ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇಂದು ತಮ್ಮ 31ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಲಯಾಳಂನ ʻಪ್ರೇಮಂʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ, ಟಾಲಿವುಡ್, ಕಾಲಿವುಡ್ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ತೆಲುಗಿನ ʻಫಿದಾʼ ಸಿನಿಮಾದಲ್ಲಿ ಸಾಯಿಪಲ್ಲವಿ ನಟನೆ ಕಂಡು ಅಭಿಮಾನಿಗಳು ಕೂಡ ಫಿದಾ ಆಗಿದ್ರು. ಕಾಮನ್ ಆಗಿ ಎಲ್ಲಾ ನಟಿಯರು ತಮ್ಮ ಸೌಂದರ್ಯದಲ್ಲಿ ಸ್ವಲ್ಪ ಏರುಪೇರಾದ್ರೂ ಅದಕ್ಕೋಸ್ಕರ ಲಕ್ಷಗಟ್ಟಲೆ ಖರ್ಚು ಮಾಡ್ತಾರೆ.
ಮೇಕಪ್ ಇಲ್ಲದೇ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳದ ಅನೇಕ ನಟಿಯರ ಮಧ್ಯೆ ಸಾಯಿ ಪಲ್ಲವಿ ತಮ್ಮ ನೈಜ ಸೌಂದರ್ಯದಿಂದ ಅದೆಷ್ಟೋ ಹುಡುಗರ ಹಾರ್ಟ್ ಫೇವರೇಟ್ ಆಗಿದ್ದಾರೆ.
ಅಷ್ಟೇ ಅಲ್ಲ.. ಯಾವುದೇ ಸಿನಿಮಾದಲ್ಲಿ ನಟಿಸಿದ್ರೂ ಸಾಯಿ ಪಲ್ಲವಿ ಮೇಕಪ್ನಿಂದ ದೂರ. ಅವರು ಮೇಕಪ್ ಹಚ್ಚಿ ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೂ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅನೇಕರಿಗೆ ಇಷ್ಟ ಆಗ್ತಾರೆ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಸಹ ಸಾಯಿ ಪಲ್ಲವಿಗೆ ಬರ್ತ್ಡೇ ವಿಶ್ ಮಾಡ್ತಿದ್ದಾರೆ.