ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನವೀನ್ ಶಂಕರ್, ಇದೀಗ ಕ್ಷೇತ್ರಪತಿಯಾಗಿ ಚಿತ್ರಮಂದಿರದಲ್ಲಿ ಅಬ್ಬರಿಸೋದಕ್ಕೆ ತಯಾರು ಮಾಡಿಕೊಂಡಿದ್ದಾರೆ. ಇದರ ನಡುವೆ, ಈ ಹಿಂದೆ ಚಿತ್ರದ ಸಣ್ಣ ತುಣುಕು ಕ್ಷೇತ್ರಪತಿ ಚಿತ್ರದ ಬಗ್ಗೆ ಅಷ್ಟೇನೂ ನಿರೀಕ್ಷೆ ಮೂಡಿಸಿರಲಿಲ್ಲ.
ಆದರೆ ಚಿತ್ರದ ಪಲ್ಲಕಿ ಹಾಡು ರಿಲೀಸ್ ಆದ ಬಳಿಕ ಚಿತ್ರದ ಬಗ್ಗೆ ಹೊಸ ನಿರೀಕ್ಷೆ ಮೂಡಿಸಿತ್ತು, ಇದಾದ ಚಿತ್ರದ ಪೋಸ್ಟರ್ ಕೂಡ ಚಿತ್ರದಲ್ಲಿ ಏನೋ ಹೊಸತನ ಕಾಣಿಸುತ್ತಿದೆ ಎಂದು ಸಿನಿ ರಸಿಕರು ಊಹಿಸಿದರು .
ಈಗ ಕ್ಷೇತ್ರದ ಚಿತ್ರದ ಸಂಪೂರ್ಣವಾದ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರದ ಕತೆ ರೈತರ ಪರವಾದ ಧ್ವನಿ ಅನ್ನೋದು ಕನ್ಫರ್ಮ್ ಆಗಿದ್ದು, ಕನ್ನಡ ಚಿತ್ರದಲ್ಲಿ ಹೊಸದೊಂದು ರೈತ ಪರವಾದ ಅಲೆ ಸೃಷ್ಠಿಸುವ ನಿರೀಕ್ಷೆ ಹೆಚ್ಚು ಮಾಡಿದೆ.
ಗುಲ್ಟು ಚಿತ್ರದ ನಂತರ ಒಂದು ದೊಡ್ಡ ಬ್ರೇಕ್ಗಾಗಿ ಕಾಯುತ್ತಿದ್ದ ನವೀನ್ ಶಂಕರ್, ಒಂದೊಳ್ಳೆ ಕತೆಯನ್ನ ಆಯ್ದುಕೊಂಡಿದ್ದು, ಸಿನಿ ರಸಿಕರಿಗೆ ಸಾಕಷ್ಟು ನಿರೀಕ್ಷೆಯನ್ನ ಮೂಡಿಸಿದ್ದಾರೆ.
ಒಟ್ಟಾರೆಯಾಗಿ ಈಗ ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕ ಶೈಲಿಯ ಚಿತ್ರವನ್ನ ನಿರ್ದೇಶಿಸಿದ ಶ್ರೀಕಾಂತ್ ಕಟಗಿ ಅವರ ಈ ಪ್ರಯತ್ನಕ್ಕೆ ಒಳ್ಳೆಯ ಯಶಸ್ಸು ತರಲಿ ಎಂದು ಸಾಕಷ್ಟು ಜನ ಹಾರೈಸುತ್ತಿದ್ದಾರೆ.