![](https://pratidhvani.com/wp-content/uploads/2025/02/download-48.jpeg)
ಅಹಮದಾಬಾದ್, ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕುಶಲ ನಿರ್ವಹಣೆ ಪ್ರದರ್ಶಿಸಿದ ಬಿಹಾರದ 25 ವರ್ಷದ ಶೂಟರ್ ನಿರಜ್ ಕುಮಾರ್, ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಉನ್ನತ ಮಟ್ಟದ ಸ್ಪರ್ಧೆ ಎದುರಿಸಿದ ನಿರಜ್, ತನ್ನ ಅಚ್ಚುಕಟ್ಟಾದ ತಾಂತ್ರಿಕ ಸಾಮರ್ಥ್ಯ ಮತ್ತು ಮನೋಸ್ಥೈರ್ಯವನ್ನು ಪ್ರದರ್ಶಿಸಿ 241.6 ಅಂಕಗಳೊಂದಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯು ಈ ಬಾರಿಯ ರಾಷ್ಟ್ರೀಯ ಕ್ರೀಡಾಕೂಟದ ಅತ್ಯಂತ ನಿರೀಕ್ಷಿತ ಸ್ಪರ್ಧೆಗಳಲ್ಲಿ ಒಂದಾಗಿತ್ತು. ದೇಶದ ಮೂಲಕಲದಿಂದ ಬಂದ ಪ್ರತಿಭಾವಂತ ಶೂಟರ್‌ಗಳ ಪೈಕಿ ನಿರಜ್ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಪ್ರೇಕ್ಷಕರು ಹಾಗೂ ತಂಡದ ಸದಸ್ಯರು ಅವರ ಗೆಲುವನ್ನು ಸಂಭ್ರಮಿಸಿದರು, ಕೋಚ್‌ಗಳು ಪ್ರಶಂಸಿಸಿದರು.
![](https://pratidhvani.com/wp-content/uploads/2025/02/download-47.jpeg)
ದೇಶೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಿರುವ ನಿರಜ್ ಕುಮಾರ್ ಅವರ ಈ ಚಿನ್ನದ ಗೆಲುವು ಅವರ ಶೂಟಿಂಗ್ ಜೀವನದಲ್ಲಿ ಮಹತ್ವದ MileStone ಆಗಿದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್ ಹಾಗೂ ಇತರ ಪ್ರಮುಖ ಪಂದ್ಯಗಳಲ್ಲಿ ಪದಕ ಗೆದ್ದಿರುವ ಅವರು, ಈ ಜಯದಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಮುಂದಿನ ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ಸಜ್ಜಾಗುತ್ತಿದ್ದಾರೆ.
![](https://pratidhvani.com/wp-content/uploads/2025/02/download-45.jpeg)
36 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆ ನಡೆದ ರಾಷ್ಟ್ರೀಯ ಕ್ರೀಡಾಕೂಟವು ದೇಶದ ಟಾಪ್ ಅಥ್ಲೀಟ್‌ಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೊಡ್ಡ ವೇದಿಕೆಯಾಗಿದೆ. ನಿರಜ್ ಕುಮಾರ್ ಅವರಂತಹ ಪ್ರತಿಭಾವಂತ ಶೂಟರ್‌ಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದರಿಂದ ಭಾರತದ ಶೂಟಿಂಗ್ ಭವಿಷ್ಯ ಮತ್ತಷ್ಟು ಪ್ರಕಾಶಮಾನವಾಗುತ್ತಿದೆ.