• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದೇಶದಲ್ಲಿ ಕರೋನ ಲಸಿಕೆ ಕೊರತೆ: ಕೊನೆಗೂ ಎಚ್ಚೆತ್ತುಕೊಂಡ ಕೇಂದ್ರ, ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ

Any Mind by Any Mind
July 1, 2021
in ಕರ್ನಾಟಕ, ದೇಶ, ರಾಜಕೀಯ
0
ದೇಶದಲ್ಲಿ ಕರೋನ ಲಸಿಕೆ ಕೊರತೆ: ಕೊನೆಗೂ ಎಚ್ಚೆತ್ತುಕೊಂಡ ಕೇಂದ್ರ, ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ
Share on WhatsAppShare on FacebookShare on Telegram

ಜುಲೈ 1 ರಿಂದ ದೇಶದ ಖಾಸಗಿ ಆಸ್ಪತ್ರೆಗಳು ಕೋವಿಡ್ -19 ಲಸಿಕೆಗಳನ್ನು ತಯಾರಕರಿಂದ ನೇರವಾಗಿ ಖರೀದಿಸಲು ಅನುಮತಿಸುವುದನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು ಬದಲಿಗೆ ಕೇಂದ್ರದ ಕೋವಿನ್ ಪೋರ್ಟಲ್‌ ಮೂಲಕ ವ್ಯಾಕ್ಸಿನೇಷನ್‌ ಬುಕ್ ಮಾಡಿ ಖರೀದಿಸಲು ಸೂಚನೆ ನೀಡಿದೆ.

ADVERTISEMENT

ದೇಶಾದ್ಯಂತ ಉಚಿತ ಕರೋನ ಲಸಿಕೆ ಯೋಜನೆ ಶುರು ಮಾಡಿ ಮೂರು ತಿಂಗಳಿಗೂ ಹೆಚ್ಚಾಗಿದೆ. ಕಳೆದ ತಿಂಗಳಷ್ಟೆ 18 ವರ್ಷದ ಮೇಲಿನವರಿಗೂ ಕೂಡ ಉಚಿತ ಲಸಿಕೆ ನೀಡುವುದಾಗಿ ನರೇಂದ್ರ ಮೋದಿಯವರು ತಿಳಿಸಿದ್ದರು. ಅಂದಿನಿಂದ ಇಂದಿನವರೆಗೂ ಎಲ್ಲೆಡೆ ಉಚಿತ ಲಸಿಕೆ ಹಾಕುತ್ತಿದ್ದರುವುದು ಒಂದು ಕಡೆಯಾದರೆ ಮತ್ತೊಂದು ಕಡೆ No stock ಬೊರ್ಡ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಈ ಸಮಸ್ಯೆಯನ್ನು ಬಗೆಯರಿಸಲು ಈಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದ್ದು ಈ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಕೊರೊನಾವೈರಸ್ ಲಸಿಕೆ ಉತ್ಪಾದಕ ಕಂಪನಿಗಳಿಂದ ಖಾಸಗಿ ಆಸ್ಪತ್ರೆಗಳು ಲಸಿಕೆಯನ್ನು ಖರೀದಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕೊರೊನಾವೈರಸ್ ಉತ್ಪಾದಕ ಕಂಪನಿಗಳಿಂದ ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ನೇರವಾಗಿ ಲಸಿಕೆ ಖರೀದಿಸುವುದಕ್ಕೆ ಅವಕಾಶವಿಲ್ಲ. ಕೊ-ವಿನ್ ಅಪ್ಲಿಕೇಶನ್ ಮೂಲಕ ಎಷ್ಟು ಪ್ರಮಾಣದ ಲಸಿಕೆಯನ್ನು ಖರೀದಿಸುತ್ತೇವೆ ಎಂಬ ಬಗ್ಗೆ ಮುಂಚಿತವಾಗಿ ಆರ್ಡರ್ ಮಾಡಬೇಕು. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮೂಲಕ ತಾವು ಖರೀದಿಸುವ ಲಸಿಕೆಗೆ ಹಣ ಪಾವತಿ ಮಾಡಬೇಕು. ಲಸಿಕೆ ಖರೀದಿ ನಂತರದಲ್ಲಿ ಖರೀದಿಸಿರುವ ಲಸಿಕೆ ಹಾಗೂ ನೀಡಿರುವ ಲಸಿಕೆ ಪ್ರಮಾಣದ ಬಗ್ಗೆ ಲೆಕ್ಕ ನೀಡುವುದು. ಉತ್ಪಾದಕ ಕಂಪನಿಗಳಿಂದ ಶೇ.25ರಷ್ಟು ಲಸಿಕೆಯನ್ನು ಮಾತ್ರ ಖರೀದಿಸುವುದಕ್ಕೆ ಅನುಮತಿ. ಜುಲೈ 1ರಿಂದಲೇ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಸಂಬಂಧಿಸಿದ ಮಾರ್ಗಸೂಚಿ ಜಾರಿ ಎಂದು ತಿಳಿಸಿದೆ.

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ ಮಾಡಿದರೆ ಉಚಿತ ಲಸಿಕೆ ನೀಡುವುದು ಕಷ್ಟ ಎಂಬುದು ಕೇಂದ್ರ ಸರ್ಕಾರಕ್ಕೆ ಮೊದಲೇ ತಿಳಿದಿರಲಿಲ್ಲವೇ?

ಮೊದಲು ಶೇಕಡಾ 50% ಅಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆ ಮತ್ತು ರಾಜ್ಯ ಸರ್ಕಾರಗಳು ಖರೀದಿಸುವ ಅನುಮತಿಯನ್ನು ನೀಡಿದ ಕೇಂದ್ರ ಸರ್ಕಾರ ವಿರುದ್ಧ ಅನೇಕ ರಾಜ್ಯದ ಮುಖ್ಯ ಮಂತ್ರಿಗಳು ಮತ್ತು ಸಚಿವರು ಪತ್ರವನ್ನು ಬರೆದರು ಇನ್ನೂ ಕೆಲವರು ಪೂರ್ಣ ಲಸಿಕೆಯನ್ನು ಕೇಂದ್ರವೇ ಖರೀದಿಸಿ ರಾಜ್ಯಗಳಿಗೆ ನೀಡಬೇಕು ಎಂದು ಸಲಹೆ ನೀಡಿತ್ತು. ಆದರೆ ಇದಕ್ಕೆ ಕ್ಯಾರೆ ಅನ್ನದ ಪ್ರಧಾನಿಯವರು ಸುಮ್ಮನಾಗಿಬಿಟ್ಟರು, ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ವಹಿಸಿ ಲಸಿಕೆ ಕುರಿತು ಕೇಂದ್ರಕ್ಕೆ ಪ್ರಶ್ನೆ ಮಾಡಿ ಚಾಟಿ ಬೀಸಿದ ಬೆನ್ನಲ್ಲೇ ದಿಢೀರನೆ ಮಂ ಕೀ ಬಾತ್ ನಲ್ಲಿ ಪ್ರತ್ಯೇಕರಾದ ಮೋದಿ 18 ವಯಸ್ಸಿನ ಎಲ್ಲರಿಗೂ ಉಚಿತ ಲಸಿಕೆ ಮತ್ತು ಶೇಕಡಾ 75% ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ಸರಬರಾಜು ಮಾಡುತ್ತೇ ಎಂದು ಹೇಳಿತು.

ವಾಸ್ತವ ಏನೆಂದರೆ ದೇಶದಲ್ಲಿ ಎರಡು ರೀತಿಯ ಲಸಿಕೆಯನ್ನು ತಯಾರಿಸುತ್ತಿದ್ದು ಈ ಲಸಿಕಾ ತಯಾರಿಕಾ ಕಂಪನಿಗಳು ಯಾರು ಹೆಚ್ಚು ಹಣ ಕೊಡುತ್ತೊ ಅವರಿಗೆ ಮೊದಲು ನೀಡಿ ನಂತರ ಕೇಂದ್ರ ಸರ್ಕಾರಕ್ಕೆ ಮಾರುತ್ತವೇ. ಈ ನಡೆಯಿಂದ ಉಚಿತ ಲಸಿಕೆ ನೀಡುವ ಯೋಜನೆಗೆ ಪೆಟ್ಟು ಬೀಳುತ್ತದೆ. ಇದೆಲ್ಲವೂ ಗೊತ್ತಿದ್ದು ಸರ್ಕಾರ ಮೊದಲೇ ಈ ಕಡಿವಾಣ ಹಾಕದೆ ಇರುವುದು ನೋಡಿದರೆ ಖಾಸಗಿ ಆಸ್ಪತ್ರೆಗಳ ಲಾಭಿಗೆ ಸರ್ಕಾರವೇ ನೇರ ಬೆಂಬಲ ನೀಡಿದಂತೆ ಕಾಣುತ್ತದೆ. 18 ವರ್ಷದವರಿಗೆ ಉಚಿತ ಲಸಿಕೆ ಏನೊ ಘೋಷಣೆ ಮಾಡಿದರು ಆದರೆ ಅಷ್ಟು ಪ್ರಮಾಣದ ಲಸಿಕೆಯನ್ನು ಭಾರತ್ ಬಯೋಟೆಕ್ ಆಗಲಿ, ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಗಲಿ ತಯಾರು ಮಾಡಿರಲಿಲ್ಲ ಈಗಲೂ ಮಾಡ್ತಿಲ್ಲ ಕೂಡ. ಮೊದಲು ಬಂದಿರುವ ಆರ್ಡರ್ ಗಳನ್ನೇ ಪೂರೈಸುವಲ್ಲಿ ನಿರತರಾಗಿರುವ ಈ ಎರಡು ಲಸಿಕಾ ಕಂಪನಿಗಳು ಪ್ರಧಾನಿ ನರೇಂದ್ರ ಮೋದಿ ಈಗಷ್ಟೆ ಘೋಷಣೆ ಮಾಡಿದ ಲಸಿಕೆಯನ್ನು ತಯಾರಿಸಿ ಪೂರೈಸಲು ಎಷ್ಟು ದಿನ ಬೇಕು ನೀವೇ ಯೋಚಿಸಿ.

ಕೊವಿಡ್-19 ಲಸಿಕೆಯಲ್ಲಿ ಖಾಸಗಿ ಆಸ್ಪತ್ರೆಗಳು ಅರ್ಧದಷ್ಟು ಲಸಿಕೆಯನ್ನು ನೀಡಿ, ಉಳಿದ ಪ್ರಮಾಣದ ಲಸಿಕೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ರೀತಿಯ ಲಸಿಕೆ ಸಂಗ್ರಹಿಸುವುದರಿಂದ ಕೃತಕ ಅಭಾವ ಸೃಷ್ಟಿಸುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇನ್ನೊಂದು ಕಡೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಕೊರತೆ ಬಾಧಿಸುತ್ತಿರುವ ಹಿನ್ನೆಲೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ದೇಶದಲ್ಲಿ ಈವರೆಗೆ 33 ಲಕ್ಷ ಜನರಿಗೆ ಲಸಿಕೆ.

ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ. ದೇಶದಲ್ಲಿ ಈವರೆಗೂ 33,57,16,019 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ.

ಬೇರೆ ದೇಶಗಳ ಜನಸಂಖ್ಯೆ ಇಟ್ಟುಕೊಂಡು ತುಲನೆ ಮಾಡಿದ್ರೆ. ಕೇಂದ್ರ ಎಷ್ಟು ಡೋಸ್ ವ್ಯಾಕ್ಸಿನ್ ಕೊಟಿದ್ದಾರೆ ಅನ್ನೋದಲ್ಲ ಮುಖ್ಯ, ಎಷ್ಟು ಪರ್ಸಂಟೇಜ್ ಜನರಿಗೆ ಕೊಟ್ಟಿದ್ದಾರೆ ಅನ್ನೋದು ಮುಖ್ಯ. ಅದೂ ಕೂಡ ಎರಡೂ ಡೋಸ್ ಕೊಟ್ಟರೆ ಮಾತ್ರ Fully vaccinated ಎಂದು ಗ್ರಹಿಸುತ್ತೆ ಇಡೀ ಜಗತ್ತು. ಕೋವಿನ್ ಆಪ್ ಪ್ರಕಾರ ದೇಶದ ಐದೂವರೆ ಕೋಟಿ ಜನರು ಮಾತ್ರ ಈ ಕ್ಷಣದವರೆಗೆ ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಪರ್ಸಂಟೇಜ್ ಎಷ್ಟು ಗೊತ್ತಾ? ಕೇವಲ 4% ಮಾತ್ರ. ಇದೇ ಸಮಯದಲ್ಲಿ ಅಮೆರಿಕದಲ್ಲಿ ಶೇ. 47 ರಷ್ಟು ಮಂದಿ, ಇಸ್ರೇಲ್ ನಲ್ಲಿ ಶೇ. 57 ರಷ್ಟು ಮಂದಿ fully vaccinate ಆಗಿದ್ದಾರೆ.

ಕಡಿಮೆ ಜನಸಂಖ್ಯೆ ಇರೋ ದೇಶಗಳ ಜತೆ ಹೋಲಿಸಿಕೊಳ್ಳೊದೆ, ನಮಗಿಂತ ಹೆಚ್ಚು ಜನಸಂಖ್ಯೆ ಇರೋ ದೇಶದ ಜತೆ ಹೋಲಿಸಿಕೊಂಡರೆ, ಚೀನಾದಲ್ಲಿ 22.3 ಕೋಟಿ ಜನರಿಗೆ ಎರಡೂ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ. ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚು. 119 ಕೋಟಿ ಜನರಿಗೆ ಮೊದಲ ಡೋಸ್ ಕೊಟ್ಟಾಗಿದೆ. ಅದೂ ಕೂಡ ಭಾರತದ ನಾಲ್ಕು ಪಟ್ಟು ಹೆಚ್ಚು. ಕೇಂದ್ರ ಸರ್ಕಾರದ ಈ ಗ್ರಾಪ್ ನಲ್ಲಿ ಚೀನಾ ನಾಪತ್ತೆಯಾಗಿರುವುದು ಕಾಣಬಹುದು.

ದೇಶದಲ್ಲಿ ಈಗಾಗಲೇ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ನೀಡುತ್ತಿದೆ. ಈಗ ರಷ್ಯಾದ ಸ್ಪುಟ್ನಿಕ್-ವಿ ಹಾಗೂ ಇತ್ತೀಚಿಗೆ ಅನುಮೋದನೆ ಪಡೆದಿರುವ ಮಾಡೆರ್ನಾ ಲಸಿಕೆಯನ್ನು ಶೀಘ್ರದಲ್ಲೇ ಬರಲಿವೇ ಎನ್ನಲಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರದ ಚಿತ್ರ ವಿಚಿತ್ರ ನಿರ್ಧಾರಗಳಿಗೆ ಜನರು ಬೇಸತ್ತಿದ್ದಾರೆ. ಜನರ ಜೀವ ಮತ್ತು ಜೀವನದ ಜೊತೆ ಆಡವಾಡದೆ ಲಸಿಕೆ ಕುರಿತು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಎಲ್ಲಾ ಪ್ರಜೆಗಳಿಗೂ ಉಚಿತವಾಗಿ ಎರಡು ಲಸಿಕೆ ಆದಷ್ಟು ಬೇಗ ಸಿಗದಿದ್ದರೆ ಮೂರನೇ ಕರೋನ ಅಲೆಗೆ ಇನ್ನಷ್ಟು ಜನ ತುತ್ತಾಗುತ್ತಾರೆ.

Tags: coronaviruscovid-19 vaccineGovernment of IndiaSupreme Court of India
Previous Post

CAA ವಿರೋಧಿ ಹೋರಾಟಗಾರ ಅಖಿಲ್ ಗೋಗೋಯ್ ವಿರುದ್ಧದ ಪ್ರಕರಣ ಕೈಬಿಟ್ಟ NIA ನ್ಯಾಯಾಲಯ

Next Post

ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಪ್ರಯಾಣಿಕರಿಗೆ ಅನುಮತಿ ನೀಡಿದ 9 ಐರೋಪ್ಯ ದೇಶಗಳು

Related Posts

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ
ಕರ್ನಾಟಕ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

by ಪ್ರತಿಧ್ವನಿ
April 16, 2026
0

ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರೀ ಮಟ್ಟದ ಬದಲಾವಣೆ ನಡೆಯಿದ್ದು, ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದ್ದು, ವಿವಿಧ ಹಂತಗಳ...

Read moreDetails
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
Next Post
ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಪ್ರಯಾಣಿಕರಿಗೆ ಅನುಮತಿ ನೀಡಿದ 9 ಐರೋಪ್ಯ ದೇಶಗಳು

ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಪ್ರಯಾಣಿಕರಿಗೆ ಅನುಮತಿ ನೀಡಿದ 9 ಐರೋಪ್ಯ ದೇಶಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada