ಶಿವಮೊಗ್ಗದಲ್ಲಿ (shimogga) ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha shivarajkumar) ಪರವಾಗಿ ಮತಯಾಚನೆ ಭಾಷಣ ಮಾಡುವ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ (shivaraj kumar) ಹೆಣ್ಣು ಮಕ್ಕಳಿಗೆ ಅವಕಾಶ ಕೊಡಿ ,ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನು ಸಿನಿಮಾ ಡೈಲಾಗ್ ಹೊಡೆದಿದ್ದಾರೆ . ಇದಕ್ಕೆ ಸಭೆಯಲ್ಲಿ ನೆರೆದಿದ್ದ ಮತದಾರರು ಕೂಡ ಕೂಗೆಬ್ಬಿಸಿ ಸಂಭ್ರಮ ಪಟ್ಟಿದ್ದಾರೆ.

ಕೂಲಿ ಕೆಲಸದಿಂದ ಅತ್ಯುನ್ನತ ಸ್ಥಾನದ ವರೆಗೂ ಎಲ್ಲ ಮಹತ್ತರ ಜವಾಬ್ದಾರಿಗಳನ್ನು ಮಹಿಳೆಯರು (women) ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮಹಿಳಾ ಅಭ್ಯರ್ಥಿ ಎಂದು ಮೀನಾಮೇಷ ಎಣಿಸದೆ ಗೀತ ಶಿವರಾಜ್ ಕುಮಾರ್ ಗೆ ಅವಕಾಶ ಮಾಡಿಕೊಡಿ. ಅವರ ಬಳಿ ಕೆಲಸ ಮಾಡಿಸುವುದು ನನ್ನ ಜವಾಬ್ದಾರಿ ,ಇದು ನನ್ನ ಗ್ಯಾರೆಂಟಿ ಅಂತ ಶಿವಣ್ಣ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿದ್ದಾರೆ.

ಕಳೆದ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್(jds)ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೀತಾ ಶಿವರಾಜ್ ಕುಮಾರ್ ಸೋಲನುಭವಿಸಿದ್ಧರು. ಈ ಬಾರಿ ಕಾಂಗ್ರೆಸ್ (congress) ಅಭ್ಯರ್ಥಿಯಾಗಿರುವುದರಿಂದ ಗೆಲ್ಲುವ ನಿರೀಕ್ಷೆ ಇದೆ. ಹೀಗಾಗಿ ಕ್ಷೇತ್ರದ ಜನರು ದಯಮಾಡಿ ಶಿವಮೊಗ್ಗದ ಮನೆಮಗಳು ಗೀತಾ ಶಿವರಾಜ್ ಕುಮಾರ್ ಗೆ ಮತ ನೀಡಬೇಕು ಎಂದು ಶಿವಣ್ಣ ಮತದಾರರಲ್ಲಿ ಮನವಿ ಮಾಡಿದ್ದಾರೆ.