ನಿರಂತರವಾಗಿ ಏರಿಕೆಯಾಗುತ್ತಿರುವ ತೈಲ ದರಗಳ ಹೆಚ್ಚಳದ ಬೆನ್ನಲ್ಲೇ, KSRTC ಕೂಡ ವಿವಿಧ ಕಾರ್ಯಗಳಿಗೆ ಬಾಡಿಗೆ ಪಡೆಯುವಂತ ಬಸ್ ಗಳ ಕಿಲೋಮೀಟರ್ ದರ ಹೆಚ್ಚಿಸಿದೆ.
ಈ ಕುರಿತಂತೆ KSRTC ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ನಿಗಮದ ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸಲು ವಿಧಿಸಬೇಕಾಗದ ದರ, ಕಿಲೋಮೀಟರ್ ಷರತ್ತು, ನಿಬಂಧನೆಗಳ ಸಂಬಂಧ ಸಾಮಾನ್ಯ ಸ್ಥಾಯಿ ಆದೇಶ ಹಾಗೂ ಸುತ್ತೋಲೆಗಳಲ್ಲಿ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳದಿಂದಾಗಿ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಳವಾಗಿರೋ ಕಾರಣದಿಂದಾಗಿ, ಈ ಕೆಳಗಿನಂತೆ ನಿಗಮದ ಬಸ್ ಗಳ ವರ್ಗದ ಅನುಸಾರ, ಸಾಂದರ್ಭಿಕ ಒಪ್ಪಂದದ ದರಗಳನ್ನು ಪರಿಷ್ಕರಿಸಿ ಆದೇಶಿಸಿದ್ದಾರೆ.
ಹೀಗಿದೆ KSRTC ಬಸ್ಸುಗಳ ಸಾಂದರ್ಭಿಕ ಒಪ್ಪಂದದ ನೂತನ ದರ ಪಟ್ಟಿ
ಇನ್ನೂ ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಆದೇಶಕ್ಕೂ ಮೊದಲು ಬುಕ್ಕಿಂಗ್ ಮಾಡಿದವರಿಗೆ ಹಳೆಯ ದರಗಳೇ ಅನ್ವಯಿಸಲಿವೆ.