ಮುಂಬೈ ದಾಳಿಯ (Mumbai terror attack) ಮಾಸ್ಟರ್ ಮೈಂಡ್ ತಹವೂರ್ ಹುಸೇನ್ ರಾಣಾನನ್ನು ಇಂದಿನಿಂದ NIA ವಿಚಾರಣೆಗೆ ಒಳಪಡಿಸಲಿದೆ. ಕಳೆದ ರಾತ್ರಿ (ಏ.10) NIA ಕೋರ್ಟ್ ನಿಂದ 18 ದಿನಗಳ ಕಾಲ ರಾಣಾನನ್ನು NIA ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ.
ದೆಹಲಿಯ NIA ಹೆಡ್ ಕ್ವಾರ್ಟರ್ಸ್ ನಲ್ಲಿರುವ ಮೂರನೇ ಮಹಡಿಯ ಸೆಲ್ ನಲ್ಲಿ ರಾಣಾ ನನ್ನು NIA ಡಿಜಿ ಸದಾನಂದ ವಸಂತ ದಾಟೆ ನೇತೃತ್ವದಲ್ಲಿ ತಹವೂರ್ ವಿಚಾರಣೆಗೆ ಒಳಪಡಿಸಲಾಗುತ್ತದೆ.

2008 ರ ಮುಂಬೈ ದಾಳಿಯಲ್ಲಿ ಪಾಕ್ ಸೇನೆಯ ಪಾತ್ರ ಏನು ಮತ್ತು ಐಎಸ್ಐ ಪಾತ್ರದ ಬಗ್ಗೆ NIA ರಾಣಾ ವಿಚಾರಣೆ ನಡೆಸಲಿದೆ.ಲಷ್ಕರ್ ಇ ತೋಯ್ಬಾ ಉಗ್ರರಿಗೆ ರಾಣಾ ನೀಡಿದ್ದ ಪ್ಲ್ಯಾನಿಂಗ್ ನೆರವಿನ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.
ಈ ತಹವೂರ್ ಹುಸೇನ್ ರಾಣಾ ವಿರುಧ್ಧ ಭಾರತದ ವಿರುದ್ಧ ಯುದ್ದ ಸಾರಿದ ಆರೋಪವಿದ್ದು, ಯುಎಪಿಎ ಕಾಯಿದೆಯಡಿ ಕೇಸ್ ದಾಖಲಾಗಿದೆ.ಇದರ ಜೊತೆಗೆ ಕೊಲೆ, ಸಂಚು ಆರೋಪಗಳಡಿ NIA ಯಿಂದ ಕೇಸ್ ದಾಖಲಾಗಿದೆ.
ಈ ರಾಣ ಡೇವಿಡ್ ಕೊಲಮನ್ ಹೆಡ್ಲಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಕೆನಡಾದಲ್ಲಿ ಹುಟ್ಟಿ, ಪಾಕ್ ಸೇನೆಯಲ್ಲಿ ವೈದ್ಯನಾಗಿದ್ದ ತಹವೂರ್ ಹುಸೇನ್ ರಾಣಾನಿಂದ ಹಲವು ವಿಚಾರವನ್ನು NIA ಕಲೆಹಾಕಲಿದೆ.












