Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

NIA ಕಾಯ್ದೆಯೇ ಅಸಂವಿಧಾನಿಕ ಎಂದ ಛತ್ತೀಸ್ ಘಡ

NIA ಕಾಯ್ದೆಯೇ ಅಸಂವಿಧಾನಿಕ ಎಂದ ಛತ್ತೀಸ್ ಘಡ
NIA ಕಾಯ್ದೆಯೇ ಅಸಂವಿಧಾನಿಕ ಎಂದ ಛತ್ತೀಸ್ ಘಡ

January 18, 2020
Share on FacebookShare on Twitter

ದೇಶದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳು ಸೇರಿದಂತೆ ಇನ್ನಿತರೆ ವಿಧ್ವಂಸಕಾರಿ ಕೃತ್ಯಗಳ ಪ್ರಕರಣಗಳ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಕೇಂದ್ರ ಸರ್ಕಾರಿ ಸ್ವಾಮ್ಯದ ತನಿಖಾ ಸಂಸ್ಥೆಯ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗತೊಡಗಿವೆ.

ಹೆಚ್ಚು ಓದಿದ ಸ್ಟೋರಿಗಳು

ಭಯೋತ್ಪಾದಕ ಕೃತ್ಯದಲ್ಲಿ ನಿಜ್ಜರ್‌ ಕೈವಾಡ: ಕೆನಡಾದಲ್ಲಿ ಹತ್ಯೆಯಾದ ಖಲಿಸ್ತಾನಿ ವಿರುದ್ಧ ಭಾರತ ಆರೋಪ

ಮಂಡ್ಯ ಬಂದ್​ ಬಗ್ಗೆಯೂ ಕೊಂಕು ಮಾತು.. ರೈತರ ಬಗ್ಗೆ ಯಾಕೀ ಕೋಪ..?

ತಮಿಳುನಾಡಿನ ಮೇಲೆ ಹೆಚ್ಚಾಗ್ತಿದೆ ಕನ್ನಡಿಗರ ಆಕ್ರೋಶ: ಬಂದ್, ಪ್ರತಿಭಟನೆ ವೇಳೆ ಹೈಅಲರ್ಟ್​!

ಈ ತನಿಖಾ ಸಂಸ್ಥೆಯ ಅಸ್ತಿತ್ವ ಮತ್ತು ಪಾವಿತ್ರ್ಯತೆಯ ಬಗ್ಗೆ ಅನುಮಾನಗಳು ಬರತೊಡಗಿರುವುದರಿಂದ ಸಂಸ್ಥೆಯ ಕಾನೂನಿನ ಸಂಪೂರ್ಣ ವಿವರಗಳನ್ನು ಕೋರಿ ಹಲವಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ಈ ಎನ್ಐಎ ಕಾಯ್ದೆಯೇ ಅಸಂವಿಧಾನಿಕವಾಗಿದೆ ಎಂದು ಛತ್ತೀಸ್ ಘಡ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಎನ್ಐಎ ಕಾಯ್ದೆ ವಿರುದ್ಧ ಬಿಲಾಸ್ಪುರ ಹೈಕೋರ್ಟಿನಲ್ಲಿ ಎರಡು ಅರ್ಜಿಗಳು ದಾಖಲಾಗಿವೆ. ಈ ಎನ್ಐಎ ಕಾಯ್ದೆ 2008 ಸಂವಿಧಾನದ 131 ನೇ ವಿಧಿಗೆ ವಿರುದ್ಧವಾಗಿದೆ ಎಂದು ಛತ್ತೀಸ್ ಘಡ ಸರ್ಕಾರ ಹೇಳಿದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಎನ್ಐಎ ಕಾಯ್ದೆಯನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನುಷ್ಠಾನಕ್ಕೆ ತಂದಿತ್ತು. ಆದರೆ, ಇದೀಗ ಇದೇ ಪಕ್ಷ ನ್ಯಾಯಾಲಯದಲ್ಲಿ ಈ ಕಾಯ್ದೆಯ ವಿರುದ್ಧ ನ್ಯಾಯಾಲಯದ ಕಟಕಟೆ ಹತ್ತಿದೆ.

ಬಿಜೆಪಿ ಶಾಸಕ ಭೀಮಾ ಮಾಂಡವಿ ಹತ್ಯೆಗೆ ಸಂಬಂಧಿಸಿದಂತೆ ಛತ್ತೀಸ್ ಘಡ ಪೊಲೀಸರು ನಡೆಸಿದ ತನಿಖೆಯನ್ನು ಎನ್ಐಎ ಒಪ್ಪಿಕೊಂಡಿರಲಿಲ್ಲ ಮತ್ತು ಆರೋಪಿಗಳನ್ನು ಬಂಧಿಸಿ ಚಾರ್ಜ್ ಶೀಟ್ ದಾಖಲಿಸಿತ್ತು.

ಇದಲ್ಲದೇ ಜೀರಂ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದ ಎನ್ಐಎ ರಾಜ್ಯ ಸರ್ಕಾರ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ತನಿಖಾ ವರದಿಯನ್ನು ನೀಡಲಿಲ್ಲ. ಈ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ವಿ.ಸಿ.ಶುಕ್ಲಾ, ನಂದಕುಮಾರ್ ಮತ್ತು ಮಹೇಂದ್ರ ಕರ್ಮಾ ಅವರು ಹತ್ಯೆಯಾಗಿದ್ದರು. ಈ ಪ್ರಕರಣದ ಪ್ರಮುಖ ರೂವಾರಿಗಳು ಯಾರೆಂಬುದು ಬಹಿರಂಗವಾಗಲಿ ಎಂಬ ಉದ್ದೇಶದಿಂದ ಸರ್ಕಾರ ವರದಿಯನ್ನು ನೀಡುವಂತೆ ಹಲವು ಬಾರಿ ಮನವಿ ಮಾಡಿತ್ತು.

ಮೊದಲ ಪ್ರಕರಣದಲ್ಲಿ ಎನ್ಐಎ ದ ಅಸ್ತಿತ್ವ ಮತ್ತು ರಾಜ್ಯ ಸರ್ಕಾರಗಳ ತನಿಖೆಗಳಲ್ಲಿ ಅದರ ಹಸ್ತಕ್ಷೇಪವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಎರಡನೇ ಪ್ರಕರಣದಲ್ಲಿ ರಾಜ್ಯ ಸರ್ಕಾರಗಳ ವಿಚಾರದಲ್ಲಿ ಮೂಗು ತೂರಿಸುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್ಐಎ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.

ಇದೀಗ ಎನ್ಐಎ ಮೂಲಕ ಸಂವಿಧಾನದ 131 ನೇ ವಿಧಿಯ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಎನ್ಐಎ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರಗಳ ತನಿಖಾ ವಿಚಾರಗಳಲ್ಲಿ ತಲೆ ಹಾಕುತ್ತಿದೆ. ಇದು ಸಂವಿಧಾನ ಉಲ್ಲಂಘನೆಯ ಕ್ರಮವಾಗಿದೆ ಎಂದು ಛತ್ತೀಸ್ ಘಡ ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿದೆ.

ರಾಜ್ಯ ಸರ್ಕಾರದ ಅನುಮತಿಯಿಲ್ಲದೇ ಯಾವುದೇ ಪೊಲೀಸರು ರಾಜ್ಯದ ವಿಚಾರದಲ್ಲಿ ತಲೆ ಹಾಕುವಂತಿಲ್ಲ. ಅನುಮತಿ ನೀಡುವ ಹಕ್ಕನ್ನು ಸಂವಿಧಾನ ರಾಜ್ಯ ಸರ್ಕಾರಗಳಿಗೆ ಒದಗಿಸಿದೆ. ಎನ್ಐಎ ಕಾಯ್ದೆ ಪ್ರಕಾರ ಈ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರಗಳ ಪೊಲೀಸರ ಮೇಲೆ ಸವಾರಿ ಮಾಡಲು ಅನುಮತಿ ನೀಡಿದಂತಿದೆ.

ಅಲ್ಲದೇ ಎನ್ಐಎ ಕಾಯ್ದೆಯ ಪ್ರಕಾರ ಯಾವುದೇ ಕಾರಣ ಅಥವಾ ಸಮರ್ಥನೆಯೂ ಇಲ್ಲದೇ ಅಥವಾ ಅನುಮತಿಯನ್ನೂ ಪಡೆಯದೇ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಏಕೆಂದರೆ, ಕೇಂದ್ರ ಸರ್ಕಾರದ ಅಧಿಕಾರವನ್ನು ನಿಯಂತ್ರಿಸುವ ಯಾವುದೇ ನಿಯಮಾವಳಿಗಳು ಇಲ್ಲ. ಈ ಕಾರಣದಿಂದಲೇ ಎನ್ಐಎ ನೇರವಾಗಿ ರಾಜ್ಯ ಸರ್ಕಾರಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ.

ರಾಜ್ಯ ಸರ್ಕಾರದ ಪರವಾಗಿ ವಿವೇಕ್ ತನ್ಖಾ ಅವರು ಎನ್ಐಎ ಕಾರ್ಯ ನಿರ್ವಹಣೆ ವಿರುದ್ಧ ಬಿಲಾಸ್ಪುರ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿರೀಕ್ಷೆಯಂತೆ ಈ ಅರ್ಜಿಯ ವಿಚಾರಣೆಗೆ ಬಾಕಿ ಉಳಿದಿದ್ದು, ಇದರ ಕುರಿತು ಸುಪ್ರೀಂ ಕೋರ್ಟ್ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.

ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎನ್ಐಎ ಹೈಕೋರ್ಟಿನಲ್ಲಿ ವಾದ ಮಂಡಿಸುತ್ತಾ, ತನ್ನ ಪರಿಮಿತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ತನಿಖೆಗಳಿಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಮತ್ತು ದೇಶದ ಯಾವುದೇ ರಾಜ್ಯಗಳಲ್ಲಿ ಬೇಕಾದರೂ ಸ್ವಯಂಪ್ರೇರಿತವಾಗಿ ತನಿಖೆ, ವಿಚಾರಣೆ ನಡೆಸಲು ಸ್ವಾತಂತ್ರ್ಯವಿದೆ ಎಂದು ವಾದಿಸಿದೆ.

ಈ ಎನ್ಐಎ ಕಾಯ್ದೆಯ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಲ್.ಪುನಿಯಾ ಅವರು ಹೇಳುವಂತೆ, ಈ ಕಾಯ್ದೆಗೆ ಎನ್ ಡಿಎ ಸರ್ಕಾರ ತಿದ್ದುಪಡಿ ತಂದಿತ್ತು. ಇದು ಸಂಪೂರ್ಣವಾಗಿ ನಿರಂಕುಶವಾಗಿದ್ದು, ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಎನ್ಐಎ ಯಾವುದೇ ಸಮನ್ವಯತೆ ಸಾಧಿಸದೇ, ರಾಜ್ಯ ಸರ್ಕಾರಗಳ ಅನುಮತಿಯನ್ನೇ ಪಡೆಯದೇ ತನಿಖೆ ನಡೆಸಲು ಅವಕಾಶ ಮಾಡಿಕೊಟ್ಟಿತ್ತು ಅಂದಿನ ಎನ್ ಡಿಎ ಸರ್ಕಾರ. ಈ ಮೂಲಕ ರಾಜ್ಯಗಳ ಸಾರ್ವಭೌಮತೆಯನ್ನು ಉಲ್ಲಂಘಿಸಿತ್ತು. ದೆಹಲಿ ಪೊಲೀಸ್ ಕಾಯ್ದೆಯಡಿಯಲ್ಲಿಯೇ ಸಿಬಿಐ ಸಹ ಕಾರ್ಯನಿರ್ವಹಣೆ ಮಾಡುತ್ತಿದೆ. ಯಾವುದೇ ತನಿಖೆ ನಡೆಸುವ ಮುನ್ನ ಸಂಬಂಧಿತ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕೆಂಬ ನಿಯಮಾವಳಿಯನ್ನು ರೂಪಿಸಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಭೂಪೇಶ್ ಭಾಗೆಲ್ ನೇತೃತ್ವದ ಛತ್ತೀಸ್ ಘಡ ಅರ್ಜಿ ಸಲ್ಲಿಸುವ ಮೂಲಕ ಸಂವಿಧಾನದ 131 ನೇ ವಿಧಿಯನ್ನು ಕೇಂದ್ರ ಸರ್ಕಾರ ಉಲ್ಲಂಘನೆ ಮಾಡುತ್ತಿದೆ ಎಂದು ಅರ್ಜಿ ಸಲ್ಲಿಸಿರುವ ಎರಡನೇ ರಾಜ್ಯವೆನಿಸಿದೆ. ಕಳೆದ ವಾರ ಸಿಎಎ ವಿಚಾರದಲ್ಲಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.

ಕೃಪೆ: ದಿ ವೈರ್

RS 500
RS 1500

SCAN HERE

Pratidhvani Youtube

«
Prev
1
/
5477
Next
»
loading
play
Kaveri | ಕಾವೇರಿ ಯಾರಿಗೆ ಸೇರಿದ್ದು..? ಯಾರ್ಯಾರ ರಾಜಕೀಯ ಏನು..? | HD Kumaraswamy | @PratidhvaniNews
play
Lakshmi Hebbalkar | ಆತ್ಮ ವಿಶ್ವಾಸದಿಂದ ಪಕ್ಷ ಸಂಘಟಿಸೋಣ | Congress Leader | @PratidhvaniNews
«
Prev
1
/
5477
Next
»
loading

don't miss it !

“ಅರಸಯ್ಯನ ಪ್ರೇಮಪ್ರಸಂಗ”ದಲ್ಲಿ ಬಂತು “ಅಯ್ಯಯ್ಯೋ ರಾಮ” ಹಾಡು .
ಸಿನಿಮಾ

“ಅರಸಯ್ಯನ ಪ್ರೇಮಪ್ರಸಂಗ”ದಲ್ಲಿ ಬಂತು “ಅಯ್ಯಯ್ಯೋ ರಾಮ” ಹಾಡು .

by ಪ್ರತಿಧ್ವನಿ
September 19, 2023
ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಸಾಧಾರಣ ಮಳೆ  ಸಾಧ್ಯತೆ
Top Story

ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಸಾಧಾರಣ ಮಳೆ ಸಾಧ್ಯತೆ

by ಪ್ರತಿಧ್ವನಿ
September 21, 2023
Top Story

ತೆಲಂಗಾಂಣದಲ್ಲಿ ಗ್ಯಾರಂಟಿ ಮಂತ್ರ ಘೋಷಣೆ  ಮಾಡಿದ ರಾಹುಲ್‌ ಗಾಂಧಿ..!

by ಪ್ರತಿಧ್ವನಿ
September 17, 2023
ಕೆಎಎಸ್ ಅಧಿಕಾರಿಗಳಿಗೆ ಪ್ರಾಧಾನ್ಯತೆ ನೀಡಿದರೆ, ರಾಜ್ಯದ ಅಭಿವೃದ್ಧಿಗೆ ಪೂರಕ: ಬಸವರಾಜ ಬೊಮ್ಮಾಯಿ
Top Story

ಕೆಎಎಸ್ ಅಧಿಕಾರಿಗಳಿಗೆ ಪ್ರಾಧಾನ್ಯತೆ ನೀಡಿದರೆ, ರಾಜ್ಯದ ಅಭಿವೃದ್ಧಿಗೆ ಪೂರಕ: ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
September 24, 2023
ಕಲ್ಯಾಣ ಕರ್ನಾಟಕ ಉತ್ಸವ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ..!
Top Story

ಕಲ್ಯಾಣ ಕರ್ನಾಟಕ ಉತ್ಸವ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ..!

by ಪ್ರತಿಧ್ವನಿ
September 17, 2023
Next Post
NRC ಪಿತಾಮಹ ಯಾರು?

NRC ಪಿತಾಮಹ ಯಾರು?

ದೆಹಲಿಯಲ್ಲಿ ಯುದ್ಧಕ್ಕೂ ಮುನ್ನ ಬಿಜೆಪಿ ಶಸ್ತ್ರತ್ಯಾಗವೇ?

ದೆಹಲಿಯಲ್ಲಿ ಯುದ್ಧಕ್ಕೂ ಮುನ್ನ ಬಿಜೆಪಿ ಶಸ್ತ್ರತ್ಯಾಗವೇ?

ಗಣರಾಜ್ಯೋತ್ಸವದ ಧ್ವಜಾರೋಹಣ ಭಾಗ್ಯವಿಲ್ಲ ನೂತನ ಸಚಿವರಿಗೆ!

ಗಣರಾಜ್ಯೋತ್ಸವದ ಧ್ವಜಾರೋಹಣ ಭಾಗ್ಯವಿಲ್ಲ ನೂತನ ಸಚಿವರಿಗೆ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist