ಇಂತಹ ಪ್ರವೃತ್ತಿಯು ಕಳೆದ ವರ್ಷ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲೇ ತೋರಿತ್ತು. ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ದೂರು ಯಾದವೇತರ OBC ಸಮುದಾಯಗಳಿಗೆ ಸೇರಿದ ನಾಯಕರಿಂದ ಮತ್ತು ಸ್ವಲ್ಪ ಮಟ್ಟಿಗೆ ಬ್ರಾಹ್ಮಣ ಮತ್ತು ಜಾಟ್ಗಳಲ್ಲದ ದಲಿತರಿಂದ ಹೊರಹೊಮ್ಮಿತ್ತು.

ಗಮನಾರ್ಹವಾಗಿ, ಬಿಜೆಪಿ ತೊರೆದ ಹಿಂದುಳಿದ ಸಮುದಾಯಗಳಿಗೆ ಸೇರಿದ ಶಾಸಕರು ಬಿಜೆಪಿಯಿಂದ ‘ತಿರಸ್ಕೃತರಾಗಿರುವ’ ಬಗ್ಗೆ ಸಾಧ್ಯವಾದಷ್ಟು ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸಿದ್ದು ಇತ್ತೀಚೆಗೆ ಬಿಜೆಪಿ ತೊರೆದ ಮೌರ್ಯ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯು ‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯ’ಕ್ಕೆ ಸೇರಿರುವ ನಾಯಕರನ್ನು ನಿರ್ಲಕ್ಷಿಸಿದೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ರಾಜಕೀಯ ವೀಕ್ಷಕರ ಪ್ರಕಾರ ಹಿಂದುಳಿದ ಸಮುದಾಯಗಳಲ್ಲಿ ಬಿಜೆಪಿಯ ಬಗೆಗಿನ ಅಸಮಾಧಾನಕ್ಕೆ ಪ್ರಮುಖವಾಗಿ ಎರಡು ಅಂಶಗಳು ಕಾರಣವಾಗಿವೆ. ಮೊದಲನೆಯದಾಗಿ, ಎಲ್ಲರನ್ನೂ ಒಳಗೊಳ್ಳುವ ಪಕ್ಷವಾಗಿ ತನ್ನನ್ನು ಬಿಂಬಿಸಿಕೊಂಡ ಬಿಜೆಪಿ ಆ ಪ್ರಕಾರ ನಡೆದುಕೊಳ್ಳಲು ವಿಫಲವಾಗಿರುವುದು. ಎರಡನೆಯದು, ಸಂಘಪರಿವಾರದ ಹಿಂದುತ್ವದ ರಾಜಕೀಯ ಮಾರ್ಗವನ್ನು ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಕಾಳಜಿಗಳನ್ನು ಹಿಂದಕ್ಕೆ ತಳ್ಳಲಾಗಿದೆ ಎಂದು ಕೆಲವು ಸಮುದಾಯಗಳು ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿವೆ.

ಯಾದವರು ಮತ್ತು ಮುಸ್ಲಿಮರ ಪಕ್ಷವಾಗಿ ಎಸ್ಪಿ ಗುರುತಿಸಿಕೊಂಡಿದ್ದರಿಂದ ಮತ್ತು ಬಹುಜನ ಸಮಾಜ ಪಕ್ಷವು ಜಾಟವ್ರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ, ಬಿಜೆಪಿಯು ಇತರ ಹಿಂದುಳಿದ ಸಮುದಾಯಗಳ ಆಕಾಂಕ್ಷೆಗಳನ್ನು ಈಡೇರಿಸಬಹುದೆಂದು MBCಗಳು ಮತ್ತು ಜಾಟವೇತರರು ನಿರೀಕ್ಷಿಸಿದ್ದರು. ಆದರೆ ಅದು ಸರ್ಕಾರವನ್ನು ರಚಿಸಿದ ನಂತರ, ಈ ಗುಂಪುಗಳನ್ನು ಪ್ರತಿನಿಧಿಸುವ ನಾಯಕರಿಗೆ ಪ್ರಮುಖವಲ್ಲದ ಖಾತೆಗಳನ್ನು ನೀಡಲಾಯಿತು. ಹಾಗಾಗಿಯೇ ಈಗ ಅಖಿಲೇಶ್ ಯಾದವ್ರ ಮಿತ್ರರಾಗಿರುವ ರಾಜ್ಭರ್ ನಾಯಕ ಓಂ ಪ್ರಕಾಶ್ ರಾಜ್ಭರ್ ಎನ್ಡಿಎ ತೊರೆದಿದ್ದರು.

ಸಮಾಜವಾದಿ ಪಕ್ಷದ ನಾಯಕ ಮತ್ತು ರಾಜಕೀಯ ವೀಕ್ಷಕ ಸುಧೀರ್ ಪನ್ವಾರ್ ಅವರು ಈ ಬಗ್ಗೆ ಮಾತನಾಡುತ್ತಾ “ಹಿಂದೂ ಗುರುತನ್ನು ಪ್ರತಿಪಾದಿಸಲು ಮಾತ್ರ ಕಾಳಜಿ ವಹಿಸುವ ನಾಯಕನು ಹಿಂದುಳಿದ ಜಾತಿಗಳ ಹಿತಾಸಕ್ತಿಗಳಿಗೆ ಸಹಜವಾಗಿಯೇ ವಿರೋಧಿಯಾಗುತ್ತಾನೆ” ಎಂದಿದ್ದಾರೆ. ಹಾಗಾಗಿಯೇ ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಹಿಂದುತ್ವ ಪ್ರೇರಿತ ರಾಜಕೀಯಕ್ಕೆ ಪ್ರತಿತಂತ್ರವಾಗಿ ಎಲ್ಲರನ್ನೂ ಒಳಗೊಳ್ಳುವ ರಾಜಕೀಯವನ್ನು ಅಖಿಲೇಶ್ ಯಾದವ್ರ ನಾಯಕತ್ವದಲ್ಲಿ ಮುನ್ನಲೆಗೆ ತರಲಾಯಿತು. ಈ ಯೋಜನೆಯ ಅಂಗವಾಗಿ ಸ್ವತಃ ಅಖಿಲೇಶ್ ಅವರೇ ತಮ್ಮ ಪಕ್ಷಕ್ಕೆ ಅಂಟಿಕೊಂಡಿರುವ ಮುಸ್ಲಿಮರ ಮತ್ತು ಯಾದವರ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಲು MBCಗಳ ಬೆಂಬಲ ಕೋರಿದರು. ಇದು ಮೇಲ್ಜಾತಿ ಗುಂಪುಗಳು, ಯಾದವೇತರ ಒಬಿಸಿಗಳು ಮತ್ತು ಜಾಟವೇತರ ದಲಿತರಿಂದ ಕೂಡಿದ ಬಿಜೆಪಿಯ ಸಾಮಾಜಿಕ ತಳಹದಿಯಲ್ಲಿ ಬಿರುಕು ಮೂಡಿಸಲು ಯಶಸ್ವಿಯಾಯಿತು.

ಆದರೆ ಅಖಿಲೇಶ್ ಅವರು ಯಾದವೇತರ ಒಬಿಸಿಗಳು ಮತ್ತು ದಲಿತರಿಗೆ ತಮ್ಮ ಕಾಳಜಿ ಪ್ರಾಮಾಣಿಕವೆಂದು ಮನವರಿಕೆ ಮಾಡುವುದು ಸುಲಭವೇನಲ್ಲ.
ನಮ್ಮ ಮತಕ್ಕಾಗಿ ಬಿಜೆಪಿಯವರು ನಮ್ಮನ್ನು ಬಳಸಿಕೊಂಡಿದ್ದಾರೆ ಎಂಬ ಭಾವನೆ ಈ ಸಮುದಾಯಗಳಿಗೆ ಇವೆಯಾದರೂ ಬೇರೆ ಉತ್ತಮ ಪರ್ಯಾಯವಿಲ್ಲ ಎನ್ನುವ ಭಾವನೆ ಈಗಲೂ ಈ ವರ್ಗದವರಲ್ಲಿದೆ. ಕನೌಜ್ನ ತಿರ್ವಾ ವಿಧಾನಸಭಾ ಕ್ಷೇತ್ರದಲ್ಲಿ ಲೋಧ್ ಸಮುದಾಯಕ್ಕೆ ಸೇರಿದ ಅರವಿಂದ್ ಕುಮಾರ್ ಅವರು ದಿ ವೈರ್ ಜೊತೆ ಮಾತಾನಾಡುತ್ತಾ “ಕನಿಷ್ಠ, ಈ ಆಡಳಿತದಲ್ಲಿ ಪೊಲೀಸರು ನಮ್ಮಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಿದ್ದಾರೆ. ಎಸ್ಪಿ ಆಡಳಿತದಲ್ಲಿ ಪೊಲೀಸರು ಬಡವರಿಂದ ಹಣ ವಸೂಲಿ ಮಾಡುವ ಮೂಲಕ ಕುಖ್ಯಾತರಾಗಿದ್ದರು. ಯಾದವರಿಂದ ಮಾತ್ರ ಪೊಲೀಸರು ದೂರ ಉಳಿಯುತ್ತಿದ್ದರು. ಆ ಅಭ್ಯಾಸಗಳು ಈಗ ನಿಂತುಹೋಗಿವೆ ”ಎಂದು ಹೇಳಿದ್ದಾರೆ.

ಬಿಲ್ಹೌರ್ ವಿಧಾನಸಭಾ ಕ್ಷೇತ್ರದ ಕುರ್ಮಿ ಸಮುದಾಯದ ಶಶಾಂಕ್ ವರ್ಮಾ “ಅಖಿಲೇಶ್ ಸಾಫ್ ಚಾವಿ ವಾಲಾ ನೇತಾ (ಕ್ಲೀನ್ ಇಮೇಜ್ ಹೊಂದಿರುವ ನಾಯಕ). ಆದರೆ ಪಕ್ಷದಲ್ಲಿ ಅವರಿಗಿಂತ ಕೆಳಗಿರುವವರು ನಿಜವಾದ ದಂಗೆಕೋರರು” ಎಂದು ಹೇಳುತ್ತಾರೆ. “ಎಸ್ಪಿ ನಾಯಕರು ಈಗ ವಿನಯಪೂರಿತರಾಗಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬಂದ ಮರುಕ್ಷಣವೇ ಗೂಂಡಾಗಿರಿಯ ತಮ್ಮ ಎಂದಿನ ದಾರಿಗೆ ಮರಳುತ್ತಾರೆ ಎಂಬುದು ನಮಗೆ ಗೊತ್ತಿದೆ” ಎಂದೂ ಅವರು ಹೇಳುತ್ತಾರೆ.

ಅದೇನೇ ಇದ್ದರೂ, ಅಖಿಲೇಶ್ ಜಾತಿಗಳನ್ನು ಮೀರಿ ಜನಪ್ರಿಯವಾಗಿದ್ದಾರೆ. ಅಖಿಲೇಶ್ ಅಧಿಕಾರಾವಧಿಯು ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕಂಡಿದೆ ಎಂದು ಉತ್ತರ ಪ್ರದೇಶದ ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಯುಪಿ ಚುನಾವಣೆಯಲ್ಲಿ ಗೆಲ್ಲಲು ಜಾತಿ ಮಟ್ಟದ ಧ್ರುವೀಕರಣವು ಐತಿಹಾಸಿಕವಾಗಿ ಮಹತ್ವದ್ದಾಗಿದೆ. ಎಸ್ಪಿ ಗೆಲ್ಲಲು, ಅದು ಬಿಜೆಪಿಯ ಸಾಮಾಜಿಕ ತಳಹದಿಯನ್ನು ತೀವ್ರವಾಗಿ ಕೆಡಿಸಬೇಕು ಮತ್ತು ಬಿಜೆಪಿ ಇತರ ಹಿಂದುಳಿದ ವರ್ಗಗಳನ್ನು ಸಾಮಾಜಿಕವಾಗಿ ಮೇಲೆ ಬರಲು ಬಿಡುತ್ತಿಲ್ಲ ಎಂಬುವುದನ್ನು ಸಶಕ್ತವಾಗಿ ಜನರ ಮುಂದಿಡಬೇಕು.

SP ಯ ಪ್ರಸ್ತುತ ಯೋಜನೆಗಳನ್ನು ಮತ್ತು ಪ್ರಚಾರ ಸಭೆಗಳನ್ನು ಗಮನಿಸಿದರೆ ಈ ದಿಸೆಯಲ್ಲಿ ಅದು ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು. ಆದರೆ ಬಿಜೆಪಿಯನ್ನು ಸೋಲಿಸಲು ಯಾರ ಮತಗಳ ಅಗತ್ಯವಿದೆಯೋ ಅವರನ್ನು ಅಖಿಲೇಶ್ ಯಶಸ್ವಿಯಾಗಿ ಮನವೊಲಿಸುವರೇ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.

RS 500
RS 1500

SCAN HERE

don't miss it !

ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವು
ಕ್ರೀಡೆ

ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವು

by ಪ್ರತಿಧ್ವನಿ
May 15, 2022
ಮೇ.19ಕ್ಕೆ SSLC ಫಲಿತಾಂಶ ಪ್ರಕಟ : ಬಿ.ಸಿ ನಾಗೇಶ್
ಇದೀಗ

ಮೇ.19ಕ್ಕೆ SSLC ಫಲಿತಾಂಶ ಪ್ರಕಟ : ಬಿ.ಸಿ ನಾಗೇಶ್

by ಪ್ರತಿಧ್ವನಿ
May 13, 2022
ಮೈಸೂರು ಸೇರಿ 40 ಕಡೆ ಸಿಬಿಐ ದಾಳಿ: ಎನ್ ಜಿಒಗಳಿಂದ ವಿದೇಶೀ ದಾನ ದುರ್ಬಳಕೆ?
ದೇಶ

ನಕಲಿ ದಾಳಿ ನಡೆಸಿದ ನಾಲ್ವರು ಸಿಬಿಐ ಅಧಿಕಾರಿಗಳು ಅರೆಸ್ಟ್!‌

by ಪ್ರತಿಧ್ವನಿ
May 12, 2022
ಫೇಕ್ ವಿಡಿಯೋ ಹಂಚಿಕೊಂಡ ಕಿರಣ್ ಬೇಡಿ : ನೆಟ್ಟಿಗರಿಂದ ತರಾಟೆ!
ದೇಶ

ಫೇಕ್ ವಿಡಿಯೋ ಹಂಚಿಕೊಂಡ ಕಿರಣ್ ಬೇಡಿ : ನೆಟ್ಟಿಗರಿಂದ ತರಾಟೆ!

by ಚಂದನ್‌ ಕುಮಾರ್
May 12, 2022
ಫೋರ್ಬ್ಸ್ ಗ್ಲೋಬಲ್ 2000 : ಭಾರತೀಯ ಕಂಪನಿಗಳಲ್ಲಿ ಅಗ್ರ ಸ್ಥಾನಕ್ಕೇರಿದ ರಿಲಯನ್ಸ್!
ದೇಶ

ಫೋರ್ಬ್ಸ್ ಗ್ಲೋಬಲ್ 2000 : ಭಾರತೀಯ ಕಂಪನಿಗಳಲ್ಲಿ ಅಗ್ರ ಸ್ಥಾನಕ್ಕೇರಿದ ರಿಲಯನ್ಸ್!

by ಪ್ರತಿಧ್ವನಿ
May 13, 2022
Next Post
ದೇಶದಲ್ಲೇ ʻಮೊದಲ ಸ್ಯಾನಿಟರಿ ಮುಕ್ತ ಗ್ರಾಮʼವಾದ ಕೇರಳದ ಕುಂಬಳಂಗಿ: ಏನಿದರ ಮಹತ್ವ?

ದೇಶದಲ್ಲೇ ʻಮೊದಲ ಸ್ಯಾನಿಟರಿ ಮುಕ್ತ ಗ್ರಾಮʼವಾದ ಕೇರಳದ ಕುಂಬಳಂಗಿ: ಏನಿದರ ಮಹತ್ವ?

ಅಖಿಲೇಶ್ ಗೆ ದಲಿತರ ಮತಬೇಕು ಆದರೆ ದಲಿತ ನಾಯಕರು ಬೇಡ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್

ಅಖಿಲೇಶ್ ಗೆ ದಲಿತರ ಮತಬೇಕು ಆದರೆ ದಲಿತ ನಾಯಕರು ಬೇಡ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್

ಜನವರಿ 16 ಅನ್ನು ಸ್ಟಾರ್ಟ್ಅಪ್ ದಿನವಾಗಿ ಆಚರಣೆ : ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಜನವರಿ 16 ಅನ್ನು ಸ್ಟಾರ್ಟ್ಅಪ್ ದಿನವಾಗಿ ಆಚರಣೆ : ಪ್ರಧಾನಿ ನರೇಂದ್ರ ಮೋದಿ ಘೋಷಣೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist