
ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆ ಬಗ್ಗೆ ವಾಟಾಳ್ ನಾಗರಾಜ್ (Watal Nagaraj)ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡ ಒಕ್ಕೂಟ ಬೆಳಗಾವಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹೋರಾಟ ಮಾಡಲು ನಿರ್ಧಾರ ಮಾಡಿದ್ಧೆವೆ. ರಾಜ್ಯ ಆಳ್ತಿರುವ ಸರ್ಕಾರ, ಅಲ್ಲಿನ ಅಧಿಕಾರಿಗಳಿಗೆ ವೋಟ್ಗಾಗಿ ಎಲ್ಲ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮಾಡಿರುವ ಅನ್ಯಾಯ ಬಗ್ಗೆ ಯಾರು ಮಾತನಾಡ್ತಿಲ್ಲ. ಕನ್ನಡಪರ ಸಂಘಟನೆಗಳು ಮುಂದೆ ನಿಂತು ಹೋರಾಟ ಮಾಡ್ತಿದ್ದಾರೆ. ಬೆಳಗಾವಿ ಬೆಳಗಾವಿ ಆಗಿ ಉಳಿದಿದೆ ಅಂದ್ರೆ ಕನ್ನಡಪರ ಸಂಘಟನೆಗಳಿಂದ ಎಂದಿದ್ದಾರೆ.

ಇವತ್ತು ಬೆಳಗ್ಗೆ 11:30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ ಬಂದ್ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ನಟ ರಿಷಬ್ ಶೆಟ್ಟಿ(Rishabh Shetty)ಬಗ್ಗೆ ವಾಟಾಳ್ ಅಸಮಧಾನ ಹೊರಹಾಕಿದ್ದಾರೆ. ಶಿವಾಜಿ (Shivaji)ಪಾತ್ರ ಮಾಡಲು ಹೊರಟಿದ್ದಾನೆ. ಕಾಂತಾರದಿಂದ ದುಡ್ಡು ಹೆಚ್ಚು ಬಂದಿದೆ. ಶಿವಾಜಿ(Shivaji)ಪಾತ್ರ ಮಾಡಿದ್ರೆ ನಮ್ಮ ಜನ ಅಷ್ಟು ಸುಲಭವಾಗಿ ಒಪ್ಪೋದಿಲ್ಲ. ಶಿವಸೇನೆ ಬೇಕಾಕಿಲ್ಲ, ಅವ್ರು ಕರ್ನಾಟಕಕ್ಕೆ ಬರಬೇಕಿಲ್ಲ. ಕರ್ನಾಟಕದಲ್ಲಿ ಶಿವಾಜಿ(Shivaji) ಅವರ ಪ್ರತಿಮೆ ತುಂಬಾ ಇದೆ. ಆದ್ರೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಹೋರಾಟ ಪ್ರತಿಮೆ ಯಾವುದೂ ಇಲ್ಲ ಎಂದಿದ್ದಾರೆ.

ಮೂರು ವರ್ಷಗಳಿಂದ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar)ಹೇಳ್ತಾರೆ, ಮಹಾರಾಷ್ಟ್ರಕ್ಕೆ ಬೆಳಗಾವಿ ಹೋಗೊದಾದ್ರೆ, ನಾನು ಮೊದಲು ಹೋಗ್ತಿನಿ ಅಂತ ಹೇಳಿದ್ದಾರೆ. ಹೀಗಾಗಿ ನಾವು ಹೋರಾಟ ಮಾಡಿ ಹೇಳಿದ್ವಿ, ಈಗಲೇ ಹೋಗಿ ಅಂತ. ಅವರಿಗೂ ಮರಾಠಿ ಅವರು ಬೇಕು. ಬಿಜೆಪಿ, ಕಾಂಗ್ರೆಸ್(BJP and Congress )ಅವರಿಗೂ ಮರಾಠರು ಬೇಕು. ಸಿದ್ದರಾಮಯ್ಯ(Siddaramaiah)ಅವರೇ ಚಿಂತೆ ಮಾಡಿ. ಬೆಳಗಾವಿ ಹೋಗುತ್ತೆ, ನಿಪ್ಪಾಣಿಯಲ್ಲಿ ನೂರಾರು ಮರಾಠಿ ಹೆಸರು ಇದೆ. ಹೀಗಾಗಿ ಬೇಗ ಎಚ್ಚರ ವಹಿಸಿ. ಬೆಳಗಾವಿಯಲ್ಲಿ ಏನಾಗ್ತಿದೆ ಅಂತ ಅರಿವು ಇರಲಿ. MES ನಿಷೇಧ ಮಾಡ್ಬೇಕು, ಕರ್ನಾಟಕದಿಂದ MES ಹೋಗ್ಬೇಕು ಎಂದು ಆಗ್ರಹಿಸಿದ್ದಾರೆ.












