ಕೊರೊನಾ (coved 19) ಸಮಯದಲ್ಲಿ ಪ್ರಸಾರ ಮಾಡಿದ ಜಾಹೀರಾತುಗಳಿಂದ ಪತಂಜಲಿ ಸಂಸ್ಥೆ (patanjali) ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಹಲವು ಬಾರಿ ಕೋರ್ಟ್‌ಗೆ ಹಾಜರಾಗಲು ಹೇಳಿದ್ರೂ ಬರದಿದ್ದಕ್ಕೆ ಬಾಬಾ ರಾಮ್‌ದೇವ್ (baba ram dev) ವಿರುದ್ಧ ಸುಪ್ರೀಂ ಕೋರ್ಟ್ (supreme court) ಗರಂ ಆಗಿದ್ದು ತರಾಟೆಗೆ ತೆಗೆದುಕೊಂಡಿದೆ.
ಜಾಹೀರಾತು ವಿಚಾರದಲ್ಲಿ ಪತಂಜಲಿ ಸಂಸ್ಥೆಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಗೆ (aacharya balakrishna) ಸುಪ್ರೀಂಕೋರ್ಟ್ ಛಾಟಿ ಬೀಸಿದೆ. ಪತಂಜಲಿ ಸಂಸ್ಥಾಪಕರು ಮಾಡಿದ ಕ್ಷಮಯಾಚನೆಯನ್ನು ಕೋರ್ಟ್ ತಿರಸ್ಕರಿಸುವುದಾಗಿ ಹೇಳಿದೆ. ಕ್ಷಮೆಯಾಚನೆ ಸಾಲದು, ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಬೇಕು ಅಂತ ಹೇಳಿದೆ.
ಈ ಪ್ರಕರಣದಲ್ಲಿ ನಮ್ಮ ಕೋರ್ಟ್ ಆದೇಶಕ್ಕೆ ನೀವೇನು ಬೆಲೆ ಕೊಟ್ಟಿರುವಿರಿ, ನಿಮ್ಮ ಕ್ಷಮೆಯಾಚನೆಗೂ ಅಷ್ಟೇ ಬೆಲೆ ಕೊಡುತ್ತೇವೆ. ನಾಮಕಾವಸ್ತೆಗೆ ಕ್ಷಮೆಯಾಚಿಸಿದಂತಿದೆ. ಏನೋ ತಪ್ಪಿಸಿಕೊಳ್ಳಬೇಕೆಂದು ಇದನ್ನು ಮಾಡಿದಂತಿದೆ. ನಿಮ್ಮ ಅಫಿಡವಿಟ್ (Affidavit) ಒಪ್ಪಲು ನಿರಾಕರಿಸುತ್ತೇವೆ. ನಮ್ಮ ಆದೇಶಗಳನ್ನು ಬೇಕಂತಲೇ ಪದೇ ಪದೇ ಉಲ್ಲಂಘನೆ ಮಾಡಿದ್ದೀರಿ ಎಂದು ಭಾವಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾತ್ರವಲ್ಲದೆ ಪತಂಜಲಿಯಿಂದ ದಾರಿ ತಪ್ಪಿಸುವಂತಹ ಜಾಹೀರಾತು ಬರುತ್ತಿದ್ರೂ ಕೇಂದ್ರ ಸರ್ಕಾರ (central government) ಮತ್ತು ಉತ್ತರಾಖಂಡ್ (uttarakhand) ಅಧಿಕಾರಿಗಳು ಯಾಕೆ ಯಾವ ಕ್ರಮ ಕೈಗೊಂಡಿಲ್ಲ ಅಂತ ನ್ಯಾಯಾಲಯ ಕೇಳಿದೆ.