ಬಿಜಾಪುರ (ಛತ್ತೀಸ್‌ಗಢ):ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯಲ್ಲಿ ಇಬ್ಬರು ಗ್ರಾಮಸ್ಥರನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ ಜಿಲ್ಲೆಯಲ್ಲಿ (Naxalites killed two villagers)ನಕ್ಸಲೀಯರು ಪೊಲೀಸರೊಬ್ಬರ ಸಹೋದರನನ್ನು ಕೊಂದು ಹಾಕಿದ ಎರಡು ವಾರಗಳ ನಂತರ ಈ ಘಟನೆ ನಡೆದಿದೆ ಮಂಗಳವಾರ ನಕ್ಸಲೀಯರು ವಿದ್ಯಾರ್ಥಿ student ಸೇರಿದಂತೆ ಮೂವರು ಗ್ರಾಮಸ್ಥರನ್ನು Villagers Kidnapped ಅಪಹರಿಸಿದ್ದಾರೆ ಎಂದು ತಿಳಿದು ಬಂದಿದೆ ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲಾಗಿದೆ.
ಬಿಜಾಪುರದ ಮಿರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪೆಮಾರ್ಕ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ನಕ್ಸಲೀಯರು ‘ಜನ್ ಅದಾಲತ್’ ನಡೆಸಿ ನಂತರ ಇಬ್ಬರು ಗ್ರಾಮಸ್ಥರನ್ನು ಕೊಂದಿದ್ದರು. ಮೃತರನ್ನು ಮದ್ವಿ ಸುಜಾ ಮತ್ತು ಪೊಡಿಯಂ ಕೋಸ ಎಂದು ಗುರುತಿಸಲಾಗಿದೆ. ನಕ್ಸಲೀಯರ ಭೈರಾಮ್‌ಗಢ್ ಪ್ರದೇಶ ಸಮಿತಿಯು ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಮೃತ ಗ್ರಾಮಸ್ಥರಿಬ್ಬರೂ ಪೊಲೀಸ್ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ನಕ್ಸಲೀಯರು ಹೇಳಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಕಳೆದ ತಿಂಗಳು ಮಿರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮೆರ್ನಾರ್ ಗ್ರಾಮದಲ್ಲಿ ಮಾಹಿತಿದಾರನೆಂಬ ಶಂಕೆಯಲ್ಲಿ ನಕ್ಸಲರು ಪೊಲೀಸ್ ಅಧಿಕಾರಿಯೊಬ್ಬರ ಸಹೋದರನನ್ನು ಹತ್ಯೆ ಮಾಡಿದ್ದರು.
ಮೃತ ಸೂದ್ರು ಕರಂ ಮೇಲೆ ಅಪರಿಚಿತ ನಕ್ಸಲೀಯರು ಮಾರಕಾಸ್ತ್ರಗಳೊಂದಿಗೆ ಧಾಳಿ ಮಾಡಿದ್ದರು. ದಾಂತೇವಾಡ ಜಿಲ್ಲೆಯಲ್ಲಿ ನಿಯೋಜಿತರಾಗಿರುವ ಹೆಡ್ ಕಾನ್‌ಸ್ಟೆಬಲ್ ಸನ್ನು ಕರಮ್ ಅವರ ಸಹೋದರ ಸೂದ್ರು ಅವರಾಗಿದ್ದಾರೆ.