
ರಾಜ್ಯದಲ್ಲಿ ವಕ್ಪ್ ಆಸ್ತಿ ಗೊಂದಲಕ್ಕೆ ವಿಧಾನಸಭೆಯಲ್ಲಿ ಸರ್ಕಾರ ಉತ್ತರ ನೀಡಿದೆ.ವಕ್ಫ್ ಆಸ್ತಿ ವಿಚಾರವಾಗಿ ಸಚಿವ ಜಮ್ಮೀರ್ ಅಹಮದ್ ಉತ್ತರ ನೀಡಿದ್ದಾರೆ. ವಕ್ಪ್ ಆಸ್ತಿ 1 ಲಕ್ಷದ 28 ಸಾವಿನ ಎಕರೆ ಆಸ್ತಿಯನ್ನು ದಾನಿಗಳು ದಾನ ಮಾಡಿರೋದು.

ಸರ್ಕಾರದ ಒಂದು ಇಂಚು ಜಾಗ ವಕ್ಪ್ ಬೋರ್ಡ್‌ಗೆ ತಗೊಂಡಿಲ್ಲ. 17,900 ಎಕರೆ ಬಗ್ಗೆ ವಕ್ಪ್ ಆಸ್ತಿ ಅದಾಲತ್‌ಗೆ ಮುಂದಾಗಿದ್ದೇವೆ. ರೈತರದ್ದು ಆಗಲಿ, ದೇವಸ್ಥಾನಗಳಿದ್ದಾಗಲಿ ಹೋಗಿಲ್ಲ. ಈ ವೇಳೆ ನಿಮ್ಮ ಉತ್ತರವನ್ನು ಟೇಬಲ್ ಮಾಡಿ ಎಂದಿದ್ದಾರೆ ಬಿಜೆಪಿ ಶಾಸಕರು. ವಕ್ಪ್ ಅದಾಲತ್ ಮಾಡುವಾಗ ಬೆಲ್ಲದ್ ಕೂಡ ಬಂದಿದ್ರು. ವಿಜಯಪುರದಲ್ಲೂ ಯತ್ನಾಳ್‌ಗೆ ಆಹ್ವಾನ ಕೊಟ್ಟಿದ್ದೆ ಎಂದಿದ್ದಾರೆ ಜಮ್ಮೀರ್.

ಆದರೆ ಅವ್ರು ಬಂದಿಲ್ಲ, ಮೂರು ದಿನ ಆದ ಮೆಲೆ ಪ್ರತಿಭಟನೆ ಮಾಡಿದ್ರು. ಜಿಲ್ಲಾಧಿಕಾ ಅವರೇ, ಯತ್ನಾಳ್ ಆರೋಪ ಮಾಡಿದಂತೆ ಇಲ್ಲ ಎಂದು ಹೇಳಿದ್ದಾರೆ. ನೋಟಿಸ್ ಪದ್ದತಿ ಇವತ್ತಿಂದಲ್ಲ, ಬಿಜೆಪಿ, ಜೆಡಿಎಸ್ ಸರ್ಕಾರದಿಂದಲೂ ನೋಟಿಸ್ ಕೊಡಲಾಗಿದೆ. 5,667 ಬಿಜೆಪಿ ಕಾಲದಲ್ಲೇ ನೋಟಿಸ್ ಕೊಡಲಾಗಿದೆ. ಕಾಂಗ್ರೆಸ್ ಕಾಲದಲ್ಲಿ 3,286 ನೋಟಿಸ್‌ಗಳನ್ನು ಕೊಟ್ಟಿದ್ದಾರೆ.
ಈ ವೇಳೆ ಯಾತಕ್ಕೆ ನೋಟಿಸ್ ಕೊಟ್ಟಿದ್ದೀರಿ ಎಂದಾಗ, ನೀವು ಮಾಡಿದ್ದ ಕಾನೂನಿಂದ ಎಂದಿದ್ದಾರೆ ಆರ್ ಅಶೋಕ್. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶ ಮಾಡಿದ್ದು, ಸಚಿವರು ಉತ್ತರ ಕೊಡಲಿ ಎಂದಿದ್ದಾರೆ.ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಧ್ಯ ಮಧ್ಯ ಎದ್ದು ಮಾತಾಡಿದ್ರೆ ಉತ್ತರ ಕೊಡೋಕೆ ಆಗುತ್ತಾ..? ಎಂದಿದ್ದಾರೆ. ಈ ವೇಳೆ ಹಿಂದೆ ಸಚಿವನಾಗಿ ನಾನು ಮಾತಾಡುವಾಗ ನೀವು 12 ಜನ ಮಾತಾಡ್ತಿದ್ರಲ್ಲ ಎಂದಿದ್ದಾರೆ ಆರ್ ಅಶೋಕ್.
ಕಳೆದ ಬಾರಿ ನಾನು ಉತ್ತರ ಕೊಡೋಕೆ ಬಿಟ್ಟಿಲ್ಲ ಎಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಅನುಮಾನ ಇದ್ದಾಗ ಕೇಳಬೇಕು. ಆದರೆ ಉತ್ತರ ಕೊಡೋಕೆ ಬಿಡಲೇಬಾರದು ಅನ್ನೋ ರೀತಿಯಲ್ಲಿ ಆಗಬಾರದು ಎಂದಿದ್ದಾರೆ ಸಿಎಂ. ಸಚಿವ ಜಮ್ಮೀರ್ ಅಹಮದ್ ಮಾತನಾಡಿ, 1954 ವಕ್ಪ್ ಕಾಯ್ದೆ ಮಾಡ್ತಾರೆ, ಅದರ ಮೇಲೆಯೇ ನೋಟಿಸ್ ಕೊಡಲಾಗಿದೆ.
ಕಾನೂನು ಡಿಪಾರ್ಟ್‌ಮೆಂಟ್‌ನಿಂದ ವಕ್ಪ್ ಅಪ್ಲಿಕೇಬಲ್ ಬಗ್ಗೆ ಅಭಿಪ್ರಾಯ ಕೇಳ್ತಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಲಾ ಡಿಪಾರ್ಟ್ಮೆಂಟ್ ಅವರು, ಇದು ಅಪ್ಲೈ ಆಗಲ್ಲ ಅಂತಾರೆ. ಏನಾದರೂ ಆ ರೀತಿಯ ಇದ್ದರೆ ಸಿವಿಲ್ ಕೋರ್ಟ್‌ಗೆ ಹೋಗುವ ಬಗ್ಗೆ ಸುಪ್ರೀಂಕೋರ್ಟ್ ಹೇಳುತ್ತದೆ. ಕೇಂದ್ರ ಸರ್ಕಾರ ಜಿಪಿಎಸ್ ಮ್ಯಾಪಿಂಗ್ ಮಾಡಲು ನಮ್ಮ ರಾಜ್ಯಕ್ಕೆ 6 ಕೋಟಿ ಅನುದಾನ ಕೊಟ್ಟಿದೆ. ಎಲ್ಲಾ ರಾಜ್ಯಗಳಂತೆ ಪ್ರತಿವರ್ಷ ನಮಗೆ ಸರ್ವೆ ಮಾಡಲು ಕೇಂದ್ರ ಸರ್ಕಾರ ಹೇಳುತ್ತದೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಆದೇಶದ ರಿಪೋರ್ಟ್ ಓದಿ ಹೇಳಿದ್ದಾರೆ ಜಮ್ಮೀರ್ ಅಹಮದ್. ವಕ್ಪ್ ಆಸ್ತಿ ರಕ್ಷಣೆ ಮಾಡಲು ಆದೇಶ ಮಾಡಲಾಗಿದೆ. ನೋಟಿಸ್ ಬಗ್ಗೆ ಹಳೆಯ ಪದ್ದತಿ, ಆದರೆ ನೀವು ಇದನ್ನೇ ದೊಡ್ಡ ಇಶ್ಯೂ ಮಾಡಿದ್ರಿ. 17,000 ಎಕರೆ ಒತ್ತುವರಿ ಆಗಿರೋದನ್ನು ಮಾತ್ರ ನಾವು ಮಾಡ್ತಿದ್ದೇವೆ. ಮುಜರಾಯಿ ಇಲಾಖೆಯ 9000 ಸಾವಿರ ಎಕರೆ ಒತ್ತುವರಿಯಾಗಿದೆ.
ಅದನ್ನು ವಶಕ್ಕೆ ತಗೊಳ್ಳಬೇಕು, ದೇವಸ್ಥಾನ ಕಟ್ಟೋಕೆ ಹೋದ್ರೆ ನಾವು ಮುಟ್ಟೋಕೆ ಹೋಗಲ್ಲ. ವಕ್ಪ್ ಆಸ್ತಿಯಲ್ಲೂ ದೇವಸ್ಥಾನ ಇದ್ದರು ಮುಟ್ಟೋಕೆ ಹೋಗಲ್ಲ ಎಂದಿದ್ದಾರೆ ಜಮ್ಮೀರ್. ಜಮ್ಮೀರ್ ಮಾತಿಗೆ ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದು, ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಹೇಗೆ ನೋಟಿಸ್ ಕೊಟ್ರಿ ಎಂದು ಪ್ತಶ್ನೆ ಮಾಡಿದ್ದಾರೆ. ಈ ವೇಳೆ ಮತ್ತೆ ಸದನದಲ್ಲಿ ಜಮ್ಮೀರ್ ಹಾಗೂ ಬಿಜೆಪಿ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿತ್ತು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಒಂದು ವೇಳೆ ದೇವಸ್ಥಾನಕ್ಕೆ ನೋಟಿಸ್ ಕೊಟ್ಟರೆ, ಅದನ್ನು ವಾಪಸ್ಸು ತಗೊಳ್ತೇವೆ ಎಂದಿದ್ದೇವೆ. ದೇವಸ್ಥಾನ ವಕ್ಪ್ ಆಸ್ತಿಯಲ್ಲಿದ್ರು ಆ ಪ್ರಾಪರ್ಟಿಗಳನ್ನು ವಾಪಸ್ಸು ತಗೊಳಲ್ಲ ಎಂದು ಸ್ಪಷ್ಟನೆ ನಿಡಿದ್ದಾರೆ. ಜಮೀರ್ ಮಾತನಾಡಿ, ರೈತರು ಅನ್ನ ಕೊಟ್ಟಿದ್ದಾರೆ, ರೈತರ ಜಮೀನನ್ನು ನಾವು ಮುಟ್ಟೋಕೆ ಹೋಗಲ್ಲ. ಉಪ ಚುನಾವಣೆಗಾಗಿ ನೀವು ಇಶ್ಯೂ ತಂದ್ರಿ. ಜನರು ಏನ್ ಮಾಡಿದ್ರು ನಿಮ್ಮನ್ನು ಸೋಲಿಸಿದ್ರು ಎಂದಿದ್ದಾರೆ ಜಮ್ಮೀರ್.
ಜಮ್ಮೀರ್ ಮಾತಿಗೆ ಮತ್ತೆ ಬಿಜೆಪಿ ಸದಸ್ಯರಿಂದ ಗದ್ದಲ ಏರ್ಪಟ್ಟಾಗ, ಕೈ ಮುಗಿತ್ತೀನಿ, ಇದರಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ. ನಾನು ಮುಸ್ಲಿಂ ಜಾತಿಯಲ್ಲಿ ಹುಟ್ಟಿರಬಹುದು, ಆದರೆ ನಾನೊಬ್ಬ ಹಿಂದೂಸ್ತಾನಿ ಕನ್ನಡಿಗ. ರೈತರ ಬಗ್ಗೆ ನಮಗೂ ಕಾಳಜಿ ಇದೆ, ರೈತರ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ರೈತರ ಸಾಲ ಮನ್ನಾ ಮಾಡಿ ಅಂದಾಗ ಪ್ರಿಂಟಿಂಗ್ ಮಷೀನ್ ಇಟ್ಟುಕೊಂಡಿದ್ದೀವಾ ಅಂದವರು ಯಾರು..? ಎಂದು ಜಮ್ಮೀರ್ ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ರಾಜಕೀಯ ನಮಗೆ ಅರ್ಥ ಆಗುತ್ತದೆ, ರಾಜಕೀಯ ಮಾಡಿ, ಆದರೆ ಸಚಿವರ ಉತ್ತರವನ್ನು ಕೇಳಿ, ಅವರು ಏನಾದರೂ ತಪ್ಪು ಮಾಡಿದ್ರೆ, ಅನುಮಾನ ಇದ್ದರೆ ಪ್ರಶ್ನೆ ಕೇಳಿ ಎಂದು ಬಿಜೆಪಿ ಶಾಸಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.





