ತಪ್ಪದೇ ನಾವು ಪ್ರತಿದಿನ ತ್ವಚೆಯ ಬಗ್ಗೆ ಆರೈಕೆ ಮಾಡಬೇಕು, ಇಲ್ಲವಾದಲ್ಲಿ ಇತರೆ ಸಮಸ್ಯೆಗಳು ಎದುರಾಗುತ್ತದೆ. ಅದುಲು ಕೂಡ ಬೇಸಿಕ್ ಕೇರನ್ನ ತೆಗೆದುಕೊಳ್ಳುವುದು ತುಂಬಾನೇ ಇಂಪಾರ್ಟೆಂಟ್ ಬೇಸಿಕ್ ಅಂತ ಬಂದಾಗ ಪ್ರತಿದಿನ ತಪ್ಪದೆ ನಾವು ನಮ್ಮ ಸ್ಕಿನ್ ಅನ್ನ ಮಾಯಿಶ್ಚರೈಸ್ ಮಾಡಬೇಕು.
ಪ್ರತಿದಿನ ಮಾಯಿಶ್ಚರೈಸ ಮಾಡುವುದರಿಂದ ಮುಖದಲ್ಲಿ ಕಲೆಗಳು ನಿವಾರಣೆಯಾಗುತ್ತದೆ , ಹೆಲ್ದಿ ಸ್ಕಿನ್ ನಿಮ್ಮದಾಗುತ್ತದೆ, ಸ್ಕಿನ್ ಟೋನ್ ಬದಲಾಗುತ್ತಾ ಹೋಗುತ್ತದೆ , ಏಜಿಂಗ್ ಪ್ರಾಬ್ಲಮ್ ಕಡಿಮೆಯಾಗುತ್ತದೆ ,ಸಾಫ್ಟ್ ಸ್ಕಿನ್ ನಿಮ್ಮದಾಗುತ್ತದೆ ಹೀಗೆ ಹೇಳ್ತಾ ಹೋದ್ರೆ ಸಾಕಷ್ಟಿವೆ.. ಆದ್ರೆ ಕೆಲವರು ಮಾಯಿಶ್ಚರೈಸರ್ ಅನ್ನ ದುಬಾರಿ ದುಡ್ಡು ಕೊಟ್ಟು ಖರೀದಿ ಮಾಡಬೇಕಲ್ವಾ ಅಂತ ಯೋಚನೆ ಮಾಡುತ್ತಾರೆ. ಅಂತವರು ಸಿಂಪಲ್ಲಾಗಿ ಮನೆಯಲ್ಲಿರುವಂತ ಒಂದಿಷ್ಟು ಇಂಗ್ರಿಡಯೆಂಟ್ಸ್ ಬಳಸಿ ಮಾಯಿಶ್ಚರೈಸರ್ ರೆಡಿ ಮಾಡಿಕೊಳ್ಳಬಹುದು ಹೇಗೆ ಅನ್ನೋದನ್ನ ಡೀಟೇಲ್ಸ್ ಇಲ್ಲಿದೆ ನೋಡಿ.
ಜೇನುತುಪ್ಪ
ಜೇನುತುಪ್ಪ ನಮ್ಮ ತ್ವಚೆಯಲ್ಲಿ ತೇವಾಂಶವನ್ನು ಹಾಗೆ ಹಿಡಿದಿರುತ್ತದೆ ಹಾಗೂ ಡ್ರೈಯಾಗಲು ಬಿಡುವುದಿಲ್ಲ. ನ್ಯಾಚುರಲ್ ಮಾಯಿಶ್ಚರೈಸರ್ ಅಂತಾನೂ ಕರೀತಾರೆ. ತ್ವಚೆಯ ಆರೈಕೆಗೆ ಜೇನುತುಪ್ಪ ಬೆಸ್ಟ್.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯಲ್ಲಿರುವ ಕೊಬ್ಬು ಮತ್ತು ಅಗತ್ಯವಾದ ಅಮೈನೋ ಆಮ್ಲಗಳು ನಮ್ಮ ಚರ್ಮವನ್ನು ಉತ್ತಮವಾಗಿ ಕಾಣುವಂತೆ ಸಹಾಯ ಮಾಡುತ್ತದೆ!
ಆಲಿವ್ ಎಣ್ಣೆ
ಆಲಿವ್ ಎಣ್ಣೆಯನ್ನು ಪ್ರತಿದಿನ ನಾವು ತಪ್ಪದೆ ಹಚ್ಚಬೇಕು ಆಲಿವ್ ಅಲ್ಲಿ ವಿಟಮಿನ್ ಎ ಮತ್ತು ಇ ಸಮೃದ್ಧವಾಗಿದೆ,ಚರ್ಮದ ಎಲೆಸಿಟಿನ ಉತ್ತೇಜಿಸುತ್ತದೆ.
ಬಾಳೆಹಣ್ಣು ಮತ್ತು ಮೊಸರು ಮಾಸ್ಕ್
1 ಬಾಳೆಹಣ್ಣು ಮತ್ತು ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ತ್ವಜೆಯನ್ನು ಮೋಯಿಶ್ಚರೈಸ್ ಮಾಡುತ್ತದೆ.