ನವದೆಹಲಿ: ನಿನ್ನೆ ಅಂದರೆ ನವೆಂಬರ್ 10 ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಅಮಾಯಕ ಜನರು ಸಾವನ್ನಪ್ಪಿದ್ದಾರೆ. ದೇಶದ ಹೃದಯ ಭಾಗದಲ್ಲಿ ಸಂಭವಿಸಿದ ಈ ನಿಗೂಢ ಸ್ಫೋಟ ಜನರನ್ನು ಬೆಚ್ಚಿ ಬೀಳಿಸಿದ್ದು, ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ದೇಶದ ಭದ್ರತೆಯ ಬಗ್ಗೆ ವ್ಯಾಪಕ ಭೀತಿ ಉಂಟಾಗಿರುವ ಇಂತಹ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭೂತನ್ ಪ್ರವಾಸಕ್ಕೆ ತೆರಳಿದ್ದಾರೆ. ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲು ಭೂತಾನ್‌ಗೆ ತೆರಳಿರುವ ಪ್ರಧಾನಿ ಮೋದಿ ಅಲ್ಲಿನ ನಾಲ್ಕನೇ ರಾಜನ 70ನೇ ಹುಟ್ಟುಹಬ್ಬದ ಆಚರಣೆಯಲ್ಲೂ ಭಾಗಿಯಾಗಲಿದ್ದಾರೆ. ದೇಶದಲ್ಲಿ ಭೀತಿಯ ವಾತಾವರಣ ಉಂಟಾಗಿರುವ ಈ ಸಮಯದಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತೆರಳಿರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.
I’m really heartbroken 🥲
A man who was supposed to reassure the nation and hold a PC after the #RedFort blast is instead going on an international tour.
Absolute low class 🙏
— Amock (@Politicx2029) November 11, 2025
ಈ ಬಗ್ಗೆ ಕೆಲ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದು, ಪ್ರಧಾನಿ ಮೋದಿ ಅವರ ಈ ನಡೆಯ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪ್ರಧಾನಿಗಳ ನಡೆ ನಿಜಕ್ಕೂ ತುಂಬಾ ನೋವು ತರುತ್ತಿದೆ. ಕೆಂಪು ಕೋಟೆ ಸ್ಫೋಟದ ನಂತರ ದೇಶಕ್ಕೆ ಧೈರ್ಯ ತುಂಬಿ ಜೊತೆಗಿರಬೇಕಾದ ವ್ಯಕ್ತಿ ಅಂತರರಾಷ್ಟ್ರೀಯ ಪ್ರವಾಸಕ್ಕೆ ಹೋಗುತ್ತಿದ್ದಾರೆ. ದೇಶದ ಜನರು ಯಾರ ಮೇಲೆ ನಂಬಿಕೆ ಇಡಬೇಕು. ದೇಶದ ಭದ್ರತೆಯ ಬಗ್ಗೆ ಜನರಿಗೆ ತಿಳಿಸಬೇಕಾದವರೇ ವಿದೇಶಕ್ಕೆ ಹಾರಿದರೆ ಹೇಗೆ..? ದೇಶದ ಪರಿಸ್ಥಿತಿ ಏನು…? ಇದು ಬೇಜವಾಬ್ದಾರಿತನ. ದೇಶದಲ್ಲಿ ಅಮಾಯಕರ ಸಾವಿನ ಬೆನ್ನಲ್ಲೇ ವಿದೇಶ ಪ್ರವಾಸ ಬೇಕಿತ್ತಾ..? ಪ್ರಧಾನಿ ನರೇಂದ್ರ ಮೋದಿ ಮಾನವೀಯತೆ ಮರೆತಿದ್ದಾರಾ..? ಎಂದು ನೆಟ್ಟಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ.













