• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಾಲೆಗೆ ‘ಮಾಂಸಾಹಾರ’ ತಂದಿದ್ದಕ್ಕೆ ನರ್ಸರಿ ವಿದ್ಯಾರ್ಥಿ ಅಮಾನತು; ಕೋಮುವಾದಿ ಪ್ರಾಂಶುಪಾಲರ ವಿರುದ್ಧ ಆಕ್ರೋಶ

ಪ್ರತಿಧ್ವನಿ by ಪ್ರತಿಧ್ವನಿ
September 6, 2024
in Top Story, ಇತರೆ / Others
0
Share on WhatsAppShare on FacebookShare on Telegram

ಲಕ್ನೋ:ಮಧ್ಯಾಹ್ನದ ಊಟಕ್ಕಾಗಿ ಶಾಲೆಗೆ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಮಾಂಸಾಹಾರ meat)ತಂದಿದ್ದಕ್ಕಾಗಿ ನರ್ಸರಿ (Nursery student)ವಿದ್ಯಾರ್ಥಿಯನ್ನು ಶಾಲೆಯ ಪ್ರಾಂಶುಪಾಲರು( Principal)ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ADVERTISEMENT

ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ಖಾಸಗಿ ನರ್ಸರಿ ಶಾಲೆಯಲ್ಲಿ ಘಟನೆ ನಡೆದಿದೆ. ಮಾಂಸಾಹಾರ ತಂದಿದ್ದಕ್ಕಾಗಿ ವಿದ್ಯಾರ್ಥಿಯನ್ನು ಪ್ರಾಂಶುಪಾಲ ನಿಂದಿಸಿ, ಅಮಾನತು ಮಾಡಿರುವ ದೃಶ್ಯವನ್ನು ವಿದ್ಯಾರ್ಥಿಯ ತಾಯಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ, ಘಟನೆ ಬೆಳಕಿಗೆ ಬಂದಿದೆ.

ವಿಡಿಯೋದಲ್ಲಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಯ ತಾಯಿ ನಡುವೆ ತೀವ್ರ ವಾಗ್ವಾದ ನಡೆದಿದೆ. “ನಮ್ಮ ದೇವಸ್ಥಾನಗಳಿಗೆ ಅಪಚಾರ ಮಾಡಿ, ಶಾಲೆಗೆ ಮಾಂಸಾಹಾರ ತರುವ ಇಂತಹ ಮಕ್ಕಳಿಗೆ ನೈತಿಕತೆಯನ್ನು ಕಲಿಸಲು ನಾವು ಬಯಸುವುದಿಲ್ಲ” ಎಂದು ಪ್ರಾಂಶುಪಾಲರು ತಾಯಿಗೆ ಹೇಳುವುದು ವಿಡಿಯೋದಲ್ಲಿ ಕಂಡುಬಂದಿದೆ.

ಎಲ್ಲರಿಗೂ ಮಾಂಸಾಹಾರ ತಿನ್ನಿಸಿ, ಅವರನ್ನು ಇಸ್ಲಾಂಗೆ ಮತಾಂತರಿಸುವ ಬಗ್ಗೆ ವಿದ್ಯಾರ್ಥಿ ಮಾತನಾಡಿದ್ದಾನೆ” ಎಂದು ಪ್ರಾಂಶುಪಾಲ ಆರೋಪಿಸಿದ್ದಾರೆ. ಅವರ ಆರೋಪವನ್ನು ವಿದ್ಯಾರ್ಥಿಯ ತಾಯಿ ನಿರಾಕರಿಸಿದ್ದಾರೆ.

A 4-5-year-old Muslim child was expelled from Hilton Public School, Amroha, over allegations of bringing non-veg food.

The principal allegedly stated, "We can't educate kids who break our temples, harm Hindus, talk about converting all Hindus, and destroying Ram Mandir." pic.twitter.com/7E3duOyNn9

— Mohd Shadab Khan (@ShadabVAHIndia) September 5, 2024

“ತನ್ನ ಮಗನಿಗೆ 7 ವರ್ಷ. ಆತ ಮತಾಂತರದಂತಹ ಗಂಭೀರ ವಿಚಾರಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ” ಎಂದು ತಾಯಿ ಹೇಳಿದ್ದಾರೆ. ಅದಕ್ಕೆ, ಪ್ರಾಂಶುಪಾಲರು “ಮಗು ಮನೆಯಲ್ಲಿ ಎಲ್ಲವನ್ನೂ ಕಲಿಯುತ್ತದೆ. ಅವರ ಪೋಷಕರು ಎಲ್ಲವನ್ನೂ ಕಲಿಸುತ್ತಾರೆ” ಎಂದು ಕೋಮುದ್ವೇಷದಿಂದ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ.ಇತರ ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಯ ರಿಜಿಸ್ಟರ್‌ನಿಂದ ವಿದ್ಯಾರ್ಥಿಯ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ಸುಮಾರು 7 ನಿಮಿಷಗಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಅಮ್ರೋಹಾ ಪೊಲೀಸರು, “ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್ (ಡಿಐಎಸ್) (DIS) ಕೈಗೊಳ್ಳಲಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ತನಿಖೆಗಾಗಿ ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ” ಎಂದು ಹೇಳಿದ್ದಾರೆ.

Tags: Communal HatredMeat FoodNursery SchoolNursery Student SuspensionPrimary and Secondary Education Departmentprincipal
Previous Post

ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯ ಕೆಲಸವೇ.?? ನಟ ಪ್ರೇಮ್..!!

Next Post

ರೇಣುಕಾಸ್ವಾಮಿ ಹಾಗು ಪವಿತ್ರಾಗೌಡ ಸೀಕ್ರೆಟ್​​ ಲವ್​​ ಚಾಟ್​​..! ವಯಸ್ಕರಿಗೆ ಮಾತ್ರ

Related Posts

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ
Top Story

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

by ಪ್ರತಿಧ್ವನಿ
May 2, 2026
0

ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
Next Post

ರೇಣುಕಾಸ್ವಾಮಿ ಹಾಗು ಪವಿತ್ರಾಗೌಡ ಸೀಕ್ರೆಟ್​​ ಲವ್​​ ಚಾಟ್​​..! ವಯಸ್ಕರಿಗೆ ಮಾತ್ರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada