ನಮ್ಮ ಮೆಟ್ರೋ ರೈಲ್ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ವಹಿಸಿಕೊಂಡಿದೆ. ಇದೀಗ ನಮ್ಮ ಮೆಟ್ರೋ ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ವಿಸ್ತರಗೊಂಡಿದೆ. ಆಗಸ್ಟ್ 29 ರಂದು ನಡೆದ ಉದ್ಘಾಟೆನೆಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿವರು ಭಾಗವಹಿಸಿ ಉದ್ಘಾಟಿಸಿದ್ದಾರೆ. ಹಾಗು ಕೆಂಗೇರಿಯವರಗೆ ವಿಸ್ತರಿಸಿದ ಬೆಂಗಳೂರು ಮೆಟ್ರೋ ಮಾರ್ಗದ ವಾಣಿಜ್ಯ ಕಾರ್ಯಾಚರಣೆ ಸೋಮವಾರದಿಂದ ಆರಂಭವಾಗಲಿದೆ. 7.5 ಕಿ.ಮೀ ಉದ್ದದ ಈ ವಿಸ್ತಾರವು ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ . ಇಡೀ ದೇಶದಲ್ಲಿ ಕೇವಲ ಬೆಂಗಳೂರು ನಗರ ಒಂದೇ ಸುಮಾರು 38% ರಷ್ಟು ಐಟಿ ವಲಯದಲ್ಲಿ ಕೊಡುಗೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ, “ಇಂದು ನಮ್ಮ ಮೆಟ್ರೋ ಲೈನ್ ಉದ್ಘಾಟನೆಯು ನಗರದಲ್ಲಿ ತ್ವರಿತ ಪ್ರಯಾಣ ಮತ್ತು ಸ್ಮಾರ್ಟ್ ಮೊಬಿಲಿಟಿ ಆಯ್ಕೆಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ” ಎಂದು ಹೇಳಿದ್ದಾರೆ.
ನಗರೀಕರಣದ ವಿಧಾನದಲ್ಲಿ ಒಂದು ಮಾದರಿಯ ಬದಲಾವಣೆಯಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾಗರಿಕರಿಗೆ ವಿಶ್ವದರ್ಜೆಯ ಮೂಲಸೌಕರ್ಯವನ್ನು ಒದಗಿಸಲು ಸರ್ಕಾರ ದೃಢ ನಿರ್ಧಾರ ಮಾಡಿದೆ ಎಂದು ಸಚಿವರು ಹೇಳಿದ್ದಾರೆ. ವಿಸ್ತೃತ ಮೆಟ್ರೋ ಮಾರ್ಗವನ್ನು ಪೂರ್ಣಗೊಳಿಸುವಲ್ಲಿ ಮೂರು ವರ್ಷಗಳ ವಿಳಂಬದ ನಂತರ ಇಂದು ಉದ್ಘಾಟನೆ ಯಾಗಿದೆ ಎಂದು ಹೇಳಿದ್ದಾರೆ.
ಭಾನುವಾರ ನಡೆದ ನಮ್ಮ ಮೆಟ್ರೋ ನೇರಳೆ ಮಾರ್ಗದ ಉದ್ಘಾಟನೆಯು ವಿಭಾಗವಾಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 18.1 ಕಿ.ಮೀ ಉದ್ದದ ಮಾರ್ಗದಲ್ಲಿ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ಆಚೆಗೆ ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳು ಎಂಬ ಆರು ಹೊಸ ನಿಲ್ದಾಣಗಳನ್ನು ಹೊಂದಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗವು ಈಗ 26.6 ಕಿ.ಮೀ ಉದ್ದವಾಗಲಿದೆ, 26 ನಿಲ್ದಾಣಗಳು ಮತ್ತು ಕೆಂಗೇರಿ ಕಡೆಗೆ ಹೋಗುವವರಿಗೆ ಸುಲಭವಾಗಲಿದೆ. ನಗರದ ಹೊರಗಿರುವ ನೆಲಮಂಗಲ ಮತ್ತು ತಾವರೆಕೆರೆಯಂತಹ ಪ್ರದೇಶಗಳಿಗೆ ಪ್ರಯಣಿಕರಿಗೆ ಸುಲಭಗೊಳಿಸುತ್ತದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ಪ್ರಯಾಣದ ಸಮಯವನ್ನು ಈ ನಮ್ಮ ಮೆಟ್ರೋ ಮಾರ್ಗದ ಮೂಲಕ 15 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಈ ವಿಭಾಗದ ನಿರ್ಮಾಣವನ್ನು ಫೆಬ್ರವರಿ 2016 ರಲ್ಲಿ ಪ್ರಾರಂಭಿಸಿದ ಕೆಲಸವೂ ಇಂದು ಪೂರ್ಣಗೊಂಡಿದೆ. ನಾಯಂಡನಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ಯಲ್ಲಿ ಪಾರ್ಕಿಂಗ್ ಸೌಲಭ್ಯ ಮತ್ತು ಕೆಂಗೇರಿ ಬಸ್ ಟರ್ಮಿನಲ್ ಮೆಟ್ರೋ ನಿಲ್ದಾಣದಲ್ಲಿ ಎರಡು ಹಂತದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲಾ ಆರು ನಿಲ್ದಾಣಗಳಲ್ಲಿ ಇಂಧನ ಪರಿಣಾಮಕಾರಿ ಎಲ್ ಇಡಿ ದೀಪಗಳನ್ನು ಒದಗಿಸಲಾಗಿದೆ.
ಬೆಳಿಗ್ಗೆ 8 ರಿಂದ 11 ಮತ್ತು ಸಂಜೆ 4:30 ರಿಂದ 7:30 ರ ಗರಿಷ್ಠ ಸಮಯದಲ್ಲಿ ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗೆ ಎಲ್ಲಾ ರೈಲುಗಳು ಚಲಿಸುತ್ತವೆ. ಉಳಿದ ಸಮಯದಲ್ಲಿ ಇತರ ರೈಲುಗಳು ಕೆಂಗೇರಿವರೆಗೆ ಪ್ರಯಾಣಿಸುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒಂಬತ್ತು ಮಾರ್ಗಗಳಲ್ಲಿ ಬೆಳಿಗ್ಗೆ 7 ರಿಂದ 9 ರವರೆಗೆ 35 ಫೀಡರ್ ಬಸ್ ಗಳನ್ನು ನಿರ್ವಹಿಸಲಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣ ದರ 56 ರೂ. ಈ ವಿಸ್ತರಣೆಯು 2021 ರಲ್ಲಿ 75000 ರೈಡರ್ ಶಿಪ್ ಗೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಪ್ರತಿಯೊಂದು ನಿಲ್ದಾಣಕ್ಕೆ ಎಲ್ ಇಡಿ ದೀಪಗಳು, ಎಂಟು ಎಸ್ಕಲೇಟರ್ ಗಳು ಮತ್ತು ನಾಲ್ಕು ಎಲಿವೇಟರ್ ಗಳನ್ನು ಒದಗಿಸಲಾಗಿದೆ. ಛಾವಣಿ-ಮೇಲಿನ ಸೌರ ಸ್ಥಾವರಗಳನ್ನು ಮಾರ್ಚ್ ೨೦೨೨ ರೊಳಗೆ ಸ್ಥಾಪಿಸಲು ಯೋಜಿಸಲಾಗಿದೆ. ಕೆಂಗೇರಿಯಿಂದ ಚಲ್ಲಘಟ್ಟಕ್ಕೆ (2 ಕಿ.ಮೀ) ಮತ್ತಷ್ಟು ವಿಸ್ತರಣೆಯನ್ನು 2022 ಅಥವಾ 2023 ರಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ನಮ್ಮ ಮೆಟ್ರೋ ಹೇಳಿದೆ.
ಮುಂದೆ ರಾಜಾನುಕುಂಟೆ, ರಾಮನಗರ ಮತ್ತು ಮಾಗಡಿಯವರೆಗೂ ಮೆಟ್ರೋ ರೈಲು ಯೋಜನೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಅದಕ್ಕೆ ಬೇಕಾದ ಪ್ಲಾನ್ ಸಿದ್ಧಪಡಿಸುವಂತೆ ಹೇಳಿದ್ಧೇನೆ. ಸಂಚಾರ ದಟ್ಟಣೆ ಇರುವ ಎಲ್ಲಾ ಮಾರ್ಗಗಳಿಗೆ ಯಾವುದೇ ಅಡೆತಡೆ ಇಲ್ಲದೇ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ನಮ್ಮಲ್ಲಿ ದುಡಿಯುವ ದೊಡ್ಡ ವರ್ಗ ಇದೆ. ಅವುಗಳನ್ನ ಗಮನದಲ್ಲಿಟ್ಟುಕೊಂಡು 75 ಸ್ಲಮ್ಗಳಿಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುತ್ತೇವೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.