Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮೈಸೂರಿನ ಗುಂಬಜ್​ ಮಾದರಿಯ ಬಸ್​ ನಿಲ್ದಾಣ ಹಿಂದೂಗಳಿಗೆ ಒಪ್ಪಿಗೆ ಆಯ್ತಾ ? 

ಪ್ರತಿಧ್ವನಿ

ಪ್ರತಿಧ್ವನಿ

November 25, 2022
Share on FacebookShare on Twitter

ಮೈಸೂರಿನ ಜೆಎಸ್​ಎಸ್​ ಕಾಲೇಜು ಮುಂಭಾಗ ಕೃಷ್ಣರಾಜ ಕ್ಷೇತ್ರದಲ್ಲಿ ನಿರ್ಮಾಣ ಆಗಿದ್ದ ಬಸ್​ ನಿಲ್ದಾಣ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಮೈಸೂರು – ಕೊಡಗು ಬಿಜೆಪಿ ಸಂಸದ ಪ್ರತಾಪ್​ ಸಿಂಹ ಇದು ಮಸಲ್ಮಾನ್​ ಮಾದರಿ, ಈ ಕಟ್ಟಡ ನಿರ್ಮಾಣ ಆಗಿರುವುದು ಅಕ್ರಮವಾಗಿದೆ. ಇದನ್ನು ಒಡೆದು ಹಾಕಬೇಕು. ಅಧಿಕಾರಿಗಳು ಒಡೆದು ಹಾಕದಿದ್ದರೆ ನಾನೇ ಜೆಸಿಬಿ ತಂದು ಈ ಬಸ್​ ನಿಲ್ದಾಣವನ್ನು ತೆರವು ಮಾಡುವ ಕೆಲಸ ಮಾಡುತ್ತೇನೆ ಎಂದು ಗುಡುಗಿದ್ದರು. ಅದು ಮೈಸೂರು ಅರಮನೆಯ ಮೇಲಿರುವ ಇಂಡೋ ಸಾರ್ಸನಿಕ್​​ ಶೈಲಿಯ ಗುಮ್ಮಟ ಎಂದು ಹಲವಾರು ಜನರು ಪ್ರತ್ಯುತ್ತರ ನೀಡಿದ್ದರೂ ಕೇಳದ ಸಂಸದರು ನಾಲ್ಕು ದಿನಗಳ ಗುಡುವು ನೀಡಿದ್ದರು. ಆ ಬಳಿಕ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಬಸ್​ ನಿಲ್ದಾಣ ಒಡೆದು ಹಾಕುತ್ತೇನೆ. ಇದು ಸತ್ಯ ಎಂದು ಗುಡುಗಿದ್ದರು. ಸಂಸದ ಪ್ರತಾಪ್​ ಸಿಂಹ ಆಕ್ರೋಶದ ಬಳಿಕ ಬಿಜೆಪಿ ಶಾಸಕ ಎಸ್​.ಎ ರಾಮದಾಸ್​​ ಕಣ್ಣೀರು ಹಾಕಿದ್ದರು. ಯಾವುದೇ ಅಕ್ರಮ ಮಾಡಿಲ್ಲ. ಇಂಡೋ ಸಾರ್ಸನಿಕ್​ ಶೈಲಿಯಲ್ಲಿ ಅಧಿಕಾರಿಗಳ ಅನುಮತಿ ಬಳಿಕ ನಿರ್ಮಾಣ ಮಾಡಲಾಗಿದೆ ಎಂದು ಅವಲತ್ತುಕೊಂಡಿದ್ದರು. 

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಗುಂಬಜ್​ ಮಾದರಿ ಮೇಲೆ ಕಳಸ ನಿರ್ಮಾಣದ ಬಗ್ಗೆಯೂ ಕೊಂಕು ಮಾತನಾಡಿದ್ದ ಸಂಸದರಿಗೆ ಶಾಸಕ ರಾಮದಾಸ್ ತಿರುಗೇಟು ನೀಡಿದ್ದರು. ಸಂಸದರು ಒಡೆಯುತ್ತೇನೆ ಎಂದ ಮೇಲೆ ಕಳಸ ನಿರ್ಮಾಣ ಮಾಡಿದ್ದಲ್ಲ, ಮೊದಲೇ ನಿರ್ಮಾಣ ಆಗಿತ್ತು ಎಂದು ಗೂಗಲ್​ ಫೋಟೋ ರಿಲೀಸ್​ ಮಾಡಿದ್ದರು. ಶಾಸಕರ ನಡೆಗೆ ನೇರವಾಗಿ ದಾಳಿ ಮಾಡಿದ್ದ ಸಂಸದ ಪ್ರತಾಪ್​ ಸಿಂಹ, ಅಧಿಕಾರಿಗಳು ನೀಡಿರುವ ಅನುಮತಿಯಲ್ಲಿ ಗುಂಬಜ್​ ಮಾದರಿಯೇ ಇಲ್ಲ. ಆ ಬಳಿಕ ಶಾಸಕರ ಪಿಎ ಗುಂಬಜ್​ ಮಾದರಿಯನ್ನು ನೀಡಿದ್ದಾರೆ. ಆದರೆ ಅದರಲ್ಲಿ ಸೀಲು ಸಹಿ ಇಲ್ಲ ಎಂದು ಕಿಚಾಯಿಸಿದ್ದರು. ಇಷ್ಟೆಲ್ಲಾ ಆದ ಬಳಿಕ 10 ಲಕ್ಷ ವೆಚ್ಚದ ಬಸ್​ ನಿಲ್ದಾಣ ಡೆಮಾಲಿಷ್​ ಮಾಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಒಂದು ವಾರದ ಗಡುವು ನೀಡಿದ್ದರು. ಆದರೆ ಯಾವುದೂ ಆದಂತೆ ಕಾಣಿಸುತ್ತಿಲ್ಲ. ಸಂಸದ ಪ್ರತಾಪ್​ ಸಿಂಹ ಕೂಡ ಜೆಸಿಬಿ ತರಲಿಲ್ಲ. ಅದರ ಬದಲಿಗೆ ರಾಮದಾಸ್​ ಕಾಲಿಗೆ ಬಿದ್ದಿದ್ದರು. 

ರಾಮದಾಸ್​ ನೀಡುವ ಸ್ಪಷ್ಟೀಕರಣಕ್ಕೆ ಸಂಸದ ಪ್ರತಾಪ್​ ಸಿಂಹ ತಿರುಗೇಟು ನೀಡುತ್ತಲೇ ಇದ್ದರು. ಅಂತಿಮವಾಗಿ ಸಂಸದರು ನನ್ನನ್ನು ಪಕ್ಷ ಬಿಡಿಸಲು ಈ ರೀತಿ ಕಿರುಕುಳ ಕೊಡುತ್ತಿದ್ದಾರೆ ಎಂದಿದ್ದರು ಶಾಸಕ ರಾಮದಾಸ್​. ಅದಕ್ಕೆ ಮತ್ತೆ ತಿರುಗೇಟು ನೀಡಿದ್ದ ಸಂಸದ ಪ್ರತಾಪ್​​ ಸಿಂಹ, ನಾನು ಶಾಸಕರಿಗೆ ತಿರುಗೇಟು ನೀಡುವಷ್ಟು ಮಟ್ಟಕ್ಕೆ ಬೆಳೆದಿಲ್ಲ. ಶಾಸಕ ರಾಮದಾಸ್​ ಅವರ ಬಳಿ ಇರುವ ಹಣದಿಂದ ನನ್ನನ್ನು ಸುಟ್ಟು ಹಾಕಬಹುದು. ಸ್ವತಃ ನರೇಂದ್ರ ಮೋದಿ ಕೂಡ ಮೈಸೂರಿಗೆ ಬಂದಿದ್ದಾಗ ಅವರ ಬೆನ್ನು ತಟ್ಟಿದ್ದರು ಎನ್ನುವ ಮೂಲಕ ರಾಮದಾಸ್​ ಭ್ರಷ್ಟಾಚಾರ ಮಾಡಿ ಹಣ ಸಂಪಾದನೆ ಮಾಡಿದ್ದಾರೆ ಅನ್ನೋದ್ರ ಜೊತೆಗೆ ಪ್ರಧಾನಿಯನ್ನು ಎಳೆದು ತಂದಿದ್ದರು. ಇದಕ್ಕೆ ಮೌನದ ಉತ್ತರ ನೀಡಿದ್ದ ಶಾಸಕ ರಾಮದಾಸ್​, ಸುದ್ದಿಯನ್ನು ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ನೇರವಾಗಿ ಮುಟ್ಟಿಸಿದ್ದರು. ಇದೀಗ ಎಲ್ಲವೂ ಗಪ್​ಚುಪ್​. ಯಾವ ಮುಸ್ಲಿಂ ಇಲ್ಲ, ಯಾವ ಗುಂಬಜ್​ ಇಲ್ಲ. 

ಸಂಸದ ಪ್ರತಾಪ್​ ಸಿಂಹ ಬಸ್​ ನಿಲ್ದಾಣ ಕೆಡವಲೇ ಬೇಕು ಎಂದಾಗ ವಾಗ್ದಾಳಿ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಯಾವನ್​ ರೀ ಅವನು, ಜನಪ್ರತಿನಿಧಿ ಆದವನಿಗೆ ಜವಾಬ್ದಾರಿ ಇಲ್ವಾ..? ನಿರ್ಮಾಣ ಮಾಡಿರುವ ಬಸ್​ ನಿಲ್ದಾಣ ಒಡೆಯುವ ಹೇಳಿಕೆ ಕೊಟ್ಟಿದ್ದಾನೆ ಎಂದಿದ್ದರು. ಎಸ್​.ಎ ರಾಮದಾಸ್​ ಸಂಸದ ಪ್ರತಾಪ್​ ಸಿಂಹ ಅವರ ಎಲ್ಲಾ ಕಿತಾಪತಿಯನ್ನು ಆರ್​ಎಸ್​ಎಸ್​ ಮುಖಂಡರ ಬಳಿಗೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಆ ಬಳಿಕ ಆರ್​ಎಸ್​ಎಸ್​ ಮುಖಂಡರು ಸಂಸದ ಪ್ರತಾಪ್​ ಸಿಂಹ ಅವರನ್ನು ಕರೆದು ವಾರ್ನ್​ ಮಾಡಿದ್ದಾರೆ ಎನ್ನಲಾಗಿದೆ. ಶಾಸಕ ರಾಮದಾಸ್​ ಅವರ ಬಳಿ ಕ್ಷಮೆ ಕೋರುವಂತೆಯೂ ಸೂಚನೆ ಹೋಗಿದ್ಯಂತೆ. ಇದೇ ಕಾರಣದಿಂದ ಮೈಸೂರಿನ ಗನ್​ ಹೌಸ್​ ಬಳಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಏಕಾಂಗಿಯಾಗಿ ಬಂದಿದ್ದ ಸಂಸದ ಪ್ರತಾಪ್​ ಸಿಎಂ ಶಾಸಕ ರಾಮದಾಸ್​ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದರು. ಆದರೆ ರಾಮದಾಸ್​ ಮಾತ್ರ ಕಿಂಚಿತ್ತು ರಿಯಾಕ್ಷನ್​ ಕೊಡಲಿಲ್ಲ. ಇದೀಗ ಶಂಖದಿಂದ ಬಂದ ತೀರ್ಥ ಎನ್ನುವ ಹಾಗೆ ಸಿಂಹ ಸುಮ್ಮನಾಗಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

Dhananjaya|ಡಾಲಿ ಜೊತೆ ಸುದೀಪ್, ಶಿವಣ್ಣನ ಭಾಂಧವ್ಯ ಹೇಗಿದೆ ಗೊತ್ತಾ?
ಸಿನಿಮಾ

Dhananjaya|ಡಾಲಿ ಜೊತೆ ಸುದೀಪ್, ಶಿವಣ್ಣನ ಭಾಂಧವ್ಯ ಹೇಗಿದೆ ಗೊತ್ತಾ?

by ಪ್ರತಿಧ್ವನಿ
January 27, 2023
ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ
Top Story

ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ

by ಪ್ರತಿಧ್ವನಿ
January 24, 2023
ಪಠಾಣ್‌ ಚಿತ್ರವನ್ನು ಹೊಗಳಿದ ನಟಿ ರಮ್ಯಾ: ದರ್ಶನ್‌ ಅಭಿಮಾನಿಗಳಿಂದ ಅಸಭ್ಯ ದಾಳಿ.!
ಸಿನಿಮಾ

ಪಠಾಣ್‌ ಚಿತ್ರವನ್ನು ಹೊಗಳಿದ ನಟಿ ರಮ್ಯಾ: ದರ್ಶನ್‌ ಅಭಿಮಾನಿಗಳಿಂದ ಅಸಭ್ಯ ದಾಳಿ.!

by ಪ್ರತಿಧ್ವನಿ
January 28, 2023
B. S. Yediyurappa|ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆಲ್ಲಲು ಚಿಂತನೆ ನಡೆದಿದೆ.
ರಾಜಕೀಯ

B. S. Yediyurappa|ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆಲ್ಲಲು ಚಿಂತನೆ ನಡೆದಿದೆ.

by ಪ್ರತಿಧ್ವನಿ
January 30, 2023
Basavaraj Bommai |ರಾಜಕಾಲುವೆ ಮೇಲೆ ಬಿಲ್ಡಿಂಗ್ ಕಟ್ಟಿಸಿ ಅವರೇ ಬೆಂಗಳೂರು ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ
ರಾಜಕೀಯ

Basavaraj Bommai |ರಾಜಕಾಲುವೆ ಮೇಲೆ ಬಿಲ್ಡಿಂಗ್ ಕಟ್ಟಿಸಿ ಅವರೇ ಬೆಂಗಳೂರು ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ

by ಪ್ರತಿಧ್ವನಿ
January 30, 2023
Next Post
ತಮಿಳುನಾಡಿನಲ್ಲಿ ಬೇರೂರಲು ಸಾಂಸ್ಕೃತಿಕ ರಾಜಕಾರಣದ ಮೊರೆ ಹೋದ ಬಿಜೆಪಿ !

ಚುನಾವಣೆ ಸಮೀಪಿಸುತ್ತಿದ್ದಂತೆ ಡಬಲ್‌ ಎಂಜಿನ್‌ ಸರ್ಕಾರ, ಅಭಿವೃದ್ಧಿ ಮಂತ್ರ ಬಿಟ್ಟು ಹಿಂದುತ್ವವನ್ನು ಹಿಡಿದ ಬಿಜೆಪಿ

ಗಡಿ ವಿವಾದ; ಕರ್ನಾಟಕದ ಬಸ್ಸುಗಳಿಗೆ ಕಪ್ಪು ಬಣ್ಣ ಬಳಿದ ಕಿಡಿಗೇಡಿಗಳು

ಗಡಿ ವಿವಾದ; ಕರ್ನಾಟಕದ ಬಸ್ಸುಗಳಿಗೆ ಕಪ್ಪು ಬಣ್ಣ ಬಳಿದ ಕಿಡಿಗೇಡಿಗಳು

ದೆಹಲಿ; ಚಾಂದ್ನಿಚೌಕ್‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ

ದೆಹಲಿ; ಚಾಂದ್ನಿಚೌಕ್‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist