ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಬಳ್ಳಾರಿ ಜೈಲು (Bellary jail) ಪಾಲಾಗಿರು ಆರೋಪಿ ದರ್ಶನ್ ಬಗ್ಗೆ ನವರಸ ನಾಯಕ ಜಗ್ಗೇಶ್ (Jaggesh) ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ದರ್ಶನ್ ಕೋಟ್ಯಂತರ ರೂಪಾಯಿ ದುಡಿಯುವ ನಾಯಕ. ಆದ್ರೆ ತಪ್ಪಿನ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ.
ಹಣ, ಹೆಸರು ಇದ್ದರೆ ಸಾಲದು. ಸರಿಯಾದ ಮಾರ್ಗದರ್ಶನವಿರಬೇಕು. ಇಲ್ಲಾವಾದ್ರೆ ಹೀಗೆ ಆಗೋದು. ಅದಕ್ಕೆ ಹೇಳೋದು ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತ ಎಂದು ಗಾದೆ ಮಾತಿನ ಮೂಲಕ ತಿವಿದಿದ್ದಾರೆ.
ನಟ ದರ್ಶನ್ ಸುತ್ತ ಮುತ್ತ ಇರುವವರು ಯಾರೊಬ್ಬರೂ ಸರಿಯಿಲ್ಲ. ಇಂಥವರ ಸಹವಾಸ ಮಾಡಿ ಇಂದು ದರ್ಶನ್‌ಗೆ ಇಂಥ ಪರಿಸ್ಥಿತಿ ಬಂದಿದೆ ಎಂಬ ಅರ್ಥದಲ್ಲಿ ನಟ ಜಗ್ಗೇಶ್ ಮಾತನಾಡಿದ್ದಾರೆ. ಈ ಹಿಂದೆ ತಪ್ಪು ಗ್ರಹಿಕೆಯಿಂದ ದರ್ಶನ್ ಅಭಿಮಾನಿಗಳಿ ಜಗ್ಗೇಶ್ ವಿರುದ್ಧ ತಿರುಗಿಬಿದ್ದ ಘಟನೆಯೂ ನಡೆದಿತ್ತು.