ನಮ್ಮ ಮೆಟ್ರೋಗಾಗಿ ಸುರಂಗ (Namma metro tunel) ಕೊರೆಯುವ ಮತ್ತೊಂದು ಹಂತದ ಕಾರ್ಯಾಚರಣೆ ಕೆಜಿ ಹಳ್ಳಿ ನಿಲ್ದಾಣದಿಂದ ನಾಗಾವರ ನಿಲ್ದಾಣ ವರೆಗಿನ ಸುರಂಗ ಮಾರ್ಗದ ಕೊರೆಯುವ ಕೆಲಸ ಸಂಪೂರ್ಣವಾಗಿದೆ. ಸುರಂಗ ಕೊರೆಯುವ ಯಂತ್ರ ಭದ್ರ ಸೌತ್‌ಬೌಂಡ್ (Bhadra south bound) ಸುರಂಗದಲ್ಲಿ ನಾಗಾವರ ನಿಲ್ದಾಣದಲ್ಲಿ (Nagavara) ಹೊರಬಂದಿರುವುದಾಗಿ ನಮ್ಮ ಮೆಟ್ರೋ ಮಾಹಿತಿ ನೀಡಿದೆ.
ಈ ಟಿಬಿಎಂ ಯಂತ್ರ (TBM machine) ದಿನಾಂಕ 02.04.2024 ರಂದು ಕೆಜಿ ಹಳ್ಳಿ ನಿಲ್ದಾಣದಲ್ಲಿ ಸುರಂಗ ಕೊರೆಯಲು ನಿಯೋಜಿಸಲಾಗಿತ್ತು. ಈ ಪ್ರಗತಿಯೊಂದಿಗೆ ಹಂತ-2ರ ಯೋಜನೆಯ ರೀಚ್-6ರ ಭೂಗತ ಸುರಂಗ ಮಾರ್ಗದಲ್ಲಿ ಟಿಬಿಎಂ ಕಾಮಗಾರಿಯು ಅಂತಿಮವಾಗಿದ್ದು ಇದರೊಂದಿಗೆ ಒಟ್ಟು 20992 ಮೀ ಅಂದರೆ 100% ರಷ್ಟು ಭೂಗತ ಸುರಂಗಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.
ಈ ಮೂಲಕ ರೀಚ್-6ರ ಸುರಂಗ ಮಾರ್ಗಕ್ಕಾಗಿ ಒಟ್ಟಾರೆ ನಿಯೋಜಿಸಲಾದ ಎಲ್ಲಾ 9 ಟಿಬಿಎಂಗಳು ಸೌತ್ ರಾಂಪ್ ಡೈರಿ ಸರ್ಕಲ್‌ನಿಂದ ನಾಗವಾರದ ನಡುವೆ ಭೂಗತ ಸುರಂಗ ಕಾಮಗಾರಿಯನ್ನ ಪೂರ್ಣಗೊಳಿಸಿವೆ.